ವಚನಗಳು:: ತಾತ್ವಿಕತೆ::ನಿರೂಪಣೆ
ಆಧ್ಯಾತ್ಮ ಎಂದರೆ ನಮ್ಮ ಹಿರಿಯರು ರೂಪಿಸಿದ ಭಕ್ತಿ ಮಾರ್ಗದ ಸಂಸ್ಕ್ರತಿಯನ್ನು ಬಿಂಬಿಸುವ ಪ್ರಕ್ರಿಯೆಯಾಗಿದೆ.ಅಂದರೆ ಒಂದು ನಿರ್ದಿಷ್ಟವಾದ ಭಕ್ತಿ ಭುಮಿಕೆಯ ಪರಧಿಯನ್ನು ಹಿಗ್ಗಿಸಿ ನೋಡುವ ತಾತ್ವಿಕ ಸ್ವರೂಪದ ವಿವರಗಳೆಂದು ಹೇಳಬಹುದು.ಈ ಹಿನ್ನಲೆಯಲ್ಲಿ ವಚನಕಾರರ ಅನುಭಾವ ದಾಶ೯ನಿಕರ ತತ್ವ ಶಾಸ್ತ್ರ .ಸ್ವರವಚನಕಾರರ ಮತ್ತು ಕೈವಲ್ಯ ಕಾರರ ಪರ ತತ್ವ. ಆತ್ಮ ತತ್ವ ದ ಪ್ರತಿ ಪಾದನೆಯ ಮುಖಾಮುಖಿಯಾಗಿ ಕಾಣುತ್ತೇವೆ. ಈ ತಾತ್ವಿಕತೆಯ ನಿಲುವು ಭಕ್ತಿ ಮಾರ್ಗದ ಏಕರೂಪದ ದೋರಣಿ ಯಲ್ಲ.
ನಮ್ಮ ಜೀವನಕ್ಕೆ ನೇರವಾಗಿ ನಮ್ಮನ್ನು ಎಚ್ಚರಿಸುವ ವ್ಯಾಖ್ಯಾನಗಳೂ ಆಗಿವೆ. ಅವೆಂದರೆ ಸ್ವರೂಪ .ಸಾರ ಸಿದ್ದಾಂತ. ಅರಿವು .ದಶ೯ನ ವಾಸ್ತವಿಕಾರ್ತ ಶಿವ ದೇವರು . ಆತ್ಮ ಪರಮಾತ್ಮಮ ಪರಮ ಸತ್ಯವನ್ನು ತಿಳಿದವನು ಎಂದು ನಮಗೆ ಪರಿಚಯಿಸುತ್ತದೆ..
ನಮ್ಮ ಜೀವನಕ್ಕೂ ತತ್ವಗಳಿಗೂ .ನಿಕಟವಾದ ಸಂಬಂದವಿದೆ.ಮನುಷ್ಯನು ತನ್ನ ಧಾರ್ಮಿಕ ನಂಬಿಕೆಯ ಆದರ್ಶಗಳಿಂದಲೆ ತತ್ವಗಳನ್ನು ಹುಡುಕುವನು.ಸಾಂಪ್ರದಾಯಿಕ ಕೊಡುಗೆಗೆ ವ್ಯಷ್ಟಿ ಸಮಷ್ಟಿ ಮತ್ತು ಪ್ರಪಂಚ ಎನ್ನುವ ಸಂಬಂದಗಳ ಮೂಲಕ ಕಂಡುಕೊಂಡು ಬಾಳುವನು. ಇದು ಸಂಪ್ರದಾಯ ಬದ್ದ ಜನರಿಗೆ ಅಗತ್ಯವೂ ಮತ್ತು ಅನಿವಾರ್ಯವೂ ಆಗಿದೆ. ಇವು ನಮ್ಮ ಬದುಕಿನ ನೀತಿಗಳಿಗೆ ನಮ್ಮನ್ನು ಕಟ್ಟಿ ಹಾಕುವಂತಹ ಚೈತನ್ಯ ದಾಯಕ ನಿಲುವುಗಳಾಗಿವೆ. ಅಂದರೆ ಅಶುದ್ದತೆಯಿಂದ ಶುದ್ದತೆಗೆ ಕತ್ತಲೆ ಯಿಂದ ಬೆಳಕಿನೆಡೆಗೆ ದೈವ ವಿಶ್ವಾಸದ ಮೂಲಕ ಬರುವುದೆ ಆಗಿದೆ. ಸಂಸಾರಾತ್ಮಕ ಚಿಂತನೆಗೆ ವಾಸ್ತವಿಕ ಸತ್ಯವಾಗಿದೆ. ಅರಿವು ಕ್ರಿಯೆ ಮಂತ್ರಗಳು ಶಕ್ತಿಗಳಾಗಿ ಮನುಷ್ಯನ ಸರ್ವಾಂಗೀಣವಾದ ಬದುಕನ್ನು ಪರಿಶುದ್ಧ ಗೊಳಿಸುವುದಾಗಿದೆ. ಸತ್ಯ ಶುದ್ದ ಆದಶ೯ಗಳು ದಾರಿ ದೀಪವಾಗಿವೆ. ತತ್ವ ಮನಸಾಕ್ಷಿ ಇದರ ಬೆಳವಣಿಗೆ ಯಾಗಿದೆ.
