ಎತ್ತರದ ನಿಲುವು

(ಪೂಜ್ಯ ಶ್ರೀಮಾತೆ ಮಹಾದೇವಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ಈ ಪುಟ್ಟ ಕವಿತೆ)

ಎತ್ತರದ ನಿಲುವು

ಎತ್ತರದ ನಿಲುವು
ಎಲ್ಲೆಡೆ ಗೆಲವು
ಮುಖದಲ್ಲಿ ಮಂದಹಾಸ
ಅರಳಿದ ಸೊಬಗು

ಹಿಮಾಲಯದ ಹೋಲಿಕೆ
ಅದಕ್ಕೂ ಮಿಗಿಲಾಗಿ ಸಾಧನೆ
ಅದ್ಭುತ ಮಾತೃ ಹೃದಯಿ

ನೀವುಸರಳಸ್ವಭಾವ
ತುಂಬಾ ವಿರಳ ಅಷ್ಟೇ ನಿರಾಳ
ಅದೇಕೋ ಅಭಾವ
ನೀವಿಲ್ಲದೆ ಈಲೋಕ

ಅಪರೂಪದ ಜೀವನ
ಅನಂತ ಪಾವನ
ಮಾತೆ ಪ್ರಿಯೆಯ ಮನವ
ತುಂಬಿದ ಮಾತೆ

ಕವಿತಾ ಮಾಳಗಿ, ಕಲಬುರ್ಗಿ

 

Don`t copy text!