ಮಹಿಳೆ ಸದೃಢವಾಗಿದ್ದರೆ ಸಮಾಜ ಸದೃಢವಾಗಿರಲು ಸಾಧ್ಯ-ಸೌಮ್ಯ ಗುಂಡಳ್ಳಿ


e-ಸುದ್ದಿ, ಮಸ್ಕಿ
ಪ್ರತಿಯೊಬ್ಬ ಮಹಿಳೆಯರು ಉತ್ತಮ ಆರೋಗ್ಯ ಹೊಂದಿದ್ದಾಗ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಮಹಿಳಾ ವೈದ್ಯೆ ಸೌಮ್ಯ ಗುಂಡಳ್ಳಿ ಹೇಳಿದರು.
ಪಟ್ಟಣದ ವಿವಿಧ ಮಹಿಳಾ ಮಂಡಳಿಗಳ ಸಯುಂಕ್ತ ಆಶ್ರಯದಲ್ಲಿ ಮಂಗಳವಾರ ಜರುಗಿದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಹಿಳೆಯರಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಕಾಯಿಲೆಗಳಾದ ಸ್ತನ ಕ್ಯಾನ್ಸರ್, ಗರ್ಭಕೋಶ ಕ್ಯಾನ್ಸರ್ ಮತ್ತು ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಉಂಟಾಗುವ ಹಾರ್ಮೊನಗಳ ಬದಲಾವಣೆ ಬಗ್ಗೆ ಜಾಗೃತವಾಗಿರಬೇಕು ಮತ್ತು ಕಾಲ ಕಾಲಕ್ಕೆ ತಕ್ಕಂತೆ ತಪಾಸಣೆ ಮಾಡಿಸಿಕೊಂಡು ಉತ್ತಮ ಆರೋಗ್ಯವಂತಾಗಬೇಕೆಂದು ಸಲಹೆ ನೀಡಿದರು.
ಉದ್ಯಮಿ ಪ್ರಕಾಶ ಧಾರಿವಾಲ ಮಾತನಾಡಿ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ರೀಢಾಕೂಟ ಹಾಗೂ ನೃತ್ಯದಲ್ಲಿ ಭಾಗವಹಿಸಿ ಪ್ರತಿಭೆ ತೊರಿಸುವ ಮೂಲಕ ಹೊಸ ಬದಲಾವಣೆಗೆ ಮಹಿಳೆಯರು ನಾಂದಿ ಹಾಡಿದ್ದಾರೆ ಎಂದು ಶುಭ ಆರೈಸಿದರು.


ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ಮಾತನಾಡಿ ಮಹಿಳೆ ಅಬಲೆ ಅಲ್ಲ. ಈಗ ಅವಳು ಸಬಲಳಾಗಿದ್ದಾಳೆ. ಮಹಿಳೆಯರು ಎಲ್ಲಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರು ಹೆಚ್ಚು ಹೆಚ್ಚು ಭಾಗವಹಿಸಬೇಕು ಎಂದರು.
ಪುರಸಭೆ ಅಧ್ಯಕ್ಷೆ ವಿಜಯಲಕ್ಷ್ಮೀ ಬಸನಗೌಡ ಪಾಟೀಲ, ಶಿಕ್ಷಕಿ ರಾಜೇಶ್ವರಿ ಹಿರೇಮಠ, ಚಂದ್ರಕಲಾ ದೇಶಮುಖ ಮಾತನಾಡಿದರು. ಪೊಲೀಸ್ ಇಲಾಖೆ, ವೈದೈಕೀಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರನ್ನು ಸತ್ಕರಿಸಿದರು.
ಪತಂಜಲಿ ಮಹಿಳಾ ಯೋಗ ಸಮಿತಿ, ಸಿರಿಗನ್ನಡ ವೇದಿಕೆ ಮಹಿಳಾ ಘಟಕ, ಕರ್ನಾಟಕ ಜಾನಪದ ಪರಿಷತ್ ಮಹಿಳಾ ಘಟಕ, ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕಗಳು ಕಾರ್ಯಕ್ರಮವನ್ನು ಆಯೋಜಿಸಿದ್ದರು.

Don`t copy text!