ದೇವರು—- ಕಾಯ– ಕಾಯಕ
ನಮ್ಮ ಭಾರತದಲ್ಲಿ ಹಿಂದು ದೇವರು ದೇವತೆಗಳ ಸಂಖ್ಯೆ 33ಕೋಟಿ ಎಂದು ವೇದ ಪುರಾಣಗಳು ಹೇಳುತ್ತವೆ. ಕಾಡುಮೇಡುಗಳಲ್ಲಿ ಗಿರಿ ಗಿರಿ ಗಹ್ವರಗಳಲ್ಲಿ ಹಾದಿ ಬೀದಿಯಲ್ಲಿ ರಸ್ತೆಯ ಪುಟ್ಪಾತ್ ಮಾತಿನ ಮೇಲೆ ಇರುವ ದೇವರುಗಳು ಕಂಡುಬರುತ್ತವೆ. ಗಿಡ ಮರ ಬಳ್ಳಿ ಪ್ರಾಣಿ ಪಕ್ಷಿ ಕಲ್ಲು ಮಣ್ಣುಗಳನ್ನು ದೇವರು ಕಂಡುಬರುತ್ತಾನೆ.ವೇದಪುರಾಣಗಳ ಪ್ರಕಾರ ಭಾರತದಲ್ಲಿ 33 ಕೋಟಿ ದೇವಾನು ದೇವತೆಗಳಗಳಿದಿದ್ದಾರೆ. ಆದರೆ, ನೆರೆಹೊರೆಯ ರಾಷ್ಟ್ರಗಳು ನಮ್ಮ ದೇಶದ ಮೇಲೆ ದಾಳಿ ಮಾಡುತ್ತಿದ್ದರು ತನ್ನ ದೇಶದ ದೇಶಭಕ್ತರನ್ನು ರಕ್ಷಿಸಲು ಆಗದ ನರಸತ್ತ ದೇವರು, ದೇವತೆಗಳು ನಮಗೇನು ಉಪಯೋಗ?
ಮಡಕೆ ದೈವ, ಮರ ಕೈವ, ಬೀದಿಯ ಕಲ್ಲು ದೈವ, ಹಣಿಗೆದೈವ, . ಬಿಲ್ಲ ನಾರಿ ದೈವ ಕಾಣಿರೋ ! ಕೊಳಗ ದೈವ, ಗಿಣ್ಣಲು ದೈವಕಾಣಿರೋ,ದೈವ ದೈವವೆಂದು ಕಾಲಿಡಲಿ೦ಬೆಲ್ಲಾ !! ದೇವನೊಬ್ಬನೆ ಕೂಡಲಸಂಗಮದೇವ
ಭಾರತೀಯರಿಗೆ ಕತ್ತೆ, ಹಂದಿ ಕಸಬರಿಗೆ, ,ಹಾವು,ಕಾಗೆ, ಭೂಮಿ, ಮಂಗ, ಆಕಳು, ರತ್ನ ಪಕ್ಷಿ, ತುಳಸಿ,ಆರಿ ಬನ್ನಿಮರ ಮುಂತಾದ ಕೋಟ್ಯಾನುಕೋಟಿ ದೇವರುಗಳನ್ನು ಹೊರಗೆ ಹುಡುಕುತ್ತಿದ್ದೇವೆ. ಆದರೆ ಶರಣರ ಪ್ರಕಾರ *ಕಾಯವೇ* ಅಂದರೆ ದೇಹವೆ ದೇವಾಲಯವಾಗಿದೆ.
ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯ ಎನ್ನ ಕಾಲೇ ಕಂಬ ದೇಹವೇ ದೇಗುಲ ಸಿರವೇ ಹೊನ್ನಿನ ಕಳಸವಯ್ಯಾ ಕೂಡಲಸಂಗಮದೇವ ಕೇಳಯ್ಯಾ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ
ದೇಹದೊಳಗೆ ದೇವಾಲಯವಿದ್ದು, ಮತ್ತೆ ಬೇರೆ ದೇವಾಲಯವೇಕೆ? ಎರಡಕ್ಕೆ ಹೇಳಲಿಲ್ಲಯ್ಯಾ! ಗುಹೇಶ್ವರ, ನೀನು ಕಲ್ಲಾದರೆ ನಾನೇನಪ್ಪೆನು?
12ನೇ ಶತಮಾನದ ಶರಣರು ದೇಹವನ್ನು ಆ ಸೃಷ್ಟಿಕರ್ತನು ಕೊಟ್ಟ ಲಿಂಗ ಪ್ರಸಾದವೆಂದು ಅಥವಾ ದೇಹ ಪ್ರಸಾದವೆಂದು ಸ್ವೀಕರಿಸಿದ್ದಾರೆ ಲಿಂಗವಂತರು ಬಾಹ್ಯ ಪೂಜೆಗಳನ್ನು ಮಾಡುವುದಿಲ್ಲ. *ಇಷ್ಟಲಿಂಗದ ಜೊತೆಗೆ ತಮ್ಮನ್ನು ತಾವೇ ಪೂಜೆ ಮಾಡಿಕೊಳ್ಳುತ್ತಾರೆ. ಜಗತ್ತಿನಲ್ಲಿ ವ್ಯಕ್ತಿ ತಮ್ಮನ್ನು ತಾವೇ ಪೂಜಿಸಿ ಕೊಳ್ಳುವ ವಿಶೇಷವಾದ ಧರ್ಮವೆಂದರೆ ಬಸವಧರ್ಮ.* ಇಷ್ಟಲಿಂಗವೆಂಬುದು ಅರುವಿನ ಕುರುಹು ಆಗಿದೆ.ನಮ್ಮ ಕಾಯವೇ ಕೈಲಾಸವಾದಾಗ, ಕನಸ ದೇವರನ್ನು ಅಲ್ಲಿ ಇಲ್ಲಿ ಹುಡುಕುವುದು ತಪ್ಪೆಂದು ಶರಣರು ಹೇಳುತ್ತಾರೆ.
