e-ಸುದ್ದಿ, ಮಸ್ಕಿ
ಮಾ.20ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಸ್ಕಿಗೆ ಆಗಮಿಸುವ ಹಿನ್ನಲೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವುದಕ್ಕಾಗಿ ರಾಜಕೀಯ ಮುಂಡರು ಹಾಗೂ ಅಧಿಕಾರಿಗಳು ಶನಿವಾರ ಸ್ಥಳವನ್ನು ಪರಿಶೀಲನೆ ನಡೆಸಿದರು.
ಮಸ್ಕಿ ಉಪಚುನಾವಣೆ ಘೋಷಣೆ ಬಾಕಿ ಹಿನ್ನಲೆಯಲ್ಲಿ ಈಗಿನಿಂದಲೇ ಚುನಾವಣೆ ಪ್ರಚಾರ ಕಾರ್ಯ ನಡೆದಿವೆ. ಇದಕ್ಕಾಗಿ ಚುನಾವಣೆ ಪೂರ್ವ ಪ್ರಚಾರಕ್ಕಾಗಿ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಮಸ್ಕಿಗೆ ಆಗಮಿಸಲಿದ್ದಾರೆ. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಸ್ಕಿಯಲ್ಲೇ ಸಿಎಂ ಸಮ್ಮುಖದಲ್ಲಿ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಭಾವುಟ ಹಿಡಿಯಲಿದ್ದಾರೆ.
ಇದಕ್ಕಾಗಿ ಮಾ.20 ರಂದು ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ. ಕುರಿ ಮತ್ತು ಹುಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ ಶುಕ್ರವಾರ ಸ್ಥಳ ಪರಿಶೀಲನೆ ಮಾಡಿದರೆ, ಲಿಂಗಸುಗೂರು ಎಸಿ ರಾಜಶೇಖರ ಡಂಬಳ, ಡಿವೈಎಸ್ಪಿ ಡಿ.ಎಸ್.ಹುಲ್ಲೂರು ಸ್ಥಳ ಪರಿಶೀಲನೆ ಮಾಡಿದರು.
ಮಸ್ಕಿ ಪಟ್ಟಣದ ಪೊಲೀಸ್ ಠಾಣೆ ಪಕ್ಕದಲ್ಲಿನ ಖಾಲಿ ಜಾಗದಲ್ಲಿ ಕಾರ್ಯಕ್ರಮ ಆಯೋಜನೆಗೆ ಆಯ್ಕೆ ಮಾಡಲಾಗಿದ್ದು ನಗರದ ಹೊರ ವಲಯದಲ್ಲಿ ಹೆಲಿಪ್ಯಾಡ್‍ಗಾಗಿ ಪ್ರತ್ಯೇಕ ಸ್ಥಳವನ್ನು ಪರಿಶೀಲನೆ ಮಾಡಿದ್ದಾರೆ.ಈ ತಹಸೀಲ್ದಾರ್ ಬಲರಾಮ ಕಟ್ಟಿಮನಿ, ತಾಲೂಕು ಪಂಚಾಯತ ಇಒ ಬಾಬು ರಾಠೋಡ್, ಸಿಪಿಐ ದೀಪಕ್‍ಭೂಸರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ, ಪಿಎಸ್‍ಐ ಸಿದ್ರಾಮೇಶ ಸೇರಿ ಇತರರು ಇದ್ದರು.
ಮಸ್ಕಿಯಲ್ಲಿ ಮುಖ್ಯಮಂತ್ರಿ ಕಾರ್ಯಕ್ರಮಕ್ಕಾಗಿ ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