ತ್ಯಾಗ— ಬಲಿದಾನ–ಬೇಡಿಕೆ
ಜಗತ್ತಿನ ಎಲ್ಲ ಧರ್ಮಗಳು ಒಳ್ಳೆಯದನ್ನೇ ಬಯಸುತ್ತವೆ ಹಾಗೆಯೇ ಜಗತ್ತಿನ ಎಲ್ಲ ಧರ್ಮಗಳು ವ್ಯಕ್ತಿಗತವಾಗಿ, ತನ್ನ ಕುಟುಂಬ, ಹಾಗೂ ಸಮಾಜದ ಒಳಿತಿಗಾಗಿ ದೇವರಲ್ಲಿ ಮೊರೆ ಇಟ್ಟು ಯಜ್ಞಯಾಗಾದಿ ಹೋಮ-ಹವನ-ಪೂಜೆ– ಪುರಸ್ಕಾರ, ಭಜನೆ, ಪ್ರಾರ್ಥನೆ, ಕೀರ್ತನೆ ಗಳನ್ನು ಮಾಡಲು ಉಪದೇಶಿಸುತ್ತವೆ ಆದರೆ ಬಸವಧರ್ಮ ಅಥವಾ ಶರಣಧರ್ಮ ಅಥವಾ ಲಿಂಗಾಯತ ಧರ್ಮ ಇದ್ಯಾವ ಗಳಿಗೆ ಮಹತ್ವ ನೀಡದೆ ಕಾಯಕ ಮತ್ತು ದಾಸೋಹ ಮಹತ್ವನೀಡಿ ಜಗತ್ತಿನ ಕಷ್ಟಕಾರ್ಪಣ್ಯಗಳು ವ್ಯಕ್ತಿಗತವಾಗಿ ತಮಗೆ ಬರಲೆಂದು “ಸರ್ವೇ ಜನಾಃ ಸುಖಿನೋ ಭವಂತು” ಎನ್ನುವ ರೀತಿಯಲ್ಲಿ ಶರಣರು ನಿರಾಕಾರ ರೂಪ ಶಿವನಲ್ಲ ಕೇಳಿಕೊಂಡಿದ್ದಾರೆ. ಕಲ್ಯಾಣ ಕ್ರಾಂತಿ ಆಗದೇ ಹೋಗಿದ್ದರೆ ಜಗತ್ತಿನಲ್ಲಿ ಅತ್ಯಂತ ಧರ್ಮಗ್ರಂಥ 12ನೇ ಶತಮಾನದ ಬಸವಾದಿ ಪ್ರಮಥರ ವಚನಗಳು ಜಗತ್ತಿನ ಮೂಲೆ ಮೂಲೆಗೆ ಪಸರಿಸಿ ವಿಶ್ವಧರ್ಮ ವಾಗಿ ಹೊರಹೊಮ್ಮುತ್ತಿತ್ತು. ಆದರೆ ದುರಂತವೆನ್ನುವಂತೆ ಸಾಗರ ರು ಕೋಟಿ ವಚನಗಳು ಸುಟ್ಟು ಭಸ್ಮವಾದವು, ಹಾದಿ ಬೀದಿಯಲ್ಲಿ ಮರೆಯಾಗಿ ಹೋದವು. ಕಲ್ಯಾಣ ಕ್ರಾಂತಿಯ ಒಂದು ದುರ್ಘಟನೆಯಲ್ಲಿ ಶರಣರು ಯಾವ ಆಸ್ತಿಯನ್ನು ಬಯಸದೆ ವಚನ ಸಾಹಿತ್ಯಗಳನ್ನು ಹೆಗಲಿಗೆ ಬಗಲಿಗೆ ಕಟ್ಟಿಕೊಂಡು ತಲೆಯ ಮೇಲೆ ಹೊತ್ತುಕೊಂಡು ಯುದ್ಧವನ್ನು ಮಾಡುತ್ತಾ ಕರ್ನಾಟಕದ ವಿವಿಧ ಮೂಲೆಮೂಲೆಗೆ ತಂಡೋಪತಂಡವಾಗಿ ಸಂಚರಿಸಿ ಅಲ್ಲಿ ಇಲ್ಲಿ ವಚನ ಸಾಹಿತ್ಯದ ಕಟ್ಟುಗಳನ್ನು ಕೊಡದೇ ಹೋಗಿದ್ದರೆ, ವಚನ ಸಂಶೋಧನಾ ಪಿತಾಮಹ ಡಾಕ್ಟರ್ ಫ.ಗು. ಹಳಕಟ್ಟಿಯವರು ಹಾಗೂ ಯಡಿಯೂರ ಸಿದ್ದಲಿಂಗೇಶ್ವರ ಮಹಾಸ್ವಾಮಿಗಳು ಅಳಿದುಳಿದ ವಚನಗಳನ್ನು . ಸಂರಕ್ಷಿಸಿ ನಮಗೆ ಕೊಡದೆ ಹೋಗಿದ್ದರೆ ಬಸವಧರ್ಮದ ಬಗೆಗೆ ನಾವ್ ಇಟ್ಟುಕೊಂಡ ಅಭಿಮಾನ, ಪ್ರೀತಿ ಗೌರವ ಇಲ್ಲದಂತಾಗುತ್ತಿತ್ತು.
