ವೈರಾಗ್ಯದಲಗು ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳು
ಯುಗಕ್ಕೊಂದು ಪ್ರಭೆ ಜಗವನ್ನು ಬೆಳಗುತ್ತದೆ”ಎನ್ನುವಂತೆ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳು ಶ್ರೀ ಗುರು ಮಹಾಂತ ದೇಸಿಕ ಶಿವಯೋಗಿಗಳಿಂದ ಕಾರುಣಿಕ ಶಿಶುವಾಗಿ ಯರನಾಳದಲ್ಲಿ ಮಕ್ಕಳಿಲ್ಲದ ಶರಣ ದಂಪತಿಗಳಾದ ಮಲ್ಲಿಕಾರ್ಜುನಯ್ಯ ಹಾಗೂ ಅನ್ನಪೂರ್ಣಾಂಬಿಕೆಯರ ಸಾಕು ಮಗನಾಗಿ ಬಾಲ್ಯ ಜೀವನ ಆರಂಭವಾಯಿತು.ಆದರೆ ಶ್ರೀ ಗುರುಮಹಾಂತ ದೇಸಿಕರು ಶಿಶುವನ್ನು ಶರಣ ದಂಪತಿಗಳಿಗೆ ಕೊಡುವಾಗ ಈ ಮಗು ಎಂಟು ವರ್ಷದವನಾದಾಗ ಈತ ನಿಮ್ಮ ಬಳಿಯಿರುವುದಿಲ್ಲ.ದೇಶ ಸಂಚಾರಿಯಾಗಿ ಧರ್ಮ ಪ್ರಣೀತನಾಗುತ್ತಾನೆ ಎಂದು ಹೇಳುತ್ತಾರೆ.ಮನಸ್ಸಿಲ್ಲದಿದ್ದರೂ ಅಷ್ಟು ವರ್ಷಗಳ ಕಾಲಾದರೂ ಮಗನಾಗಿರುತ್ತಾನಲ್ಲ ಎಂದು ಸಂತಸದಿಂದ ಸ್ವೀಕರಿಸುತ್ತಾರೆ.
ಮುಳಗುಂದ ಬಾಲಲೀಲಾಮಹಾಂತ ಶಿವಯೋಗಿಗಳು ಮಹಾ ತಪಸ್ವಿಗಳು, ಲೀಲಾಪುರುಷರು, ಮಹಾಮೇಧಾವಿಗಳು, ಕವಿಗಳು, ಯೋಗಿಗಳಿಗೆ ಮಹಾಯೋಗಿಯಾಗಿದ್ದರು. ಅವತಾರಪುರುಷರು. ಇವರ ವಿದ್ಯಾಭ್ಯಾಸ ಅಲ್ಲಿನ ಗುರುಕುಲದಲ್ಲಿ ನಡೆಯುವಾಗ ಶಿಶು ಮಹಾಂತನಿಗೆ ಯರನಾಳದ ಗುರು ತನಗೆ ಯೋಗ್ಯವಾದ ಗುರುವಲ್ಲವೆಂದು.ತಿಳಿದು ಲಿಂಗನಾಯಕನಹಳ್ಳಿಯಲ್ಲಿ ಶ್ರೀ ಚೆನ್ನವೀರಸ್ವಾಮಿಗಳ ಮಠದಲ್ಲಿ ವಿದ್ಯಾಭ್ಯಾಸ ಪ್ರಾರಂಭಿಸುತ್ತಾನೆ. ಶ್ರೀ ಗುರು ಬಸವಲಿಂಗಾಯನಮಃ ಅಂತ ಹೇಳಿ ಕೊಡುವ ಮೊದಲೆ ಇವರು ಬರೆದು ತೋರಿಸುತ್ತಾರೆ. ಇದನ್ನು ಕಂಡ ಅಲ್ಲಿನ ಗುರುಗಳಿಗೆ ಪರಮಾಶ್ಚರ್ಯವಾಗುತ್ತದೆ. ಶ್ರೀ ಮಠದಲ್ಲಿ ಹಲವಾರು ಪವಾಡಗಳನ್ನು ಮಾಡುತ್ತಾರೆ. ಚೆನ್ನವೀರ ಸ್ವಾಮಿಗಳು ಲಿಂಗೈಕ್ಯರಾದ ಬಳಿಕ ಅಲ್ಲಿರುವ ವಟುಗಳಾದ ಶಾಂತವೀರ ಶಿವಯೋಗಿಗಳು ಕೊಳ್ಳೆಗ್ರಾಮಕ್ಕೆ , ರಾಚೋಟಿ ಸ್ವಾಮಿಗಳು ಚಿತ್ರದುರ್ಗಕ್ಕೆ ಹೋದರು ಲಿಂಗಯ್ಯನವರು ಹೊಳಲಿಗೆ ಹಾಗೂ ಬಸಯ್ಯನವರು ಮೈಲಾರಕ್ಕೆ ಹೋಗುತ್ತಾರೆ ಆಗ ಶಿಶು ಮಾಂತ ನಿಗೆ ನಿನ್ನ ಪಯಣ ಯಾವ ಕಡೆಗೆ ಎಂದು ಕೇಳುತ್ತಾರೆ. ಆಗ ಶಿಶು ಮಹಾಂತ ನನ್ನ ಊರು ನನ್ನ ಮನೆಯೆಂಬುದು ನನಗಿಲ್ಲ. ನಾನು ಎಲ್ಲಿದ್ದರೇನು? ನನಗೆ ಗುರು ತೋರಿಸಸಿದ ಮಾರ್ಗದಲ್ಲಿ ಹೋಗುತ್ತೇನೆ ಎಂದು ಹೇಳಿ ತನ್ನ ಗುರುಗಳಾದ ಮುಳುಗುಂದ ಶ್ರೀ ಗುರು ಮಹಾಂತ ದೇಶಿಕರನ್ನು ಹುಡುಕುತ್ತಾ ದೇಶಸಂಚಾರ ಮಾಡಲು ಪ್ರಾರಂಭಿಸುತ್ತಾರೆ. ಆಂಧ್ರ, ತಮಿಳುನಾಡು ರಾಜ್ಯಗಳಲ್ಲಿ ಸಂಚರಿಸಿ ಕೊನೆಗೆತಮ್ಮನ್ನು ಜೋಳಿಗೆಯಿಂದ ದಾನಮಾಡಿದ ಗುರುಮಹಾಂತರನ್ನು ಹುಡುಕುತ್ತಾ ದೇಶ ಸಂಚಾರ ಮಾಡುತ್ತಾ ಅವರು ಮುಳಗುಂದದಲ್ಲಿ ಇರುವದನ್ನು ತಿಳಿದು ಅಲ್ಲಿಗೆ ಬರುತ್ತಾರೆ. ಇವರು ಬರುವ ಮೊದಲೇ ಲಿಂಗೈಕ್ಯರಾದ ಶ್ರೀಗುರುಮಹಾಂತರು ನಮ್ಮನ್ನು ಮೀರಿಸುವ ಶಿಷ್ಯ ಬರುತ್ತಾನೆ ಎಂದು ಮುಳಗುಂದ ಜನತೆಗೆ ತಿಳಿಸಿ ತಾವು ಲಿಂಗೈಕ್ಯವಾಗಬೇಕೆಂದಿರು ದಿನದಂದೆ ಮುಳಗುಂದದ ಸದ್ಭಕ್ತರ ಮುಂದೆ ಲಿಂಗಪೂಜೆ ಮಾಡುತ್ತಾ ಲಿಂಗೈಕ್ಯರಾಗತ್ತಾರೆ. ಮುಳಗುಂದದ ಸದ್ಭಕ್ತರು ಗುರು ಮಹಾಂತ ದೇಸಿಕರ ಅಂತ್ಯಸಂಸ್ಕಾರ ಮಾಡಿ ಮುಗಿಸುತ್ತಾರೆ. ಶ್ರೀ ಗುರು ಮಾಂತ ದೇಶಿಕರು ಇರುವ ಮೇಲ್ಮಠದ ಕಡೆಗೆ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳು ಬರುತ್ತಾರೆ ತಾವು ಬರುವುದರೊಳಗಾಗಿ ತಮ್ಮ ಗುರುಗಳು ಲಿಂಗೈಕ್ಯರಾದ ವಿಷಯವನ್ನು ತಿಳಿದು ಬಿಕ್ಕಿ ಬಿಕ್ಕಿ ಅಳುತ್ತಾರೆ.ಮೆಲ್ಮಠದಲ್ಲಿ ಉಳಿದು ಕೊಳ್ಳುತ್ತಾರೆ. ಇಲ್ಲಿಂದ ಪ್ರಾರಂಭವಾದ ಇವರ ಲೀಲೆಗಳು ಹಲವಾರು. ಊರಿನ ಸದ್ಭಕ್ತರು ಸೇರಿ ಊರ ಮಧ್ಯೆ ಇರುವ ಗವಿಮಠಕ್ಕೆ ಕರೆದುಕೊಂಡು ಬಂದು ಪಟ್ಟಾಭಿಷೇಕ ಮಾಡುತ್ತಾರೆ.
