ತೆರಿಗೆ ಗುರಿ ಮುಟ್ಟದ ಪುರಸಭೆ, ಶೇ,50ರಷ್ಟು ತೆರಿಗೆ ಬಾಕಿ

 

e-ಸುದ್ದಿ ವಿಶೇಷ
ಮಸ್ಕಿ ಪಟ್ಟಣದಲ್ಲಿದ್ದ ಗ್ರಾ.ಮ ಪಂಚಾಯತಿ ಪುರಸಭೆಯಾಗಿ ಮೇಲ್ದರ್ಜೆಗೇರಿದ ಪರಿಣಾಮ ಗ್ರಾಮದ ಅಭಿವೃದ್ದಿಗಿಂತ ಸಾರ್ವಜನಿಕರಿಗೆ ತೆರಿಗೆ ಋಣಭಾರ ಹೆಚ್ಚಿಸಿದೆ. ಇದರಿಂದಾಗಿ ಬಹುತೇಕರು ತೆರಿಗೆ ಕಟ್ಟದೆ ಮುಂದೇ ನೋಡೋಣ ಎನ್ನುವ ತಂತ್ರ ಹೂಡಿದ್ದು. ವಾರ್ಷಿಕವಾಗಿ 2020-21ನೇ ಸಾಲಿನಲ್ಲಿ ಸಾರ್ವಜನಿಕರಿಂದ ಕೇವಲ ಶೇಕಡಾ 50% ರಷ್ಟು ತೆರಿಗೆ ಪಾವತಿಯಾಗಿದೆ ಇದರಿಂದ ಪುರಸಭೆ ಆದಾಯಕ್ಕೆ ಕೊಕ್ಕೆ ಬಿದಿದ್ದೆ.
ಕಳೆದ 5 ವರ್ಷಗಳ ಹಿಂದೆ ಪುರಸಭೆಯಾದಾಗ ಸರ್ಕಾರದಿಂದ ಸಾಕಷ್ಟು ಅನುದಾನ ಬರುತ್ತದೆ. ಪಟ್ಟಣ ಅಭಿವೃದ್ದಿಯಾಗುತ್ತದೆ ಎಂದು ಕನಸು ಕಂಡವರು ಈಗ ಭ್ರಮನಿರ¸ನÀರಾಗಿದ್ದಾರೆ. ಮೊದಲು ಪುರಸಭೆಗೆ ಚುನಾವಣೆ ನಡೆದು ಸದಸ್ಯರು ಆಯ್ಕೆಯಾಗಿ ಅಧ್ಯಕ್ಷ, ಉಪಾಧ್ಯಕ್ಷರು ಆಯ್ಕೆಯಾದರು. ಆಡಳಿತ ನಡೆಸಿದ ಪೌರ ಸದಸ್ಯರು ಪಟ್ಟಣದ ಅಭಿವೃದ್ಧಿಗಾಗಿ ಸರ್ಕಾರ ತೆರಿಗೆ ಹೆಚ್ಚಳ ಮಾಡಿದ್ದ ನಿರ್ಧಾರವನ್ನು ವಿರೋಧಿಸದೇ ನೆಪ ಮಾತ್ರಕ್ಕೆ ಪತ್ರಗಳನ್ನು ಬರೆದು ತೆರಿಗೆ ಕಡಿತಗೊಳಿಸುವಂತೆ ಮನವಿ ಮಾಡಿದ್ದರು.
ಆದರೆ ಗ್ರಾ.ಪಂ. ತೆರಿಗೆಗೂ. ಪುರಸಭೆ ತೆರಿಗೆಗೂ ಅಜಗಜಾಂತರ ಹೆಚ್ಚಳವಾಗಿದ್ದು ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿತು. ಇದರಿಂದ ಸಾರ್ವಜನಿಕರು ತಮ್ಮ ಆಸ್ತಿಗಳಿಗೆ ತೆರಿಗೆ ಪಾವತಿ ಮಾಡಲು ಈಗಲೂ ಹಿಂದೇಟು ಹಾಕುತ್ತಿದ್ದಾರೆ.
ತೆರಿಗೆ ಬಾಕಿ: ಮಸ್ಕಿ ಪುರಸಭೆ ವ್ಯಾಪ್ತಿಯಲ್ಲಿನ ಒಟ್ಟು 13 ಸಾವಿರ ಆಸ್ತಿಗಳಿಂದ ಸುಮಾರು ಒಂದು ಕೋಟಿಗೂ ಅಧಿಕ ತೆರಿಗೆ ಪಾವತಿಯಾಗಬೇಕು ಆದರೆ ಕೇವಲ 55 ಲಕ್ಷ ಮಾತ್ರ ವಸೂಲಾಗಿದೆ. ಅಲ್ಲದೇ ಪಟ್ಟಣದ ಮನೆಗಳಿಗೆ ನೀರು ಒದಗಿಸುವ ಸುಮಾರು 2000 ನಳಗಳ ಸಂಪರ್ಕಗಳಿಗೆ ಇದರಿಂದ 43ಲಕ್ಷ ತೆರಿಗೆ ಬರಬೇಕು. ಆದರೆ 37 ಲಕ್ಷ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಒಟ್ಟಾರೆ ಎಲ್ಲಾ ಮೂಲಗಳಿಂದ ಪುರಸಭೆಗೆ ಇನ್ನು ಸುಮಾರು ಶೇಕಡಾ 50 ರಷ್ಟು ತೆರಿಗೆ ಬಾಕಿ ಇದೆ.
ಅನಿವಾರ್ಯ: ಪುರಸಭೆ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಬ್ಯಾಂಕ್‍ಗಳಲ್ಲಿ ಸಾಲ ಪಡೆಯುವವರು, ನಿವೇಶನ ಮಾರಟ ಹಾಗೂ ಕೊಂಡುಕೊಳ್ಳುವವರು ಅನಿವಾರ್ಯವಾಗಿ ಸದ್ಯದ ಮಟ್ಟಿಗೆ ತಾತ್ಕಲಿಕ ತೆರಿಗೆ ಕಟ್ಟಿ ಕೆಲಸ ಮಾಡಿಸಿಕೊಳ್ಳುತ್ತಿರುವ ಉದಾರಹಣೆ ಸಾಕಷ್ಟು ನಡೆದಿವೆ.
ಹೆಚ್ಚು ತೆರಿಗೆ: ಲಿಂಗಸುಗೂರು, ಸಿಂಧನೂರು, ಇಳಕಲ್ಲ, ಕುಷ್ಟಗಿ ನಗರಗಳಲ್ಲಿ ತೆರಿಗೆ ದರ ಒಂದು ಅಂದಾಜಿನಲ್ಲಿದ್ದರೆ ಮಸ್ಕಿ ಪಟ್ಟಣದ ತೆರಿಗೆ ಇತರ ಪಟ್ಟಣಗಳಿಗಿಂತ 50 ಪಟ್ಟು ಹೆಚ್ಚಳ ಇದೆ. ಆದ್ದರಿಂದ ಸಾರ್ವಜನಿಕರು ಸಾಕಷ್ಟು ಬಾರಿ ಅಧಿಕಾರಿಗಳಿಗೆ ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ ಆದ್ದರಿಂದ ತೆರಿಗೆ ಸಂಗ್ರಹಕ್ಕಿರುವ ದೊಡ್ಡ ಅಡ್ಡಿಯಾಗಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಈಗಲಾದರೂ ಪುರಸಭೆ ಆಡಳಿತ ಮಂಡಳಿ ಎಚ್ಛೆತ್ತು ಸಾರ್ವಜನಿಕರ ಆಸ್ತಿ ತೆರಿಗೆ ಬಾರ ಕಡಿಮೆ ಮಾಡಿ ಸಕಾಲಕ್ಕೆ ತೆರಿಗೆ ಪಾವತಿ ಮಾಡಲು ಸಾರ್ವಜನಿಕರಿಗೆ ಅನೂಕೂಲ ಮಾಡಿಕೋಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
————————————