ಪ್ರತಿದಿನ ಅನುಭವಮಂಟಪದ ವಚನ ಭಂಡಾರಕ್ಕೆ ಸಾವಿರಾರು ವಚನಗಳು ಸೇರ್ಪಡೆಯಾಗುತ್ತಿದ್ದವು ಆದರೆ ನಾವಿಂದು ಕಳೆದುಕೊಂಡ ವಚನಗಳ ಸಂಖ್ಯೆ ಸಾವಿರಾರು ಕೋಟಿ ವಚನಗಳು.
ಅಲ್ಲಿಯ ಗಳ ವಚನ ಎರಡೆಂಬತ್ತು ಕೋಟಿ ಅಪ್ಪಯ್ಯ ಗಳ ವಚನ ನಾಲ್ಕು ಲಕ್ಷದ ಮೂವತ್ತಾರು ಸಾಸಿರ. ಎಮ್ಮೆಗಳವಚನ ವಚನಕೊಂದು ನೀಲಮ್ಮನ ವಚನ ಲಕ್ಷದ ಹನ್ನೊಂದು ಸಾಸಿರ. ಗಂಗಾಂಬಿಕೆಯ ವಚನ ಲಕ್ಷದ ಎಂಟು ಸಾಸಿರ. ಎಮ್ಮಕ್ಕ ನಾಗಯ್ಯ ವಚನ ಮೂರು ಲಕ್ಷದ ತೊಂಬತ್ತಾರು ಸಾಸಿರ. ಮಡಿವಾಳ ನನ್ನ ವಚನ ಮೂರುಕೋಟಿ ಮುನ್ನೂರು. ಹಡಪದಯ್ಯ ಗಳ ವಚನ ಹನ್ನೊಂದು ಸಾಸಿರ. ಮರುಳಸಿದ್ಧನ ವಚನ ಅರವತ್ತೆಂಟು ಸಾಸಿರ. ಇಂತಪ್ಪ ವಚನರಚನೆಯ ಬಿಟ್ಟು ಹುಡಿಮಣ್ಣ ಹೊಯ್ಯದೆ ಮಾಬನೆ ಕುತ್ಸಿತ ಕಾವ್ಯಾಲಂಕಾರ ನೋಡುವವರ ನೋಡಿ, ಮಹಾದೇವ ಕಪಿಲಸಿದ್ಧಮಲ್ಲಿಕಾರ್ಜುನ
ಇಲ್ಲಿ ಕೇವಲ 9 ಜನ ಶರಣ-ಶರಣೆಯರ ವಚನಗಳನ್ನು ರಚಿಸಿರುವ ವಚನಗಳ ಸಂಖ್ಯೆ ನೂರಾರು ಕೋಟಿಯಾಗುತ್ತದೆ ಕಲ್ಯಾಣ ನಾಡಿನ ಸರ್ವ ಶರಣ-ಶರಣೆಯರು ಏಳನೂರದ ಎಪ್ಪತ್ತು ಗಣಂಗಳ ಲೆಕ್ಕ ಹಾಕಿದರೆ ಸಾವಿರಾರು ಕೋಟಿ ವಚನಗಳು ಲಭ್ಯವಾಗುತ್ತಿದ್ದವು ಕಲ್ಯಾಣ ಕ್ರಾಂತಿ ನಮ್ಮ ನಾಡಿನ ಅತ್ಯಂತ ದೊಡ್ಡ ದುರಂತ.
ಶರಣ-ಶರಣೆಯರು ಜಗತ್ತಿನ ಕಷ್ಟ ನೋವುಗಳನ್ನ ನಮಗೆ ನೀಡಿ ಚಂದು ಸೃಷ್ಟಿಕರ್ತನಲ್ಲಿ ವಿನಂತಿಸಿಕೊಂಡಿದ್ದಾರೆ ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ ಎನ್ನುವ ಭಾವನೆಯನ್ನು ಹೊಂದಿದ್ದರು
ವೀರ ವೈರಾಗ್ಯ ನಿಧಿ ಅಕ್ಕಮಹಾದೇವಿಯ ಈ ವಚನವೊಂದೆ ಸಾಕು, ಜಗತ್ತಿನ ಸರ್ವ ಜನಾಂಗವು ಸುಖದಿಂದ ಇದ್ದು ನನಗೆ ಮಾತ್ರ ಕಷ್ಟವನ್ನು ಕೊಡು ಎಂಬ ಬಯಕೆಯನ್ನು ಇಟ್ಟಿದ್ದು ಪರಮಾಶ್ಚರ್ಯ.
