ಠಿ -ಕಾಣಿ
ಭಕ್ತಿ ಏನೆಂದು ತಿಳಿಯೇನು
ಶರಣರು ಎಂದರೆನೆಂದು ಅರಿಯನು
ಅಲ್ಹಾನಲ್ಲಿ ಪ್ರಾರ್ಥಿಸುವೆ
ಶಿವನಲ್ಲಿ ಪೂಜಿಸುವೆ
ಅಲ್ಹಾನಲ್ಲಿ ಸಿಜ್ದಾ ಶಿವನಲ್ಲಿ ಸಾಷ್ಟಾಂಗ
ಕಣ್ ಮುಚ್ಚಿ ಪ್ರಾರ್ಥಿಸುವೆ
ಕಣ್ ಬಿಚ್ಚಿ ಕೇಳುವೆ
ನಗುವೇ -ಅಳುವೇ -ತದೇಕ ಚಿತ್ತದಿ ನೋಡುವೆ
ಕುಡಿಯುವ ನೀರು ಒಂದೇ
ಸೇವಿಸುವ ಗಾಳಿ ಒಂದೇ
ನಡೆದಾಡುವ ಭೂಮಿ ಒಂದೇ
ಬೆಳೆಯುವ ಬೆಳೆಯೂ ಒಂದೇ
ಸೂರ್ಯನ ಬಿಸಿ ಒಂದೇ
ಚಂದಿರನ ತಂಪು ಒಂದೇ
ಮಾಡುವ ಅಡುಗೆ ಬೇರೆ -ಬೇರೆ
ಮನದ ಭಾವನೆಗಳು ಬೇರೆ -ಬೇರೆ
ಅತ್ತ ಫಕೀರ ಇತ್ತ ಜಂಗಮ
ಅತ್ತಿತ್ತ ಎತ್ತತ್ತೆಲೊ ಸುಳಿದಾಡಿದರು ಬಯಸುವುದು ಮುಕ್ತಿ
ಹೋಗುವುದೊಂದೇ ದಾರಿ ಸ್ಮಶಾನ ——–
ಬೇರೆಲ್ಲಿದೆ ಠಿ -ಕಾಣಿ
-ಮಾಜಾನ್ ಮಸ್ಕಿ