ಒಂದು ದಿನ ಅತ್ಯಂತ ಹರುಕು ಬಾಯಿಯ ಅವಾಚ್ಯ ಶಬ್ದಗಳನ್ನು ಬಳಸುತ್ತಿದ್ದ ನವಲಗುಂದದ ಅಜಾತಶತ್ರು ಶ್ರೀ ನಾಗಲಿಂಗ ಸ್ವಾಮಿಗಳು ಹಾಗೂ ಶಿಶುನಾಳ ಶರೀಫ ಶಿವಯೋಗಿಗಳು ಮಠದ ಮುಂದೆ ಹಾದು ಹೋಗುವಾಗ ಶರೀಫ ಶಿವಯೋಗಿಗಳ ನವಲಗುಂದದ ನಾಗಲಿಂಗ ಸ್ವಾಮಿಗಳಿಗೆ ಏ ನಾಗಲಿಂಗ ನಿನ್ನ ಬಾಯಿ ಮುದ್ದು ಮುಕುಳಿಯನ್ನು ಮುಚ್ಚಿಕೊಂಡು ಉಸಿರು ಬಿಡದ ಹಾಗೆ ದಾಟು ಎಂದಾಗ ನಾಗಲಿಂಗ ಶ್ರೀಗಳು ಯಾಕೆ? ಎಂದು ಪ್ರಶ್ನಿಸಿದಾಗ ಗವಿಯೊಳಗೆ ಒಂದು ದೊಡ್ಡ ಹುಲಿ ಎಂದು ಹೇಳುತ್ತಾರೆ. ಅವರೇ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳು
ಕೇವಲ ಮೂವತ್ತಾರು ವರುಷ ಬದುಕಿ ಬಾಳಿದ ಇವರು ಅಪಾರವಾದ ಭಕ್ತರನ್ನು ಹೊಂದಿರುತ್ತಾರೆ. ಇವರು ವಿಭೂತಿಯಿಂದ ಎಲ್ಲಿದಿ ಕಂದದಲ್ಲಿ ಕದಲೆ ಗೋಡೆ ಮೇಲೆ ಕವಿತೆಗಳನ್ನು ಬರೆದಿದ್ದರು ಕವಿತೆಗಳನ್ನು ಸಂಗ್ರಹ ಮಾಡಿದವರು ಮರಿದೇವರಮಠದ_ಮರಿದೇವರಯ್ಯನವರು. ಸಂಗ್ರಹಗಳೇ ಇವತ್ತು *ಕೈವಲ್ಯ ದರ್ಪಣ* ವಾಗಿ ರೂಪಗೊಂಡಿದೆ
*ಮೈಸೂರು_ಮುಮ್ಮಡಿ ಕೃಷ್ಣರಾಜ ಒಡೆಯರ* ಅವರ ಮಹಾ ರೋಗವನ್ನು ಗುಣಪಡಿಸಿ ಯಾವುದೇ ರಾಜವೈಭೋಗವನ್ನು ಬಯಸದೆ ನಿಮ್ಮ ರಾಜ ವೈಭೋಗ ನಿಮಗೆ ಇರಲಿ ಎಂದು ಆಶಿರ್ವದಿಸಿ ಅದನ್ನು ಧಿಕ್ಕರಿಸಿ ಪರಮ ವೈರಾಗಿ ಯಾಗುತ್ತಾರೆ. ಅವರಿಂದ ಸಣ್ಣ ಕುರುವಾಗಿ *ಕುಂಬಳ_ಸೊರಟೆ* ಯನ್ನು ತರುತ್ತಾರೆ ಇವತ್ತಿಗೂ ಶ್ರೀಮಠದಲ್ಲಿ ನಾವು ಅದನ್ನು ಕಾಣ ಬಹುದು. ಅದೇ ತರಹ ಲಿಂಗ ಪೂಜೆ ಮಾಡುತ್ತಾ ಉಳವಿ ಜಾತ್ರೆ ಮಾಡಿಸುತ್ತಾರೆ. ತಾವು ಕೂಡಾ ಕುಳಿತಲ್ಲೆ ಲಿಂಗ ಪೂಜೆ ಮಾಡುತ್ತಾ ಉಳಿವಿ ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಹಾಗೆ ಫಿರಂಗಿ ಬಸಮ್ಮನವರ ಪತಿಸಾವಿನ ನಂತರ ಮುಳಗುಂದದಲ್ಲಿ ವಾಸಿಸುವಾಗ ಅವರ ಎರಡು ಮಕ್ಕಳು ಹಾವು ಕಡಿದು ಬಲಿಯಾದಾಗ ಮಕ್ಕಳನ್ನು ಕಳೆದುಕೊಂಡ ತಾಯಿ ಜೋರಾಗಿ ಆಡುತ್ತಿರುವಾಗ *” ನನಗೆ ತಾಯಿ ಇಲ್ಲ ನಿನಗೆ ಮಕ್ಕಳಿಲ್ಲ”* ನಾನು ನಿನ್ನ ಮಗುವಾಗಿ ಎದೆ ಹಾಲು ಕುಡಿದು ಪುಟ್ಟ ಬಾಲಕನಾಗಿ ಅವರ ಜೊತೆ ಕಾಲಕಳೆದು ಮಕ್ಕಳ ಕೊರತೆಯನ್ನು ನೀಗಿಸಿ ಬಾಲಲೀಲನಾಗಿ ಬೆಳೆಯುತ್ತಾರೆ.