ಭಕ್ತಿ ಮತ್ತು ಅರಿವಿನ ನಡುವಿನ ಮಾರ್ಗವೆ ತತ್ವ ಇದನ್ನು ಹೆಚ್ಚಾಗಿ ಭಕ್ತಿ ಸಾಹಿತ್ಯದ ಜೊತೆಗೆ ಹೋಲಿಸುತ್ತೆವೆ. ಆನಂದಾತೀತವಾದ ಅನುಭವದ ಅರಿವು ಆಚಾರದಿಂದಲೂ ಮನಕ್ಕೆ ಪ್ರಗ್ನೆ ಕೊಡುವುದಾಗಿದೆ. ಇದಕ್ಕೆ ರೂಪವಿಲ್ಲ . ರೂಪಬಂದಾಗ ಅಹಂಕಾರ ವಾಗುತ್ತದೆ. ನಮ್ಮ ಕರ್ಮಕ್ಕೆ ಪ್ರತಿಫಲನವನ್ನು ಕೊಡುವುದೇ ತತ್ವ ವಾಗಿದೆ.
ಇಹ ಪರ ಲೌಕಿಕ ಅಲೌಕಿಕಗಳೆ ಆದ್ಯಾತ್ಮ ಸಾಹಿತ್ಯದ ಅನುಸಂಧಾನ ವಾಗಿದೆ.ಶರಣರ ದೃಷ್ಟಿಯಲ್ಲಿ ಭಸಿತ ರುದ್ರಾಕ್ಷಿ ಯನು ಧರಿಸಿ .ಸಂಪ್ರೀತಿಯಲಿ ಬಸವಾಕ್ಷರ ನೆನೆಯುತಿಪ್ಪ ಶರಣರೆ ಇಹ ಲೋಕ ಪರಲೋಕ .ಬ್ರಮೆಗೆಟ್ಟು ಇರುತಿಪ್ಪ ಇಹಲೋಕವೆ ರುದ್ರಲೋಕ .ಕರುಣಾಕರ ಕಪಿಲ ಸಿದ್ದೇಶ್ವರನ ಶರಣರು ಇರುತಿಪ್ಪುದೆ ರುದ್ರಲೋಕ .ವಚನಕಾರರು ಶಿವನನ್ನು ಅರಿವು ಮತ್ತು ಭಕ್ತಿಯ ಅಂತಸ್ಸ್ವತ್ವಗಳ ಮೂಲಕ ಕಂಡಿದ್ದರೆಂದು ಸ್ಪಷ್ಟವಾಗಿ ಹೇಳಬಹುದು. ಶಿವನು ಅಮೂರ್ತನಾದರೂ ವಿಶ್ವವ್ಯಾಪಿ. ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ. ಎನ್ನುವ ಸೌಜನ್ಯಯುತವಾದ ಮಾತುಗಳನ್ನು ಗಮನಿಸ ಬೇಕು.
ವಚನಕಾರರ ಮುಖ್ಯ ಉದ್ದೇಶ ಆತ್ಮ ಪರಮಾತ್ಮನನ್ನು ಬೆಸೆಯುವ ಸಾಧನಾವಸ್ತೆ ಯಾಗಿದೆ. ಅದಕ್ಕೆ ರೂಪವಿಲ್ಲ.ಪರಮಾತ್ಮನಿಗೂ ರೂಪವಿಲ್ಲ. ಇವುಗಳಿಗೆ ರೂಪ ಬಂದಾಗ ಭಕ್ತಿಯು ಕಾಣಿಸಿಕೊಳ್ಳು ತ್ತದೆ. ಆಗ ಶಾಸ್ತ್ರವುಸ್ತೊತ್ರವು ಆಚಾರ ಮಾರ್ಗಗಳಾಗಿ ಕಾಣಿಸುತ್ತವೆ. ಇವೆಲ್ಲವೂ ಸೇರಿ ಧರ್ಮ ಎನಿಸಿಕೊಳ್ಳುತ್ತದೆ.
ಡಾ. ಸರ್ವಮಂಗಳ ಸಕ್ರಿ.
ಉಪನ್ಯಾಸಕರು.
ರಾಯಚೂರು
..