ಸ್ಫೂರ್ತಿ
ಹಗಲಿರುಳು ದುಡಿದರು ಧನಿಯಾದವಳು ಹೆಣ್ಣು
ಸೋತೆ ಎಂದು ಕುಗ್ಗುವುದಿಲ್ಲ
ಗೆದ್ದೆ ಎಂದು ಹಿಗ್ಗುವುದಿಲ್ಲ
ಪುಣ್ಯ ಪುರಾಣದಲಿ ದೇವತೆಗಳು
ರಾಕ್ಷಸರನ್ನು ಸಂಹರಿಸಲು
ದೇವಿಯನ್ನು ಸಜ್ಜುಗೊಳಿಸಿದರು
ಝಾನ್ಸಿ, ಚೆನ್ನಮ್ಮ, ಓಬವ್ವ ಮೆಟ್ಟಿ ನಿಂತರು ಇತಿಹಾಸ ಸೃಷ್ಟಿಸಿದರು
ಸಂಗೀತ ಲೋಕದಲ್ಲಿ ಸುಬ್ಬಲಕ್ಷ್ಮಿ
ಓಟದಲ್ಲಿ ಅಶ್ವಿನಿ ಉಷಾ
ಸೌಂದರ್ಯ ಲೋಕದಲ್ಲಿ ಲೆಕ್ಕವಿಲ್ಲ ದಷ್ಟು ಎಲ್ಲಾ ಕ್ಷೇತ್ರದಲ್ಲೂ ಇಹಳು
ಇದೇನೂ ಹೊಸದಲ್ಲ ವರ್ಣಿಸಲು -ಹೊಗಳಲು
ಪುಸ್ತಕ -ಭಾಷಣದಲ್ಲಿ ಸೀಮಿತ ಮಾತ್ರ ಶೋಕೇಸಿನ ಗೊಂಬೆಯಂತೆ
ಆದರೂ — –
ವಿಚಲಿತಳಾಗದೆ ಸಾಗುತ್ತಿರುವಳು ಅಂಜದೆ – ಅಳುಕದೆ, ದಣಿಯದೆ ದುಡುಯುತ್ತಿರುವಳು
ಮಿತಿ ದಾಟಿದಾಗಲೇ ಇತಿಹಾಸ ಸೃಷ್ಟಿ
ಮುಂದಿನ ಪೀಳಿಗೆಗೆ ಸ್ಫೂರ್ತಿ
ಹೆಣ್ಣು
ಆದರೇನು ಅವಳ ಕಣ್ಣೀರಿಗೆ ಬೆಲೆ ಎಲ್ಲಿದೆ? ದುಡುಮೆಗೆ? ಸಹಕಾರ ಎಲ್ಲಿ?
ಬೇಲಿಯೇ ಎದ್ದು ಹೊಲ ಮೇಯಿದಂತೆ
ಎಲ್ಲಿದೆ ರಷ್ಕಣೆ??
–ಮಾಜಾನ್ ಮಸ್ಕಿ