ಶಿವರಾತ್ರಿ ಪ್ರಯುಕ್ತ ಮಲ್ಲಿಕಾರ್ಜುನ ದರ್ಶನಕ್ಕೆ ಭಕ್ತರ ದಂಡು

e-ಸುದ್ದಿ, ಮಸ್ಕಿ
ಶಿವರಾತ್ರಿ ಪ್ರಯುಕ್ತ ಎರಡನೇ ಶ್ರೀಶೈಲವೆಂದು ಪ್ರಸಿದ್ದಿ ಪಡೆದ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಮಸ್ಕಿ ಪಟ್ಟಣ ಸೇರಿದಂತೆ ಸುತ್ತಮೂತ್ತಲಿನ ಜನ ಗುರವಾರ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಭಾಗ್ಯ ಪಡೆದರು.
ಬೆಳಿಗ್ಗೆ ಬೆಟ್ಟದ ಮೇಲಿರುವ ಮಲ್ಲಿಕಾರ್ಜುನ ಹಾಗೂ ಪಟ್ಟಣದ ಮುಖ್ಯ ಬೀದಿಯಲ್ಲಿರುವ ಮಲ್ಲಿಕಾರ್ಜುನ ಎರಡು ದೇವರಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.
ಸಂಜೆ ಶಿವರಾತ್ರಿ ಅಂಗವಾಗಿ ಮಸ್ಕಿ ಮುಖ್ಯ ಬೀದಿಯಲ್ಲಿರುವ ಮಲ್ಲಿಕಾರ್ಜುನ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಮಹಿಳೆಯರು, ಮಕ್ಕಳು ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಆಗಮಿಸಿ ಹಣ್ಣು ಕಾಯಿ ಅರ್ಪಿಸಿದರು. ಬೆಳಿಗಿನಿಂದ ಉಪವಾಸ ವೃತ ಆಚರಿಸಿದ ಭಕ್ತರು ಮಲ್ಲಿಕಾರ್ಜುನ ದೇವರ ದರ್ಶನ ಪಡೆದು ನಂತರ ಹಣ್ಣು, ಹಂಪಲು ಸೇವಿಸುವ ಮೂಲಕ ಉಪವಾಸ ವೃತ ಮುಗಿಸಿದರು.
ಮಸ್ಕಿ, ಶಂಕರನಗರ ಕ್ಯಾಂಪ್, ಗುಡದೂರು, ಹಸಮಕಲ್, ಮೆದಕಿನಾಳ, ಹಾಲಪೂರು ಸೇರಿದಂತೆ ಸುತ್ತಮೂತ್ತಲಿನ ಭಕ್ತರು ಆಗಮಿಸಿ ಮಲ್ಲಿಕಾರ್ಜುನ ದೇವರ ದರ್ಶನ ಪಡೆದುಕೊಂಡರು.

Don`t copy text!