…………...ನನ್ನ ಕನಸು……….
ಆಕಾಶದ ತಾರೆ ಜಾರಿ ನನ್ನ ಮಡಿಲು ಸೆರಿತಂದು
ನಿದ್ದೆ ಇರದೆ ಕಳೆದ ಆ ರಾತ್ರಿ ಬೆಳಗಾಗುವುದನ್ನೇ ಕಾದು ಕುಳಿತ ರಾತ್ರಿ
ಚಂದ್ರ ಜಾರುವ ಸಮಯ
ಸೂರ್ಯ ಉದಯಿಸಲು ಸಜ್ಜಾಗಿ ನಿಂತ ಸಮಯ
ಆಕಾಶದಲ್ಲಿ ಗುಡುಗು ಮಿಂಚುಗಳ ಆರ್ಭಟದ ನಡುವೆ ತಾರೆಯೊಂದು ಜಾರಿ ನನ್ನ ಮಡಿಲು ಸೇರಿತು..
ನಿನ್ನ ಮೊದಲ ಅಳುವಿನ ದನಿಗೆ
ಗುಡುಗು ಮಿಂಚುಗಳು ಮೌನವಾದವು
ನೀನು ಕಣ್ಣು ತೆರದಾಗ ಕಾರ್ಮೋಡಗಳು ಸೇರಿದವು
ದೇವತೆಗಳು ಪನ್ನೀರು ಚೆಲ್ಲಿದಂತೆ ತುಂತುರು ಹನಿ
ನೀನು ನನ್ನ ಮಡಿಲಿಗೆ ಬಂದಾಗ
ಬಾನಲ್ಲಿ ಸೂರ್ಯೋದಯ
ಅಂದು ಆಗಿದ್ದು ನನ್ನ ಬಾಳಿಗೆ ತಾಯ್ತನದ ಉದಯ
ಇಂದಿಗೂ ನನ್ನದೊಂದೇ ಬಯಕೆ
ಆ ತಾರೆ ಆಕಾಶದಲ್ಲಿ ಮಿನುಗಲಿ
ಭಾರತಾoಬೆಗೆ ಬೆಳಕಾಗಲಿ
–ಗಿರಿಜಾ ಜಾಲಿಹಾಳ