e-ಸುದ್ದಿ,ಮಸ್ಕಿ
ಮಜಿ ಶಾಸಕ ಪ್ರತಾಪಗೌಡ ಪಟೀಲ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಸೂಪ್ರಿಂಕೊರ್ಟ ಅನರ್ಹ ಶಾಸಕರು ಎಂದು ತೀರ್ಪು ನೀಡಿದೆ. ಅದನ್ನು ಮರೆತಿರುವ ಅವರು ಕ್ಷೇತ್ರದಲ್ಲಿ ಶಾಸಕರಂತೆ ವರ್ತಿಸುತ್ತ ಕಾಮಾಗಾರಿಗಳ ಭೂಮಿ ಪೂಜೆ, ಉದ್ಘಾಟನೆ ಮಾಡುತ್ತಿರುವದು ಯಾವ ಪುರಾಷಾರ್ಥಕ್ಕೆ ಎಂದು ತಾ.ಪಂ.ಅಧ್ಯಕ್ಷ ಶಿವಣ್ಣ ನಾಯಕ ಪ್ರಶ್ನಿಸಿದರು.
ಪಟ್ಟಣದ ಗ್ರೀನ್ ಸಿಟಿಯ ಖಾಸಗಿ ನಿವಾಸದಲ್ಲಿ ಸೋಮವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಅಭಿವೃದ್ದಿ ಕಾಮಗಾರಿಗಳಿಗೆ ಕಾಂಗ್ರೆಸ್ ಬೆಂಬಲಿತ ಜಿ.ಪಂ.ಸದಸ್ಯರು, ತಾ.ಪಂ.ಅಧ್ಯಕ್ಷರನ್ನು ಶಿಷ್ಟಾಚಾರಕ್ಕೂ ಕರೆಯದೆ ಮಾಜಿ ಶಾಸಕರು ಹಾಗೂ ಅವರ ಹಿಂಬಾಲಕರು ಭೂಮಿ ಪೂಜೆ, ಉದ್ಘಾಟನೆ ಮಾಡುತ್ತಿದ್ದಾರೆ. ಶಿಷ್ಟಚಾರ ಉಲ್ಲಂಘಿಸುವ ಘಟನೆ ಹೀಗೆ ಮುಂದುವರಿದರೆ ಸರ್ಕಾರಕ್ಕೆ ದೂರು ಕೊಡುವದರ ಜತೆಗೆ ಬಹಿರಂಗವಾಗಿ ಪ್ರತಿಭಟನೆ ಮಾಡಲಾಗುವದು ಎಂದರು.
ಕ್ಷೇತ್ರದಲ್ಲಿ ಅಧಿಕಾರಿಗಳು ಮಾಜಿ ಶಾಸಕರ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ. ತಾ.ಪಂ.ಅಧ್ಯಕ್ಷರನ್ನು ಕಡೆಗಣೆಸುತ್ತಿದ್ದು ಅಧಿಕಾರಿಗಳು ಕೂಡ ಕಾಮಗಾರಿ ಭೂಮಿ ಪೂಜೆ ಅಥವಾ ಕಾವiಗಾರಿ ಸ್ಥಳದಲ್ಲಿ ಇರದೆ ಬೇಕಾಬಿಟ್ಟಿ ಕೆಲಸ ನಡೆಯುವಂತೆ ಮಾಡುತ್ತಿದ್ದಾರೆ ಎಂದು ಶಿವಣ್ಣ ನಾಯಕ ಆರೋಪಿಸಿದರು.
ಅನೇಕ ಕಾರ್ಯಕ್ರಮಗಳನ್ನು ಮಾಜಿ ಶಾಸಕರು ಉದ್ಘಾಟನೆ ಮಾಡುತ್ತಿದ್ದಾರೆ. ಆದರೆ ಅಡಿಗಲ್ಲು ಸಮಾರಂಭದ, ಶಂಕುಸ್ಥಾಪನೆಯ ಚಿತ್ರಗಳನ್ನು ಹಾಕುತ್ತಿಲ್ಲ. ಹಾಕುವದಾದರೆ ಸಂಬಂಧಿಸಿದ ಕೆಲಸಗಳಿಗೆ ತಾ.ಪಂ. ಅಧ್ಯಕ್ಷರ ಹೆಸರು ಹಾಕಬೇಕಾಗುತ್ತದೆ ಎಂದು ಹಾಕುತ್ತಿಲ್ಲ ಎಂದು ಶಿವಣ್ಣ ನಾಯಕ ದೂರಿದರು.
ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸಿದ್ದನಗೌಡ ತುರ್ವಿಹಾಳ ಮಾತನಾಡಿ ಮಾಜಿ ಶಾಸಕರು ತುರ್ವಿಹಾಳ ಭಾಗದಲ್ಲಿ ಅಲ್ಲಿನ ಜಿ.ಪಂ.ಸದಸ್ಯರನ್ನು ಕಡೆಗಣಿಸಿ ಗೂಡುದೂರು ಜಿ.ಪಂ.ಸದಸ್ಯರನ್ನು ಕರೆದುಕೊಂಡು ಉದ್ಘಾಟನೆ ಮಾಡುತ್ತಿದ್ದಾರೆ. ಮೂರು ಬಾರಿ ಶಾಸಕರಾಗಿರುವ ಪ್ರತಾಪಗೌಡ ಪಾಟೀಲ ಅವರು ರಾಜಕೀಯದಲ್ಲಿ ಮೇಲಪಂಕ್ತಿ ಹಾಕಬೇಕೇ ವಿನಹ ಕ್ಷುಲಕ ರಾಜಕರಣ ಮಾಡುವದು ಸರಿಯಲ್ಲ ಎಂದರು.
ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಹುಸೇನಬಾಷಾ, ಮಾಹಂತೇಶ ಜಾಲವಾಡಗಿ, ವಿಜಯಕುಮಾರ ಇದ್ದರು.