e-sಸುದ್ದಿ ಮಸ್ಕಿ
ತಾಲೂಕಿನ ಬಗ್ಗಲಗುಡ್ಡ ಗ್ರಾಮ ಸೇರಿದಂತೆ ಹಲವಡೆ ಚಿರತೆ ಕಾಣಿಸಿಕೊಂಡ ಕಾರಣ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ .
ಕಳೆದ ಮುರು ದಿನಗಳ ಹಿಂದೆ ಬಗ್ಗಲಗುಡ್ಡ ಗ್ರಾಮದಲ್ಲಿ ಕುರಿಗಾಯಿಗಳಿಗೆ ಚಿರತೆ ಕಾಣಿಸಿಕೊಂಡಿದೆ. ತಮ್ಮ ದನ ಕರು ಹಾಗೂ ಕುರಿಗಳನ್ನು ಸುರಕ್ಷತವಾಗಿ ಕರೆದುಕೊಂಡು ಬಂದಿದ್ದಾರೆ.
ಶುಕ್ರವಾರ ತಾಲೂಕಿನ ಮಸ್ಕಿ ತಾಂಡ ಮತ್ತು ವೆಂಕಟಾಪುರ ಗ್ರಾಮದ ಹೊರವಲಯದಲ್ಲಿ ಚಿರತೆ ಕಾಣಿಸಿಕೊಂಡಿದೆ. ಇದರಿಂದಾಗಿ ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ.
ಸುತ್ತಮೂತ್ತಲಿನ ಹಳ್ಳಿಗಳ ಗ್ರಾಮಸ್ಥರು ಚಿರತೆಯನ್ನು ಹಿಡಿಯುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳ ಮೊರೆ ಹೋಗಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಗ್ಗಲಗುಡ್ಡದಲ್ಲಿ ಚಿರತೆ ಹಿಡಿಯುವ ಬೊನು ಹಾಕಲಾಗಿದ್ದು ಅರಣ್ಯ ಇಲಾಖೆಯ ಸಿಬ್ಬಂದಿ ಅಲ್ಲಲ್ಲಿ ಬಿಡು ಬಿಟ್ಟಿದ್ದಾರೆ.
ಆತಂಕ ಃ ಮಸ್ಕಿ ಪಟ್ಟಣದಲ್ಲಿ ಮಾ.20 ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬರುತ್ತಿರುವ ಹಿನ್ನಲೆಯಲ್ಲಿ ಹಳ್ಳಿಗಳಿಂದ ಗ್ರಾಮಸ್ಥರು ಮಸ್ಕಿಗೆ ಹೋಗದಂತೆ ಆಯಾ ಗ್ರಾಮದ ಮಹಿಳೆಯರು ತಮ್ಮ ಮನೆಯವರನ್ನು ಚಿರತೆ ಬಯದಿಂದಾಗಿ ಹೋಗದಂತೆ ತಡೆ ಹಿಡಿಯುತ್ತಿದ್ದಾರೆ ಎಂದು ತಿಳಿದು ಬಂದಿದೆ.