ಎನ್ನ ಕಾಯವೇ ದೇಗುಲವಾಗಿ, ಕುರುಹಿಟ್ಟು ಕೊಟ್ಟ ಕುರುಹೇ. ಪ್ರಾಣಲಿಂಗವಾಗಿ, ನೋಡುವ ಕಣ್ಣೀ ಪೂಜಿಸುವ ಪುಷ್ಪವಾಗಿ, ಆನಂದಾಶ್ರು ಗಳೇ ಸಕಲಭೋಗವಾಗಿ, ಅಷ್ಟವಿಧಾರ್ಚನೆ ಷೋಡಶೋಪಚಾರವರತುದೇ ಅಡ್ಡವಣಿಗೆ ಸರಿಯಾಣವಾಗಿ, ಪರಿಣಾಮವೇ ನೈವೇದ್ಯವಾಗಿ, ಅಖಂಡ ಭಕ್ತಿರತಿಯೇ ತಾಂಬೂಲವಾಗಿ, ಪೂಜಿಸುತ್ತಿರ್ದೆನಯ್ಯ, ಈಶಾನ್ಯ ಮೂರ್ತಿ ಮಲ್ಲಿಕಾರ್ಜುನಲಿಂಗವೇ, ಎನ್ನ ಪ್ರಾಣ ಪೂಜೆ ನಿಮಗೆ
ಹೀಗೆ 12ನೇ ಶತಮಾನದ ಶರಣರು ಕಾಯ ಮತ್ತು ಕಾಯಕ ಕೈಲಾಸವೆಂದು ಕರೆದಿದ್ದಾರೆ.
ಶರಣ ನಿದ್ರೆಗೈದರೆ ಜಪೋ ಶರಣನೆದ್ದು ಕುಳಿತರೆ ಶಿವರಾತ್ರಿ ಕಾಣಿರೋ ಶರಣ ನಡೆದುದೇ ಪಾವನ ಕಾಣಿರೋ ನುಡಿದುದೇ ಶಿವತತ್ವ ಕಾಣಿರೋ ಕೂಡಲಸಂಗಮದೇವ ಶರಣನ ಕಾಯವೇ ಕೈಲಾಸ ಕಾಣಿರೋ
ಯಾವ ವ್ಯಕ್ತಿ ಕಾಯಕದಲ್ಲಿ ಅದರಲ್ಲೂ ಪರಿಶುದ್ಧವಾದ ಕಾಯಕದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾದರೆ ಅವನೇ ಜಂಗಮ ಲಿಂಗ ಮತ್ತು ಶರಣ ನಾಗುತ್ತಾನೆ. ಕಾಯಕವೇ ಕೈಲಾಸವಾದ ಶರಣರಿಗೆ ಇಷ್ಟಲಿಂಗಪೂಜೆ. ತನ್ನದಾಗಿಸಿಕೊಳ್ಳುವ ಕಾಯುವೆ ಕೈಲಾಸ ಆಗುವುದು.
ಶರಣರು ಕಾಯಕ ಮತ್ತು ದಾಸೋಹಕ್ಕೆ ಅತ್ಯಂತ ಪ್ರಮುಖ ಪ್ರಾಧಾನ್ಯತೆಯನ್ನು ಕೊಟ್ಟಿದ್ದರು
ಕಾಯಕದಿಂದ ಬಂದ ಖಾರೆ ಸೊಪ್ವಾದರೂ ಅದು ಲಿಂಗಕರ್ಪಿತ ಎಂದು ಹೇಳುತ್ತಾರೆ,
*ಊರಗೊಬ್ಬ ದೇವಾ, ಮಡುವಿನೊಳು ಬದೇವ ಅಡವಿಯಲೊಬ್ಬ,ದೇವ,ನೀರು ನೀರು ಕೂಡಿ, ಬಯಲು ಬಯಲು ಕೊಡಿ ನರನೆಂಬ ದೇವ ತಾ ನಿರಾಳವೋ! ಲಿಂಗವೆಂಬುದೊಂದು ಅನಂತ ಹೆಸರು ಗುಹೇಶ್ವರನೆಂಬುದೇನೋ?*
ಆಪ್ಯಾಯನಕ್ಕೆ ನೀಡುವೆ, ಲಾಂಛನಕ್ಕೆ ಶರಣೆಂಬೆ ; ಲಾಂಛನಕ್ಕೆ ತಕ್ಕ ಆಚರಣೆಯಿಲ್ಲದಿದ್ದರೆ ಕೂಡಲಸಂಗಮದೇವಾ, ನೀ ಸಾಕ್ಷಿಯಾಗಿ ‘ಚಿ:” ಎಂಬೆ
ದೇವನೊಬ್ಬ ನಾಮ ಹಲವು ಪರಮ ಪತಿವ್ರತೆಗೆ ಗಂಡನೊಬ್ಬ ಮತ್ತೊಂದಕ್ಕೆರಗಿದರೆ ಕಿವಿ-ಮೂಗ ಕೊಯ್ವನು ಹಲವು ದೈವದ ಎಂಜಲು ತಿಂಬುವರನೇನೆಂಬೆ ಕೂಡಲಸಂಗಮದೇವಾ?
-ರವೀಂದ್ರ ರುದ್ರಪ್ಪ ಪಟ್ಟಣ
ಮುಳಗುಂದ—–++ ರಾಮದುರ್ಗ