ಮುಖ್ಯಮಂತ್ರಿ ಮಸ್ಕಿ ಭೇಟಿ ಹಿನ್ನಲೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ
ಯಾವುದೇ ಲೋಪವಾಗದಂತೆ ಎಚ್ಚರಿಕೆಯಿಂದ ಕಾರ್ಯಕ್ರಮ ಆಯೋಜಿಸಿ-ಆರ್.ವೆಂಕಟೇಶ ಕುಮಾರ
e-ಸುದ್ದಿಜಾಲ ಮಸ್ಕಿ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾ.20.ಶನಿವಾರ ಮಸ್ಕಿ ಪಟ್ಟಣಕ್ಕೆ ಆಗಮಿಸುತ್ತಿದ್ದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಮಾಡುವವರಿದ್ದು ಕಾರ್ಯಕ್ರಮಕ್ಕೆ ಯಾವುದೇ ಅಪಚಾರ ವಾಗದಂತೆ ಎಚ್ಚರಿಕೆಯಿಂದ ಶಿಷ್ಟಾಚಾರ ಪಾಲಿಸಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಶ್ರಮಿಸಬೇಕೆಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಹೇಳಿದರು.
ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಮಂಗಳವಾರ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಕಾರ್ಯಕ್ರಮದ ಬಗ್ಗೆ ವಿವರವಾಗಿ ತಿಳಿಸಿ ಅಧಿಕಾರಿಗಳು ಜವಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಸೂಚಿಸಿದರು.
ಮುಖ್ಯಮಂತ್ರಿಗಳು ಭ್ರಮರಾಂಬ ದೇವಸ್ಥಾನದಲ್ಲಿ 45 ಕ್ಕೂ ಹೆಚ್ಚು ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುತ್ತಾರೆ. ಶಂಕು ಸ್ಥಾಪನೆ ಕಾರ್ಯಕ್ರಮ ಮುಗಿದ ಮೇಲೆ ಪೊಲೀಸ್ ಠಾಣೆ ಪಕ್ಕದ ಬಯಲು ಮೈದಾನದಲ್ಲಿ ಸಾರ್ವಜನಿಕ ಕಾರ್ಯಕ್ರಮ ಜರುಗಲಿದೆ ಅಲ್ಲಿ ಕೂಡ ಅಧಿಕಾರಿಗಳು ಉಸ್ತುವಾರಿ ವಹಿಸಿಕೊಂಡು ಯವುದೇ ಲೋಪವಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಹೇಳಿದರು.
ಎಸ್.ಪಿ.ಪ್ರಕಾಶ ನಿಕ್ಕಿಂ ಮಾತನಾಡಿ ಶಾಂತಿ ಸುವ್ಯವಸ್ಥೆ ಮುಖ್ಯವಾಗಿದ್ದು ಪೊಲೀಸ್ ಅಧಿಕಾರಿಗಳೊಂದಿಗೆ ಇತರ ಇಲಾಖೆಯ ಅಧಿಕಾರಿಗಳು ಸಹಕರಿಸಿ ಕಾರ್ಯಕ್ರಮ ಯಶಸ್ವಿಯಾಗಿ ಮಾಡಲು ಶ್ರಮಿಸುವಂತೆ ಸೂಚಿಸಿದರು.
ವಿಶೇಷವಾಗಿ ಕರೊನಾ ಹರಡುವ ಭಯ ಇರುವದರಿಂದ ಸಾರ್ವಜನಿಕರಿಗೆ ಮಾಸ್ಕ, ಸ್ಯಾನಿಟೈಸರ್ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು. ಜಿಲ್ಲಾ ಮಟ್ಟದ ಅಧಿಕಾರಿಗಳಾದ ಜಿ.ಪಂ ಸಿಇಒ ಶೇಖ ಆಸೀಫ್ ತನ್ವೀರ್, ಎಸಿ ರಾಜಶೇಖರ ಡಂಬಳ, ತಹಸೀಲ್ದಾರ ಬಲರಾಮ ಕಟ್ಟಿಮನಿ, ಮಂಜುನಾಥ ಬ್ಯಾಗವಾಟ್, ಡಿವೈಎಸ್‍ಪಿ ಹುಲ್ಲೂರು, ಕುಲಕರ್ಣಿ, ಸಿಪಿಐ ದೀಪಕ್ ಬೂಸರಡ್ಡಿ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
———————–
ಹಂದಿಗಳಿವಿಯೇ ?
ಮಸ್ಕಿ ಪಟ್ಟಣದಲ್ಲಿ ಹಂದಿಗಳು ಇವಿಯೇ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಪುರಸಭೆ ಮುಖ್ಯಾಧಿಕಾರಿಗಳಿಗೆ ಪ್ರಶ್ನಿಸಿದರು. ಮುಖ್ಯಾಧಿಕಾರಿ ಹನುಮಂತಮ್ಮ ಮಸ್ಕಿಯಲ್ಲಿ ಹಂದಿಗಳು ಇಲ್ಲ ಎಂದು ಸಮುಜಾಯಿಸಿ ನಿಡಿದಳು.
ಮುಖ್ಯಮಂತ್ರಿಗಳು ಹೆಲಿಪ್ಯಾಡ್ ನಿಂದಕಾರ್ಯಕ್ರಮದ ಸ್ಥಳಕ್ಕೆ ಮೆರವಣಿಗೆ ಮೂಲಕ ಆಗಮಿಸುತ್ತಿರುವದರಿಂದ ಹಂದಿಗಳು ಅಡ್ಡ ಬರುವ ಸಾಧ್ಯತೆಗಳಿರುತ್ತವೆ. ಅದಕ್ಕಾಗಿ ಮುಂಜಗ್ರಾತವಾಗಿ ಹಂದಿ ಹಾಗೂ ಬೀದಿ ನಾಯಿಗಳು ಬರದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದರು.
ಮಸ್ಕಿ ಪಟ್ಟಂದ ಮುಖ್ಯ ರಸ್ತೆಯ ಎಡ ಬಲ ಭಾಗಗಳಲ್ಲಿ ಸ್ವಚ್ಛತೆ ಇಲ್ಲ. ಕಸ ಕಡ್ಡಿ ಹಾಗೂ ತ್ಯಾಜ್ಯ ವಸ್ತುಗಳು ಹಾಗೆಯೇ ಬಿದ್ದಿವಿ ಎಲ್ಲವನ್ನು ಎತ್ತಿಸಿ ಸ್ವಚ್ಛತೆಗೆ ಆಧ್ಯತೆ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.