e-ಸುದ್ದಿ, ಮಸ್ಕಿ
ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಸ್ಥಿತ್ವಗೊಳ್ಳಲು, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಹಿಂದುಳಿದ ವರ್ಗದ ನಾನು ಸಚಿವನಾಗಲು ಪ್ರತಾಪಗೌಡ ಪಾಟೀಲ ಕಾರಣ. ಅವರು ರಾಜಿನಾಮೆಯ ಕಾರಣದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಉಪ ಚುನಾವಣೆಯಲ್ಲಿ ನಾನು ಅವರನ್ನು ಗೆಲ್ಲಿಸಿಕೊಂಡು ಬರುವದಾಗಿ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಹತ್ತಿರದ ಬಯಲು ಜಾಗದಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಎಸ್.ಸಿ ಮತ್ತು ಎಸ್.ಟಿ ಗೇ ಮೀಸಲಾತಿ ನೀಡುವೆ ಃ ರಾಜ್ಯದಲ್ಲಿ ಬಹುತೇಕ ಸಮಾಜಗಳು ಮೀಸಲಾತಿಗಾಗಿ ಹೋರಾಟ ಮಾಡುತ್ತಿವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತು ಕೊಟ್ಟರೆ ಮುಗಿತು. ಮಾತು ತಪ್ಪುವವರಲ್ಲ. ಕೆಲ ದಿನಗಳವರೆಗೆ ಎಸ್.ಸಿ ಮತ್ತು ಎಸ್.ಟಿ ಜನಾಂಗ ಕಾಯಿರಿ ಮೀಸಲಾತಿಯನ್ನು ಹೆಚ್ಚಿಸುತ್ತೇನೆ ಬೇಕಾದರೆ ನಾನು ನನ್ನ ರಕ್ತದಲ್ಲಿ ಬರೆದುಕೊಡುವೆ ಎಂದು ಸಚಿವ ಬಿ.ಶ್ರೀರಾಮೂಲ ಹೇಳಿದರು.
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ ಕಾಂಗ್ರೆಸ್‍ನವರು ಹಿಂದುಳಿದ ಜನಾಂಗದವರನ್ನು ಮತ ಬ್ಯಾಂಕ್ ಆಗಿ ನೋಡಿದರೆ ಹೊರತು ಅವರ ಕಲ್ಯಾಣವನ್ನು ಮಾಡಲಿಲ್ಲ. ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಸಂಸತ್‍ಗೆ ಅವಿರೋಧವಾಗಿ ಆಯ್ಕೆ ಮಾಡಬೇಕಾಗಿತ್ತು. ಆದರೆ ಕಾಂಗ್ರೆಸ್‍ವರೆ ಸೋಲಿಸುವ ಮೂಲಕ ನೀಚ ರಾಜಕಾರಣ ಮಾಡಿದ್ದಾರೆ. ಬಿಜೆಪಿ ಅಂಬೇಡ್ಕರ್ ಮಹಾನ್ ನಾಯಕನಿಗೆ ಭಾರತ ರತ್ನ ನೀಡಿ ಗೌರವಿಸಿದೆ ಎಂದರು.
ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪ ಮಾತನಾಡಿ ಕುರಬರನ್ನು ಎಸ್.ಟಿಗೆ ಸೇರಿಸುವ ಹೊರಾಟಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಸದೆ ಬರಿ ಸುಳ್ಳು ಹೇಳುತ್ತಿದ್ದಾನೆ. ಅಧಿಕಾರ ಇದ್ದಾಗ ಒಳಿತನ್ನು ಮಾಡದ ಹಿಂದುಳಿದ ನಯಕನ ಹಣೆ ಪಟ್ಟಿ ಕಟ್ಟಿಕೊಂಡುವರು ಮುಂದಿನ ಮುಖ್ಯಮಂತ್ರಿ ಆಗಲು ಹಗಲು ಕನಸು ಕಾಣುತ್ತಿದ್ದಾರೆ ಎಂದರು.
ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸೌದಿ ಮಾತನಾಡಿ ಮಸ್ಕಿ ಕ್ಷೇತ್ರದ ಅಭಿವೃದ್ದಿಗಾಗಿ ಪ್ರತಾಪಗೌಡ ಪಾಟೀಲ ಅವರನ್ನು ಗೆಲ್ಲಿಸಿ ಮುಖಂಡರ ಮಾತನ್ನು ಕಡೆಗಣಿಸಿ ಪಕ್ಷ ತೊರೆದ ಬಸನಗೌಡ ತುರ್ವಿಹಾಳ ಅವರನ್ನು ಸೋಲಿಸಿ ಮನೆಗೆ ಕಳಿಸಿ ಎಂದರು.
ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಮಾತನಾಡಿ ಕಾಂಗ್ರೆಸ್ ಪಕ್ಷ ದೇಶದಲ್ಲಿ ಮತ್ತು ರಾಜ್ಯದಲ್ಲಿ ನಿರ್ನಾಮವಾಗುತ್ತಿದೆ. ಡಿಕೆಸಿ ಮತ್ತು ಸಿದ್ದರಾಮಯ್ಯ ಇಬ್ಬರು ಮುಖ್ಯಮಂತ್ರಿ ಯಾರಬೇಕೆಂದು ಬಹಿರಂಗ ಕಾದಟದಲ್ಲಿ ಕಾಲಹರಣ ಮಾಡುತ್ತಿದ್ದಾರೆ ಇದರಿಮದ ಬೇಸತ್ತು ಬಿಜೆಪಿ ಸೇರಿದ್ದು ಪಕ್ಷ ಕೊಡುವ ಜವಬ್ದಾರಿಯನ್ನು ನಿಭಾಯಿಸುವೆ ಎಂದರು.
ಸಂಸದ ಕರಡಿ ಸಂಗಣ್ಣ, ಹುನುಗುಂದ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿದರು. ಕೆ.ವಿರುಪಾಕ್ಷಪ್ಪ ಅವರ ಬೆಂಬಲಿಗರು ಇದೇ ಸಂದರ್ಬದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.