ಪುರಸಭೆ ಪ್ರದೇಶದಲ್ಲಿ ಆಸ್ತಿಗಳ ತೆರಿಗೆ ಹೆಚ್ಚು ಇರುವುದರಿಂದ ಸಾರ್ವಜನಿಕರಿಗೆ ಆಸ್ತಿ ತೆರಿಗೆಗಳನ್ನು ಪಾವತಿ ಮಾಡಲು ಕಷ್ಟವಾಗುತ್ತಿದೆ. ಆದ್ದರಿಂದ ಸರ್ಕಾರ ತೆರಿಗೆಗಳನ್ನು ಪರಿಷ್ಕರಿಸಿ ಜನರಿಗೆ ಸಕಾಲದಲ್ಲಿ ಪಾವತಿ ಮಾಡುವ ಹಾಗೆ ಅನೂಕೂಲ ಮಾಡಬೇಕು
ಅಶೋಕ ಮುರಾರಿ. ಕರವೇ ತಾಲೂಕು ಅಧ್ಯಕ್ಷ ಮಸ್ಕಿ
————————–
ಕೋಟ್-2
ಪುರಸಭೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಪಾವತಿ ಮಾಡಲು ರಿಯಾಯ್ತಿ ನೀಡಿ ಅವಕಾಶ ಮಾಡುತ್ತೇವೆ. ಅಲ್ಲದೇ ಆಸ್ತಿ ತೆರಿಗೆ ಹೆಚ್ಚಾಗಿದೆ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ. ಇದು ಮೇಲಾಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ಆದಷ್ಟು ಬೇಗ ತೆರಿಗೆ ಕಡಿತವಾಗುವ ವಿಶ್ವಾಸವಿದೆ.
ಹನುಮಂತಮ್ಮ ನಾಯಕ ಪುರಸಭೆ ಮುಖ್ಯಾಧಿಕಾರಿ ಮಸ್ಕಿ.

Don`t copy text!