e-ಸುದ್ದಿ, ಮಸ್ಕಿ
ಬಹುದಿನಗಳ ನಿರೀಕ್ಷೆಯ ಕೂತೂಹಲಕ್ಕೆ ಕಾರಣವಾಗಿದ್ದ ಮಸ್ಕಿ ಕ್ಷೇತ್ರದ ಉಪ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣ ಆಯೋಗ ಏಪ್ರೀಲ್ 17 ರಂದು ನಿಗದಿ ಮಾಡಿ ದಿನಾಂಕ ಪ್ರಕಟವಾಗುತ್ತಿದ್ದಂತೆ ಕ್ಷೇತ್ರದಲ್ಲಿ ಬಿರುಸಿನ ಚಟುವಟಕೆ ಆರಂಭವಾಗಿದೆ.
ಪಟ್ಟಣದ ಹಳೇ ಬಸ್ ನಿಲ್ದಾಣ ಕನಕವೃತ್ತ, ಅಶೋಕವೃತ್ತ ಹಾಗೂ ವಿವಿಧ ಸಾರ್ವಜನಿಕ ಜನನಿಬಿಡ ಪ್ರದೇಶದಲ್ಲಿ ರಾಜಕೀಯ ಧುರಿಣರ , ಸಿನಿಮಾ ನಟರ ಬ್ಯಾನರ್ಸ್ ಗಳು ರಾರಾಜಿಸುತ್ತಿದ್ದವು. ಪುರಸಭೆಯ ಅಧಿಕಾರಿಗಳು ಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ ಬ್ಯಾನರ್ ತೆರವುಗೊಳಿಸಲು ಮುಂದಾಗಿದ್ದಾರೆ.
ಮಾ.20 ಶನಿವಾರ ಮಸ್ಕಿ ಪಟ್ಟಣಕ್ಕೆ ಮುಖ್ಯಮಂತ್ರಿ ಬಿ.ಎಸ್‍ಯಡಿಯೂರಪ್ಪ ಅವರು ಆಗಮಿಸುವ ಹಿನ್ನಲೇಯಲ್ಲಿ ಬ್ಯಾನರ್ ಗಳನ್ನು ಈಗಾಗಲೇ ಅವರ ಅಭಿಮಾನಿಗಳು ಕಟ್ಟಿ ಪ್ರಚಾರ ಕಾರ್ಯ ನಡೆದಿತ್ತು. ಇದೀಗ ಬ್ರೇಕ್ ಬಿದಿದ್ದು ಬ್ಯಾನರ್ ತೆರವು ಕಾರ್ಯ ನಡೆದಿದೆ.
ಪುರಸಭೆಯಿಂದ ಪಟ್ಟಣದ ಹೊರವಲಯದ ಸಿಂಧನೂರು ಮತ್ತು ಲಿಂಗಸುಗೂರು ಭಾಗದ ಕಡೆ ಹಾಖಿದ ಸ್ವಾಗತ ಕಮಾನುಗಳಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಅವರ ಭಾವಚಿತ್ರವನ್ನು ಮುಚ್ಚಿದ್ದಾರೆ.
ಪುರಸಭೆಯ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ, ಪುರಸಭೆಯ ಅಧಿಕಾರಿಗಳಾದ ನಾಗರಾಜ ಸಿಬ್ಬಂದಿಗಳಿಂದ ಬ್ಯಾನರ್ ತೆಗೆಯುವಲ್ಲಿ ಮುಂದಾಗಿದ್ದರು.