ಕ್ರೀಡೆಯಲ್ಲಿ ಸೋಲು ಗೆಲುವು ಸಹಜ, ಸ್ಫರ್ಧಾ ಮನೋಭಾವದಿಂದ ಆಡಿ

e-ಸುದ್ದಿ, ಮಸ್ಕಿ
ಕ್ರೀಡೆಯಲ್ಲಿ ಸೋಲು ಗೆಲವು ಸಹಜವಾದದ್ದು, ಕ್ರೀಢಾಪಟುಗಳು ಸ್ಪರ್ಧಾ ಮನೋಭಾವದಿಂದ ಆಟ ಹಾಡಿ ಗೆದ್ದವರು ಹಿಗ್ಗಲಿ ಸೋತವರು ಕುಗ್ಗದೆ ಮುಂದಿನ ಬಾರಿ ಗೆಲವು ನಮ್ಮದೆ ಎಂಭ ಭಾವನೆ ತಾಳುವಂತೆ ಮರಿಬಸವಲಿಂಗ ತಾತನವರು ಹೇಳಿದರು.
ತಾಲೂಕಿನ ಬೆಳ್ಳಿಗನೂರು ಗ್ರಾಮದಲ್ಲಿ ಗುರುವಾರ ಮರಿಬಸವಲಿಂಗೇಶ್ವರ ಪ್ರೀಮಿಯರ್ ಲೀಗ್ ಕ್ರೀಕೆಟ್ ಟೂರ್ನಮೆಂಟ್‍ಗೆ ಮರಿಬಸವಲಿಂಗ ತಾತನವರು ಚಾಲನೇ ನೀಡಿ ಮಾತನಾಡಿದರು.
ಕ್ರೀಡಾಪಟುಗಳು ದೇಹದ ಸಾಮಾಥ್ರ್ಯ ಕಾಪಾಡಿಕೊಳ್ಳಬೇಕು. ಅದಕ್ಕಾಗಿ ಯುವಕರು ದುಶ್ಚಟದಿಂದ ದೂರ ಇರಬೇಕು. ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರು ಕ್ರೀಡೆಯಲ್ಲಿ ಭಾಗವಹಿಸುವಂತೆ ಸ್ವಾಮೀಜಿ ಸಲಹೆ ನೀಡಿದರು.
ಮಹಾಂತೇಶ ಜಾಲವಾಡಗಿ, ಶರಣಪ್ಪ ಐರಡ್ಡಿ, ಶರಭಯ್ಯ ತಾತ, ಕೆಂಚನಗೌಡ, ಸಿದ್ದಯ್ಯ ತಾತ, ಪಂಪಾಪತಿ ಗದ್ದಿ, ಶೇಖರಪ್ಪ, ಬೀರಪ್ಪ ಅಗಸಿಮನಿ, ರವಿಕುಮಾರ, ಗ್ರಾ.ಪಂ.ಉಪಾಧ್ಯಕ್ಷ ಚಂದ್ರು,, ದೇವರಾಜ್ ಪೊಲೀಸ್ ಪಾಟೀಲ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Don`t copy text!