ಫಿರಂಗಿ ಬಸಮ್ಮನವರ ಮಾತು ಮೀರತ್ತಿರಲಿಲ್ಲ. ಮೈಸೂರಿನ ಮಹಾರಾಜರು ಎಂಟತ್ತು ಬಾರಿ ತಮ್ಮ ಸೇವಕನನ್ನು ಕಳಿಸಿ ಶ್ರೀಗಳಿಗೆ ಆಹ್ವಾನ ನೀಡುತ್ತಾರೆ ಆದರೆ ಇಂದು ಬರುವೆ ನಾಳೆ ಬರುವೆ ಎನ್ನುತ್ತಾ ಕಾಲಹರಣ ಮಾಡುತ್ತಾರೆ ಶ್ರೀಗಳು. ಆಗ ಫಿರಂಗಿ ಬಸಮ್ಮನವರು ಸಿಟ್ಟಿಗೆದ್ದು ನೀನು ಹೋಗುವುದಾದರೆ ಹೋಗು ಇಲ್ಲಾ ಬರುವುದಿಲ್ಲ ಅಂತ ಹೇಳು ಎಂದು ಗದರಿಸುತ್ತಾರೆ ಆವಾಗಲೇ ಶ್ರೀಗಳು ಮೈಸೂರು ಕಡೆಗೆ ಹೋಗಿದ್ದು. ಫಿರಂಗಿ ಬಸಮ್ಮನವರನ್ನು ಹಾಗೂ ಶ್ರೀಮಠಕ್ಕೆ ಬರುವ ಮಹಿಳೆಯರಿಗೆ ತೊಟ್ಟಿಲಲ್ಲಿ ಹಾಕಿ ಮಗನ ತೂಗಿರುವ ಎಂದು ಚಿಕ್ಕ ಮಕ್ಕಳ ಹಾಗೆ ಬೇಡಿಕೊಳ್ಳುತ್ತಿದ್ದರು. ಅವರ ಕೈವಲ್ಯ ದರ್ಪಣದಿಂದ ಆಯ್ದುಕೊಂಡು ಈ ಕೆಳಗಿನ ಕವಿತೆ *ಮಗನ ತೂಗಿರೋ, ಭಕ್ತರು ಮಗನ ತೂಗಿರೋ*
ಅಗಜೆ ತನಗೆ ಮೊಲೆ ಹಾಲಿಲ್ಲದ
ಜಗಕೆ ಕಳುಹಿದಳು ಪುತ್ರನ
*ಭಕ್ತಿರಸವ ದಣಿಯಲುಂಡು* |
*ಶಕ್ತಿವಂತನಾಗಿ ಬಹಳ* |
*ಮುಕ್ತಿಮಾರ್ಗ ಹಿಡುದು ಬಾರಂ* | *ದುಕ್ತಿಯಿಂದ ಕಳುಹಿದಳು* || ೧ ||
*ತಾಯಿ ತಂದೆಗಳನು ಆಗಲು* |
*ಪಾಯ ತಪ್ಪಿ ಧರೆಗೆ ಬಂದ* ||
*ಪಾಯಗೊಳದ ಭವದಿ ಕೆಡಹಿ* | *ಘಾಯಮಾಸಿಜನ್ಮರೋಗದ* |೨
*ಪರಮ ಶಿಶು ಮಹಾಂತೇಶ ಗಿರಿಜೆ* |
*ಹಿರಿಯ ತಾಯಿತಂದೆಗಳನ್ನ* |
*ಮರೆತಿರವರು ಮಗನ ಚಿಂತೆ | ಗುರಿಯ ಮಾಡಿದರಯ್ಯ ನಿಮಗೆ*
ಶ್ರೀ ಮಹಾಂತ ಶಿವಯೋಗಿಗಳು ಬದುಕಿರುವಷ್ಟು ಕಾಲ ಶಿಶು,ಮಗುವಿನ ಸ್ವಭಾವ ಹೊಂದಿದವರಾಗಿದ್ದರು.ಬಸವಧರ್ಮ ಕಟ್ಟಾ ಪರಿಪಾಲಕರಾಗಿದ್ದರು.ಅವರ ಅಂತರಾತ್ಮಕ್ಕೆ ಕೋಟಿ ಕೋಟಿ ಪ್ರಣಾಮಗಳು.
ರವೀಂದ್ರ ರುದ್ರಪ್ಪ ಪಟ್ಟಣ
ಮುಳಗುಂದ—- ರಾಮದುರ್ಗ
9481931842