ಹಸ್ಮಕಲ್‍ನಲ್ಲಿ ಅದ್ದೂರಿಯಾಗಿ ನಡೆದ ಖಾನ್‍ಸಾಹೇಬ್‍ತಾತನ ಉರುಸು

e-ಸುದ್ದಿ, ಮಸ್ಕಿ
ತಾಲೂಕಿನ ಹಸ್ಮಕಲ್ ಗ್ರಾಮದಲ್ಲಿ ಖಾನ್‍ಸಾಹೇಬ ತಾತನ ಉರುಸು ಅದ್ದೂರಿಯಾಗಿ ಬುಧುವಾರ ನಡೆಯಿತು.
ಉರುಸು ನಿಮಿತ್ತ ಸಂತೆಕಲ್ಲೂರಿನಿಂದ ಗಂಧವನ್ನು ತರಲಾಯಿತು. ಗ್ರಾಮದ ಹೊರವಲಯ ಗಂಧದ ಕಟ್ಟೆಯಿಂದ ಖಾನ್‍ಸಾಹೇಬ ತಾತಾನ ದರಗಾದವರೆಗೂ ಅದ್ದೂರಿಯಾಗಿ ಗಂಧದ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತು, ಹಗಲು ವೇಷಗಾರರ ನೃತ್ಯ ಗಮನ ಸೆಳೆದವು. ಬಳಿಕ ದರಗಾದಲ್ಲಿ ಧಾರ್ಮಿಕ ವಿಧಿ-ವಿಧಾನಗಳಂತೆ ಪೂಜೆ ಕಾರ್ಯಕ್ರಮ ನಡೆಸಲಾಯಿತು.


ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಸಂತೆಕಲ್ಲೂರಿನ ಘನಮಠೇಶ್ವರ ಮಠದ ಶ್ರೀಗುರುಬಸವ ಮಹಾಸ್ವಾಮಿಗಳು ಮಾತನಾಡಿ, ಹಸ್ಮಕಲ್ ಖಾನ್‍ಸಾಹೇಬ ದರಗಾ ಬಾವೈಕ್ಯತೆಯ ಪ್ರತೀಕ. ಇಲ್ಲಿ ಯಾವುದೇ ಜಾತಿ, ಧರ್ಮ ಬೇಧಗಳಿಲ್ಲದೇ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತವೆ. ಇದಕ್ಕೆ ಖಾನ್‍ಸಾಹೇಬ ತಾತನ ಪವಾಡ ಮಹಿಮೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ದಮ್ಮ ಯಂಕೋಬ, ಸದಸ್ಯರಾದ ನೀಲಮ್ಮ, ಸಿದ್ದಮ್ಮ ಬೋವಿ, ಶಿವರಾಜ ಬಿಸ್ನಾಳ, ಮಲ್ಲಪ್ಪ, ಮುಖಂಡರಾದ ಪಂಪಯ್ಯಸ್ವಾಮಿ, ಡಾ.ಖಾನ್‍ಸಾಬ್, ಬಸವರಾಜ ಭೋವಿ, ಮಶೇಕ್‍ಸಾಬ್ ಹೊಸಮನಿ ಸೇರಿ ಇತರರು ಇದ್ದರು.

Don`t copy text!