ಗುತ್ತಿಗೆದಾರರು ಸೂಕ್ತ ಗುಣಮಟ್ಟದಿಂದ ಕಾಮಗಾರಿ ನಿರ್ವಹಸಿ-ವೀಜಯಲಕ್ಷ್ಮಿ ಪಾಟೀಲ್

 

e-ಸುದ್ದಿ, ಮಸ್ಕಿ

ಪಟ್ಟಣದ ಬಸವೇಶ್ವರ ವೃತ್ತದಿಂದ ಪರಾಪೂರ ರಸ್ತೆವರೆಗೆ ಸಿಸಿ ರಸ್ತೆ ನಿರ್ಮಿಸಲಾಗುತ್ತಿದೆ ಗುತ್ತಿಗೆದಾರರು ಗುಣಮಟ್ಟದಿಂದ ಕಾಮಗಾರಿ ನಿರ್ವಹಸಿ ಎಂದು ಪುರಸಭೆ ಅಧ್ಯಕ್ಷೆ ವಿಜಯಲಕ್ಷ್ಮಿ ಬಸನಗೌಡ ಪಾಟೀಲ್ ಸೂಚಿಸಿದರು.
ಪಟ್ಟಣದ ಬಸವೇಶ್ವರ ನಗರದ ಬಸವೇಶ್ವರ ಮೂರ್ತಿ ಬಳಿ ಸೊಮವಾರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‍ಡಿಬಿ) ಯೋಜನೆಯಡಿ 25 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಪಟ್ಟಣದ ಅಭಿವೃದ್ಧಿಗಾಗಿ ಸರ್ಕಾರದಿಂದ ಸಾಕಷ್ಟು ಹಣ ಬಿಡುಗಡೆಯಾಗಿದ್ದು, ಗುತ್ತಿಗೆದಾರರು ಕೆಲಸಗಳನ್ನು ನಿಗದಿತ ಅವಧಿಯೊಳಗೆ ಒಳ್ಳೆಯ ಗುಣಮಟ್ಟದ ಕಾಮಗಾರಿಯನ್ನು ಮಾಡುವಂತೆ ತಿಳಿಸಿದರು.

ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ ಕಳೆದ 12 ವರ್ಷ ಶಾಸಕರ ಅವಧಿಯಲ್ಲಿ ಪಟ್ಟಣದ ಎಲ್ಲಾ ವಾರ್ಡುಗಳಲ್ಲಿ ಸಿಸಿ ರಸ್ತೆ , ಚರಂಡಿ ಸೇರಿದಂತೆ ವಾರ್ಡುಗಳಿಗೆ ಬೇಕಾಗಿರುವ ಮೂಲಭೂತ ಸೌಕಾರ್ಯಗಳನ್ನು ಕಲ್ಪಿಸಲಾಗಿದೆ ಎಂದರು. ಬಿಜೆಪಿ ಹಿರಿಯ ಮುಖಂಡ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ್, ಮಲ್ಲನಗೌಡ, ಬನಸಗೌಡ ಪೊಲೀಸ್ ಪಾಟೀಲ್, ಡಾ.ಬಿ.ಹೆಚ್.ದಿವಟರ್, ಆದಯ್ಯಸ್ವಾಮಿ ಕ್ಯಾತ್ನಟ್ಟಿ, ಕರಿಬಸಯ್ಯಸ್ವಾಮಿ, ವೆಂಕಟರಡ್ಡಿ ಹೂವಿನಭಾವಿ, ವಿಜಯ ಹೂವಿನಭಾವಿ, ಸಿದ್ದನಗೌಡ ಪಾಟೀಲ್, ರಾಜಾ ನಾಯ್ಕ್, ಪುರಸಭೆ ಮಾಜಿ ಉಪಾಧ್ಯಕ್ಷ ರವಿಗೌಡ, ಎಂ.ಅಮರೇಶ, ರಂಗಪ್ಪ ಅರಕೇರಿ, ಶರಣಯ್ಯ ಸೊಪ್ಪಿಮಠ, ಹುಲುಗಪ್ಪ ಸೇರಿದಂತೆ ಇತರರಿದ್ದರು.

Don`t copy text!