ಕಣಜ ಹಾಳಾಯಿತ್ತಯ್ಯ

ಕಣಜ ಹಾಳಾಯಿತ್ತಯ್ಯಾ

ಬಿತ್ತು ಬೆಳೆಯಿತ್ತು ,ಕೆಯ ಕೊಯಿತ್ತು
ಮುರಿಯಿತ್ತು ಕುತ್ತುರಿಯೊಟ್ಟಿತ್ತು ,ಅಳೆಯಿತ್ತು ತುಂಬಿತ್ತು
ಕೂಡಲ ಸಂಗಮದೇವಯ್ಯಾ ಮೇಟಿ ಕಿತ್ತಿತ್ತು (ಕಣಜ ) ಹಾಳಾಯಿತ್ತಯ್ಯಾ 

ಬಿತ್ತಿದ್ದನ್ನು ಬೆಳೆದೆವು ಬೆಳೆದ ಫಲ ತೆನೆ ಕೊಯ್ದೆವು ,ಮುರಿದ ತೆನೆ ಕೂಡಿ ಹಾಕಿದೆವು ,ಇಲ್ಲಿ ವಚನಗಳ ರಾಶಿಯ ಬಗ್ಗೆ ಸಾಂಕೇತಿಕವಾಗಿ ಹೇಳುತ್ತಾರೆ ಬಸವಣ್ಣ .
ಕೂಡಿಟ್ಟ ಕಾಳುಗಳನ್ನು ಅಳೆದನು ಬಳ್ಳದಿಂದ ತುಂಬಿದೆವು ಗೋಣಿಯ ಚೀಲವ ,ಆದರೆ ಕೂಡಲ ಸಂಗಮದೇವಯ್ಯ ಕಣದಲ್ಲಿ ಹೂಡಿದ್ದ ಮೇಟಿ ಮುರಿಯಿತ್ತು ಕಣಜ ಹಾಳಾಯಿತ್ತು ಎಂದು ತಮ್ಮ ನೋವನ್ನು ಮಾತ್ರ ತೋಡಿಕೊಂಡರು.ಶರಣರ ವೈಚಾರಿಕ ಕ್ರಾಂತಿಯ ಫಲವಾಗಿ ಬಹು ದೊಡ್ಡ ಸಂಖ್ಯೆಯಲ್ಲಿ ವಚನಗಳ ರಚನೆ ಮಾಡಿ ಅವುಗಳನ್ನು ಮುಂದಿನ ಜನಾಂಗಕ್ಕೆ ನೀಡಬೇಕೆನ್ನುವ ಅವರ ಕನಸು ಛಿದ್ರಗೊಳ್ಳ ಹತ್ತಿತು . ಜಾತಿವಾದಿಗಳ ಕೈ ಮೇಲಾಗ ಹತ್ತಿತು. ಕಲ್ಯಾಣ ಕಟುಕರ ಕೇರಿಯಾಯಿತು.
ಶರಣರ ಕೊಲೆ. ವಚನ ರಕ್ಷಣೆಗಾಗಿ ಶರಣರು ಹೋರಾಡಿದರು.
ಹಡಪದ ಅಪ್ಪಣ್ಣನವರ ಮುಂದೆ ವಚನಗಳ ರಕ್ಷಣೆಗೆ ಸೂಚನೆ ನೀಡಿ ವಿಚಾರ ಪತ್ನಿಯಾದ ನೀಲಾಂಬಿಕೆಯವರನ್ನು ಕರೆದು ತರಲು ಹೇಳಿದರು. ನೀಲಮ್ಮ ಹಡಪದ ಅಪ್ಪಣ್ಣ ಕೂಡಲ ಸಂಗಮಕ್ಕೆ ಬರುವ ಮುನ್ನವೇ ಬಸವಣ್ಣನವರು ಐಕ್ಯವಾದರು .

-ಡಾ.ಶಶಿಕಾಂತ.ಪಟ್ಟಣ ಪುಣೆ

 

Don`t copy text!