ಮುಖ್ಯಮಂತ್ರಿ ಆಗಮನಕ್ಕೆ ಮಸ್ಕಿ ಸಜ್ಜು ಬಲೂನ್ ಹಾರಾಟಕ್ಕೆ ಚಾಲನೇ ನೀಡಿದ ಪ್ರತಾಪಗೌಡ ಪಾಟೀಲ

e-ಸುದ್ದಿ, ಮಸ್ಕಿ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾ.20 ರಂದು ಮಸ್ಕಿ ಪಟ್ಟಣಕ್ಕೆ ಆಗಮಿಸುವ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಮಸ್ಕಿ ಪಟ್ಟಣವನ್ನು ಅಲಂಕಾರ ಮಾಡಲು ಸಿದ್ದತೆ ನಡೆಸಿದ್ದಾರೆ. ಅದರ ಭಾಗವಾಗಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಶುಕ್ರವಾರ ಪ್ರಚಾರಾರ್ಥವಾಗಿ ಬಲೂನ್ ಹಾರಾಟಕ್ಕೆ ಚಾಲನೇ ನೀಡಿದರು.
ಪಟ್ಟಣದ ಪೊಲೀಸ್ ಠಾಣೆಯ ಹತ್ತಿರದ ಬಯಲು ಜಾಗದಲ್ಲಿ ಬಹಿರಂಗ ಸಭೆ ನಡೆಯುವ ಸ್ಥಳದ ಹತ್ತಿರ ಆಕರ್ಷವಾದ ಬಲೂನ್‍ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಳಿನಕುಮಾರ ಕಟೀಲು, ವಿಜಯೇಂದ್ರ ಯಡಿಯೂರಪ್ಪ ಹಾಗೂ ಪ್ರತಾಪಗೌಡ ಪಾಟೀಲ ಭಾವಚಿತ್ರ ಇರುವ ಬಲೂನ್ ನ್ನು ಹಾರಾಟ ಮಾಡಲಾಯಿತು.
ಬಹಿರಂಗ ಸಭೆ ನಡೆಯುವ ಸ್ಥಳದಲ್ಲಿ ತಾತ್ಕಲಿಕ ಬಯಲು ರಂಗ ಮಂಟಪ, 10 ಸಾವಿರಕ್ಕೂ ಹೆಚ್ಚು ಜನ ಕೂಳಿತುಕೊಂಡು ಕಾರ್ಯಕ್ರಮ ನೋಡುವದಕ್ಕಾಗಿ ಆಸನದ ವ್ಯವಸ್ಥೆ, ಲಿಂಗಸುಗೂರು, ಸಿಂಧನೂರು ಭಾಗದ ಕಡೆ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಅಲಂಕಾರಿಕ ಕಮಾನುಗಳನ್ನು ಸಿದ್ಧಪಡಿಸುತ್ತಿದ್ದಾರೆ.
ಕುರಿ ಮತ್ತು ಹುಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ, ತಾ.ಪಂ.ಸದಸ್ಯ ಗವಿಸಿದ್ದಪ್ಪ ಸಹುಕಾರ ಸಂತೆಕೆಲ್ಲೂರು, ಬಿಜೆಪಿ ಮುಖಂಡರುಗಳಾದ ಅಂದಾನಪ್ಪ ಗುಂಡಳ್ಳಿ, ವಿಶ್ವನಾಥ ಪಾಟೀಲ, ಉಮಾಕಾಂತಪ್ಪ ಸಂಗನಾಳ, ಬಸಪ್ಪ ಬ್ಯಾಳಿ, ಸೀನಯ್ಯ ಇಲ್ಲೂರು, ದೊಡ್ಡಪ್ಪ ಕಡಬೂರು, ಚಂದ್ರಕಾಂತ ಗೂಗೆಬಾಳ, ಯಲ್ಲೋಜಪ್ಪ ಕೊರೆಕರ್, ವೀರೇಶ ಕಮತರ್, ಶ್ರೀಧರ ಕಡಬೂರು, ಅಮರೇಶ ಪಾಟೀಲ, ಬಾಲಾಜಿ ಹಾಗೂ ಇತರರು ಇದ್ದರು.

ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಅಭಿಮಾನಿ ನಾಗರಾಜ ಪವಾರ್ ಅಡವಿಬಾವಿತಾಂಡ 50 ಸಾವಿರ ವೆಚ್ಚ ಮಾಡಿ ಬಲೂನ್ ಹಾರಾಟ ವ್ಯವಸ್ಥೆ ಮಾಡುವ ಮೂಲಕ ಅಭಿಮಾನ ವ್ಯಕ್ತಪಡಿಸಿದ್ದಾರೆ.

Don`t copy text!