ಗುಬ್ಬಚ್ಚಿ ಗೂಡು
ನನ್ನ ಹೃದಯದ
ಗೂಡಲ್ಲಿ ಪ್ರೀತಿಯ
ಮೊಟ್ಟೆಗಳನ್ನು ಬಚ್ಚಿಟ್ಟು
ಕಾಯುತ್ತಿರುವೆ ನಲ್ಲಾ….
ಒಲವಿನ ಮೊಟ್ಟೆಗಳು
ಮರಿಯಾಗಲು
ನಿನ್ನ ಬೆಚ್ಚನೆಯ ಕಾವು
ಬೇಕಾಗಿದೆಯಲ್ಲಾ……
ಚಿಲಿಪಿಲಿ ಶಬ್ದ
ಕೊಳಲಿನ ಇಂಚರ
ಹೃದಯದ ಪಿಸುಮಾತ
ಕೇಳಲು ಕಾದಿರುವೆನಲ್ಲಾ…..
ತಮ್ಮದೇ ಗೂಡಿನೊಳಗೆ
ಬಾಳಲಿ ಗುಬ್ಬಚ್ಚಿಗಳು
ಅನುದಿನವೂ ಎಂದು
ಹಾರೈಸುತ್ತಿರುವೆನಲ್ಲಾ.
–ಗೀತಾ ಜಿ.ಎಸ್
ಹರಮಘಟ್ಟ ಶಿವಮೊಗ್ಗ