ಬಸವ ನಿಧಿ

ಬಸವ ನಿಧಿ

ಬಸವಾ ಜಗಕೆ ಮಾದರಿ ನೀವು
ಭಕ್ತಿಗೆ ಪ್ರಮಥರು ನೀವು
ಮುಕ್ತಿ ಪಥವ ತೋರಿದವರು
ಷಟ್ಸ್ಥಲಕೆ ಓಂ ಕಾರ
ಹಾಡಿದವರು
ಶಿವಾಗಮಗಳಿಗೆ ಹೊಸ
ಭಾಷ್ಯ ಬರೆದವರು
ಸಾಧಕ್ಯ ಸಾದಿಸಿದವರು
ಸದ್ಯೋಜಾತರು ನೀವು
ಕೀರ್ತಿ ಶರೀರಧಾರಿಗಳು
ನಡೆ ನುಡಿಯಲಿ ನೀವು
ಜವೆ ಕಾಳಿನಷ್ಟು
ಕೊರತೆಯಾಗದವರು
ಜಗದಿ ಅನುಶೃತಗೊಂಡ
ಜಗದ್ವಂದ್ಯರು ನೀವು
ಅಘಟಿತ ಚರಿತರು
ಬಸವಾದಿ ಪ್ರಮಥರು
ವಿಜಯಮಹಾಂತೇಶ

-ಸವಿತಾ ಮಾಟೂರು, ಇಲಕಲ್

Don`t copy text!