ಮಹಿಳಾ ಸಬಲೀಕರಣ ಮತ್ತು ಸ್ವಾವಲಂಬನೆ,
ಭಾರತದಲ್ಲಾಗಲಿ ಅಥವಾ ಇತರ ದೇಶಗಳಲ್ಲಾಗಲಿ ಸ್ತ್ರೀ ಸಮಾನತೆ ಎಂಬುದು ