e-sಸುದ್ದಿ, ಮಸ್ಕಿ
e-sಸುದ್ದಿ ಬಳಗದ ಲೇಖಕಿ ಬೆಂಗಳೂರಿನ ನಂದಾ ನವೀನ ಕೊಟೂರು ಅವರನ್ನು ರಾಜ್ಯಮಟ್ಟದ 5ನೇ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ತಿಳಿಸಿದ್ದಾರೆ.
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಲೇಖಕಿಯರ ರಾಜ್ಯ ಮಟ್ಟದ ಸಮ್ಮೇಳನದ ಅಂಗವಾಗಿ ಭಾನುವಾರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿ ಡಾ.ನಂದಾನವೀನ ಕೊಟೂರು ಅವರನ್ನು ಆಯ್ಕೆ ಮಾಡಲಾಯಿತು ಎಂದು ತಿಳಿಸಿದ್ದಾರೆ.
ಡಾ.ನಂದಾ ಕೊಟೂರು ಅವರು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯ ಅರವಳಿಕೆ ತಜ್ಞೆಯಾಗಿದ್ದಾರೆ. ವೈದ್ಯಕೀಯ ಸಾಹಿತ್ಯ ಸೇರಿದಂತೆ ಚುಟುಕು, ಕವನ, ಕಥೆ ಹಾಗೂ ಚಿತ್ರಕಲೆಯಲ್ಲಿ ಪರಿಣಿತ ಹೊಂದಿದ್ದಾರೆ.
ಡಾ.ನಂದಾ ಕೊಟೂರು ಮೂಲತಃ ಬಾಗಲಕೋಟೆ ಜಿಲ್ಲೆ ಇಲಕಲ್ ನಗರದವರು. e-sಸುದ್ದಿ ತಂಡದ ಎಲ್ಲಾ ಲೇಖಕರು ಡಾ.ನಂದಾ ಕೊಟೂರು ಅವರನ್ನು ಅಭಿನಂದಿಸಿದ್ದಾರೆ.