ಯಾಕೆ ನಗತೀಯ ಶಿವನೆ
ನೀನೆ ಕೊಟ್ಟೆ ಆಕಾರ ಜಗಕೆ
ನಿನಗೇ ಆಕಾರ ಕೊಟ್ಟು ನಿಲ್ಲಿಸಿದೆ ಈ ಜಗ
ಪ್ರಾಣ ನೀ ಕೊಟ್ಟೆ ಶಿವನೆ
ಇಂದು ಪ್ರಾಣಪ್ರತಿಷ್ಟೆ
ನಿನಗೆ ಮಾಡತಿದೆ ಈ ಜಗ
ಇರಲು ಆಶ್ರಯ ನೀ ಕೊಟ್ಟೆ ಶಿವನೆ
ಇಂದು ನಿನಗೇ ಆಲಯಗಳಲಿ ಬಂಧಿಸಿದೆ ಈ ಜಗ
ಸಕಲಕೆ ಅನ್ನ ನೀ ಕೊಟ್ಟೆ ಶಿವನೆ
ಇಂದು ನಿನಗೆ ಬಟ್ಟಲುಗಳಲಿ ಅನ್ನವಿಟ್ಟು ನೀಡುತಿದೆ ಈ ಜಗ
ಏಕೆ ನಗುವೆ ಶಿವನೆ..
ನಾನೆಂಬ ಹಮ್ಮು ಅದನೂ ನೀನೆ ಕೊಟ್ಟೆ ಅಲ್ಲವೆ
ಹೊರಗೆ ಬೆಳಕನಿತ್ತು ಒಳಗೇಕೆ
ಕತ್ತಲೆಯನಿಟ್ಟೆ
ನನ್ನೊಳಗೂ ಇಳಿದು ಬಾ ಶಿವನೆ ಇಳಿದು ಬಾ….
ಸುನಿತಾ ಮೂರಶಿಳ್ಳಿ ಧಾರವಾಡ.9986437474