ನಿಶ್ಚಿಂತೆಯಿಂದ ಇರಲು ಪೊಲೀಸ್ ಪರಿಶ್ರಮ ಕಾರಣ

 

e-ಸುದ್ದಿ, ಮಸ್ಕಿ

ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತಿರುವುದರಿಂದ ಜನರು ಸುರಕ್ಷಿತವಾಗಿ ನಿಶ್ಚಿಂತೆಯಿಂದ ಇರುವಂತಾಗಿದೆ ಎಂದು ಬಿಜೆಪಿಯ ಯುವ ಮುಖಂಡ ಬಸನಗೌಡ ಪೊಲೀಸ್ ಪಾಟೀಲ್ ಹೇಳಿದರು.
ಪಟ್ಟಣದ ಭ್ರಮಾರಂಬ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆದ ಮಸ್ಕಿ ಠಾಣೆಯಿಂದ ಗಬ್ಬೂರು ಠಾಣೆಗೆ ವರ್ಗಾವಣೆಯಾಗಿರುವ ಪಿಎಸ್‍ಐ ಸಣ್ಣವಿರೇಶ ಅವರ ಬಿಳ್ಕೋಡುಗೆ ಹಾಗೂ ಮಸ್ಕಿ ಠಾಣೆಗೆ ನೂತನವಾಗಿ ಆಗಮಿಸಿದ ಪಿಎಸ್‍ಐ ಸಿದ್ರಾಮಪ್ಪ ಸ್ವಾಗತ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಸ್ಕಿ ಪಟ್ಟಣದ ಹಳೆಬಸ್ ನಿಲ್ದಾಣದಲ್ಲಿ ವಾಹನ ನಿಲುಗಡೆ ಸ್ಥಳಕ್ಕೆ ಜಾಗ ಹಾಗೂ ಸ್ವಚ್ಚತೆ ಸೇರಿದಂತೆ ಪುರಸಭೆಯವರು ಮಾಡುವ ಕೆಲಸವನ್ನು ಪಿಎಸ್‍ಐ ಸಣ್ಣ ವಿರೇಶ ಅವರು ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.
ಸಿಪಿಐ ದೀಪಕ್ ಬೂಸರಡ್ಡಿ ಮಾತನಾಡಿ ಪೊಲೀಸರಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು ಸಹಕಾರ ಸಿಕ್ಕಾಗ ಮಾತ್ರ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಹಾಗಯೇ ಠಾಣೆಗೆ ಬರುವವರನ್ನು ಗೌರವದಿಂದ ಅವರ ಅಹವಾಲುಗಳನ್ನು ಕೇಳೀ ಪರಿಹಾರ ಕಂಡುಕೊಂಡರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದರು.
ಪಿಎಸ್‍ಐ ಸಣ್ಣ ವೀರೇಶ ಮಾತನಾಡಿ ಮಸ್ಕಿಯಲ್ಲಿ ಇರುವಷ್ಟ ದಿನ ಸರ್ವಾಜನಿಕರು ಹಾಗೂ ಗ್ರಾಮದ ಮುಖಂಡರ ಸಹಕಾರದಿಂದ ಉತ್ತಮ ಕೆಲಸ ಮಾಡಿದ ತೃಪ್ತಿ ಇದೆ. ಮಸ್ಕಿ ಜನರ ಸಹಕಾರ ಸದಾಕಾಲ ಸ್ಮರಿಸುವೆ ಎಂದರು.
ವರ್ತಕ ಪ್ರಕಾಶ ಧಾರಿವಾಲ, ಹಿರಿಯ ಪತ್ರಕರ್ತ ಅಬ್ದುಲ್ ಅಜೀಜ್, ವಿರೇಶ್ ಸೌದ್ರಿ ಮಾತನಾಡಿದರು.

Don`t copy text!