ಮನೆ ಮನೆ ತಪ್ಪದೆ ಕೈಯೊಡ್ಡಿ ಬೇಡುವಂತೆ ಮಾಡಯ್ಯ. ಬೇಡಿದೊಡೆ ಇಕ್ಕದಂತೆ ಮಾಡಯ್ಯಇಕ್ಕಿದೊಡೆ ನೆಲಕ್ಕೆ ಬೀಳುವಂತೆ ಮಾಡಯ್ಯ. ನೆಲಕ್ಕೆ ಬಿದ್ದೊಡೆ ನಾನೆತ್ತಿ ಕೊಂಬುದಕ್ಕೆ ಮುನ್ನವೇ ಶುನಿ ಎತ್ತಿ ಕೊಂಬಂತೆ ಮಾಡಯ್ಯ ಚೆನ್ನಮಲ್ಲಿಕಾರ್ಜುನಯ್ಯ
ಎಂತಹ ಅದ್ಭುತ ವಚನ ಇದಾಗಿದೆ.ಇದು ಶರಣು ಶರಣೆಯರ ದಿಟ್ಟ ನಿಲುವಾಗಿದೆ.ಸ್ವ ಸುಖ ಬಯಸಿದವರಲ್ಲ ನಮ್ಮ ಶರಣ-ಶರಣೆಯರು.
ಅತ್ತಲಿತ್ತ ಹೋಗದಂತೆ ಹೇಳವನ ಮಾಡಯ್ಯ ತಂದೆ ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ ಮತ್ತೊಂದು ಕೇಳದಂತೆ ಕಿವುಡನ ಮಾಡಯ್ಯ ತಂದೆ ಕೂಡಲಸಂಗಮದೇವ ನಿಮ್ಮ ಶರಣರ ಪಾದವಲ್ಲದೆ ಅನ್ಯವಿಷಯಕ್ಕಿಳಸದಂತೆ ಇರಿಸಯ್ಯ ಕೂಡಲಸಂಗಮದೇವ
ಎನಿಸೆನಿಸೆಂದೊಡೆ ನಾ ದೃತಿಗೆಡನಯ್ಯಾ. ಎಲುದೋರಿದರೆ ನರ ಹರಿದರೆ, ಕರುಳು ಕುಪ್ಪಳಿಸಿದರೆ ನಾ ದೃತಿಗೆಡನಯ್ಯಾ. ಸಿರ ಹರಿದು ಅಟ್ಟೆ ನೆಲಕ್ಕೆ ಬಿದ್ದರೆ ನಾಲಿಗೆ “ಕೂಡಲಸಂಗಾ, ಶರಣೆ”ನ್ನುತ್ತಿದ್ದೀತಯ್ಯಾ.
ಕಾಗೆ ವಿಷ್ಟಿಸುವ ಹೊನ್ನ ಕಳಿಸುವಾಗಿರದೆ ಶರಣರು ಜೋಗೈಸುವ ಚಮ್ಮಾವುಗೆಯ ಮಾಡಯ್ಯ
ಹೀಗೆ ಸಾವಿರಾರು ವಚನಗಳು ತಮ್ಮ ತ್ಯಾಗ-ಬಲಿದಾನಗಳ ಪ್ರತೀಕವಾಗಿ ಬಿಂಬಿಸಲ್ಪಡುತ್ತದೆ. ಕಲ್ಯಾಣ ಕ್ರಾಂತಿಯ ನಂತರ ಶರಣರು ಅನುಭವ ಮಂಟಪದ ಲ್ಲಿರುವ ಯಾವ ವಸ್ತುಗಳನ್ನು ಎತ್ತಿಕೊಳ್ಳದೆ ಶರಣ-ಶರಣೆಯರು ಬರೆದ ವಚನಗಳ ಸಂರಕ್ಷಣೆಗಾಗಿ ಕೈಯಲ್ಲಿ ಖಡ್ಗವನ್ನು ಹಿಡಿದು ಹೋರಾಡಿ ಗುರಿಯನ್ನು ತಲುಪಲು ಹೋಗುವಾಗ ನೂರಾರು ಶರಣರು ದಾರಿ ಮಧ್ಯದಲ್ಲಿ ಲಿಂಗೈಕ್ಯರಾಗಿದ್ದಾರೆ ಇಂತಹ ಮಹಾನ್ ದಾರ್ಶನಿಕರು ಕೊಡಮಾಡಿದ ವಚನ ಸಾಹಿತ್ಯಗಳ ಅಧ್ಯಯನ,ಸಂರಕ್ಷಣೆ ಹಾಗೂ ಆಚರಣೆ ನಮ್ಮ-ನಿಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ. ನಾವೇನು ಸಾವಿರಾರು ವರ್ಷ ಬದುಕಿ ಉಳಿಯುವುದಿಲ್ಲ ಬದುಕಿ ಉಳಿದಷ್ಟು ದಿನ ಶರಣ ಸಂಸ್ಕೃತಿಯನ್ನು ಉಳಿಸೋಣ ಬೆಳೆಸೋಣ ಜೈ ಬಸವೇಶ.
–ರವೀಂದ್ರ ರುದ್ರಪ್ಪ ಪಟ್ಟಣ
ಮುಳಗುಂದ—– ರಾಮದುರ್ಗ
9481931842