ಕಡೆಗೀಲಿಲ್ಲದ ಬಂಡಿ
ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಬುದೆ?
ಕಡೆಗೀಲು ಬಂಡಿಗಾಧಾರ.
ಈ ಕಡುದರ್ಪವೇರಿದ ಒಡಲೆಂಬ ಬಂಡಿಗೆ
ಮೃಢಭಕ್ತರ ನುಡಿಗಡಣವೆ ಕಡೆಗೀಲು ಕಾಣಾ! #ರಾಮನಾಥ.
-ಶರಣ_ಜೇಡರ_ದಾಸಿಮಯ್ಯನವರು
ಭಾವಾರ್ಥ-
ಕಡೆಗೀಲಿಲ್ಲದ_ಬಂಡಿ_ಹೊಡೆಗೆಡೆಯದೆ_ಮಾಣ್ಬುದೆ.?
ರೈತನ ಎತ್ತಿನ ಬಂಡಿಗೆ ಕಡೆಗೀಲು (ಕಡಾಣಿ) ಇಲ್ಲದಿದ್ದರೆ ಅದರ ಚಕ್ರಗಳು ಬಿಚ್ಚಿ ನೆಲಕ್ಕೆ ಬೀಳುವಂತೆ,.
*#ಈ_ಕಡುದರ್ಪವೇರಿದ_ಒಡಲೆಂಬ_ಬಂಡಿಗೆ*
*#ಮೃಢಭಕ್ತರ_ನುಡಿಗಡಣವೆ_ಕಡೆಗೀಲು_ಕಾಣಾ! #ರಾಮನಾಥ*
ಮಾನವನು ಜಗತ್ತಿಗೆ ಹುಟ್ಟಿ ಬಂದ ಬಳಿಕ
ತನ್ನೊಳಗಿನ ಅರಿವನ್ನು ಜಾಗ್ರತೆಗೊಳಿಸಿಕೊಂಡಾಗ
ಜ್ಞಾನವೆಂಬ ಅನರ್ಘ್ಯ ರತ್ನವು ಬೆಳಕಿಗೆ ಬರುತ್ತದೆ,
ಇದನರಿಯದೆ;
ಕಡುದರ್ಪ ದಬ್ಬಾಳಿಕೆ, ವಂಚನೆ
ರೋಷ-ಆವೇಶ ಆಸೆ ಆಮಿಷಗಳು,
ಹಲವಾರು ವಿಷಯಗಳನ್ನು ತುಂಬಿಕೊಂಡ
ಈ (ಬದುಕೆಂಬ) ಬಂಡಿ’
ಎತ್ತ ಸಾಗಬೇಕೆಂಬುದನ್ನೇ ಮರೆತು,
ಮತ್ತೆಲ್ಲೋ ಸಾಗುತ್ತಿದೆ;
ಒಂದೊಂದು ವಿಷಯಗಳು,
ಒಂದೊಂದು ಕಡೆ ಎಳೆದುಕೊಂಡು ಹೋಗುತ್ತಿವೆ,
ಸಾಗಬೇಕಿರುವ ಮಾರ್ಗವೇ ಕಾಣದಂತಾಗಿದೆ,
ನಾನೆಂಬ (ಅಹಂಕಾರ)
ಕಡುದರ್ಪಕ್ಕೆ ಬಂಡಿಯನ್ನು ನಿಯಂತ್ರಿಸಲಾಗುತ್ತಿಲ್ಲ, ಓಡುತ್ತಿದೆ’ ಓಡುತ್ತಿದೆ’ ಬಂಡಿ
ಓಡುವ ರಭಸಕ್ಕೆ ಅದರ ಚಕ್ರದ ಕಡೆಗೀಲು (ಅರಿವು)ಎಂಬ ಮಳೆಮುರಿದು ಬಿದ್ದಿದೆ’
ಬದುಕೆಂಬ ಬಂಡಿ ನೆಲಕಚ್ಚಿದೆ;
ರೈತನ ಬಂಡಿ ಬೀಳದಂತಿರಲು ಕಡೆಗೀಲು (ಚಕ್ರದಮಳೆ) ಬೇಕು’
ಈ ಬದುಕೆಂಬ ಬಂಡಿ ಮುರಿದು
ಬೀಳದಂತೆ ನಡೆಯಬೇಕಾದರೆ ಶಿವಶರಣರ ನುಡಿಗಳನ್ನು ಅನುಸರಿಸಬೇಕು..
ಎತ್ತೆತ್ತಲೋ ಎಳೆದೊಯ್ಯುವ ಮನ ಚಿತ್ತವನ್ನು,
ಒಂದೆಡೆ ನಿಲ್ಲಿಸಬೇಕಾದರೆ ಬಸವಾದಿ ಶರಣರ ಅರಿವು ಅನುಭಾವದ’, ನುಡಿಗಡಣವೆಂಬ (ಕಡೆಗೀಲು) ಇದ್ದರೆ ಮಾತ್ರ,
ಈ ಬದುಕಿನ ಬಂಡಿ ಸುಂದರ ಹಾಗೂ ಸುರಕ್ಷಿತವಾಗಿ ಸಾಗುಲು ಸಾಧ್ಯ’
ಎನ್ನುತ್ತಾರೆ #ಶರಣ_ಜೇಡರ_ದಾಸಿಮಯ್ಯನವರು..
* #ಲೋಕೇಶ್_ಎನ್_ಮಾನ್ವಿ*