ವಿದ್ಯುತ್ ಪ್ರಸರಣ ನಿಗಮ ಖಾಸಗಿ ಕರಣಕ್ಕೆ ವಿರೋಧ

ವಿದ್ಯುತ್ ಪ್ರಸರಣ ನಿಗಮ ಖಾಸಗಿ ಕರಣಕ್ಕೆ ವಿರೋಧ

ಮಸ್ಕಿ : ಕೇಂದ್ರ ಸರ್ಕಾರ ವಿದ್ಯುತ್ ನಿಗಮಗಳಿಗೆ ೨೦೨೦ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರುವದವನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಮಸ್ಕಿ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ನಡುವಿನಮನಿ ಮತ್ತು ಕಾರ್ಯದರ್ಶಿ ಶ್ರೀಶೈಲ ಪಾಟೀಲ ಖಂಡಿಸಿದರು.
ಪಟ್ಟಣದ ವಿದ್ಯುತ್ ಪ್ರಸರಣ ಕಚೇರಿ ಮುಂಭಾಗದಲ್ಲಿ ಸೋಮವಾರ ಎಲ್ಲಾ ನೌಕರರು ಸೇರಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ಮಾಡಿದರು.
ಮಂಜುನಾಥ ನಡುವಿನಮನಿ ಮಾತನಾಡಿ ಕೇಂದ್ರ ಸರ್ಕಾರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ಮಾಡಿ ಖಾಸಗಿಕರಣ ಮಾಡಲು ಹೊರಟಿದೆ. ಇದರಿಂದ ನಿಗಮದ ನೌಕರರಿಗೆ ತೊಂದರೆಯಾಗುತ್ತದೆ. ಕೂಡಲೇ ಕೇಂದ್ರ ಸರ್ಕಾರ ತಿದ್ದುಪಡಿ ಮಾಡುವದನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.
ನಿಗಮದ ಅನೇಕ ನೌಕರರು ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು.

Don`t copy text!