ಸುದ್ದಿ, ಮಸ್ಕಿ
ತಾಲೂಕಿನ ಹುಲ್ಲೂರು ಗ್ರಾಮದಲ್ಲಿ ಹುಲ್ಲೂರು ಆರ್‍ಡಿಸಿಸಿ ಕ್ರಿಕೆಟ್ ಕ್ಲಬ್ ಹಮ್ಮಿಕೊಂಡಿದ್ದ ಓಪನ್ ಹಾರ್ಡ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದಾವಳಿಯಲ್ಲಿ ವಿಜೇತ ತಂಡಗಳಿಗೆ ಮಂಗಳವಾರ ಬಹುಮಾನ ವಿತರಣೆ ಮಾಡಿದರು.
ಅಮರಾಪೂರ ಕ್ರಿಕೆಟ್ ತಂಡ ಪ್ರಥಮ ಸ್ಥಾನ, ಗೌಡನಭಾವಿ ತಂಡ ದ್ವೀತಿಯ ಸ್ಥಾನ ಹಾಗೂ ಮಸ್ಕಿ ಕ್ರಿಕೆಟ್ ತಂಡ ತೃತೀಯಸ್ಥಾನ ಪಡೆದುಕೊಂಡಿವೆ. ಎಪಿಎಂಸಿ ಮಾಜಿ ನಿರ್ದೇಶಕ ಶೇಖರಪ್ಪಮೇಟಿ ಹುಲ್ಲೂರು ನಗದು ಬಹುಮಾನ ಹಾಗೂ ಕಪ್ ವಿತರಿಸಿದರು.
ಗ್ರಾಮದ ಮುಖಂಡರಾದ ಶಂಕರರಾವ್ ಕುಲಕರ್ಣಿ, ಉದ್ಬಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿಯ ಅಧ್ಯಕ್ಷ ಮಹಾಂತೇಶ ಕಡಾಮುಡಿಮಠ, , ಬಸವರಾಜ ಮಸ್ಕಿ, ಎಸ್ ಡಿಎಂಸಿ ಅಧ್ಯಕ್ಷ ಜನಾರ್ಧನ ಮೇಟಿ, ದೇವರಾಜ ಗುರಿಕಾರ ಅಮರಗುಂಡಪ್ಪ ಯರಡೊಣಿ, ಆದನಗೌಡ ಹೋಸಗೌಡ್ರು, ಬಾಷಾ ಆರ್. ಜೆ, ವೀರೇಶ ದೇವರಮನಿ, ಗ್ರಾಪಂ ಉಪಾಧ್ಯಕ್ಷ ಕೆಂಚಣ್ಣ ಕಾರಲಕುಂಟಿ, ಶರಣೇಗೌಡ ಪೊಲೀಸ್ ಪಾಟೀಲ್,ಅಯ್ಯಣ್ಣ ಕುರುಬರು, ಗುಂಡಪ್ಪ ಯರಡೋಣಿ, ಬಸಲಿಂಗಯ್ಯ ಹಿರೇಮಠ, ಮಲ್ಲನಗೌಡ ಹೋಸಗೌಡ್ರು ಮಲ್ಲಿಕಾರ್ಜುನ ಭಾವಿಕಟ್ಟಿ, ಶರಣಬಸವರಾಜ ಮೇಟಿ ಸೇರಿದಂತೆ ಇತರರು ಇದ್ದರು.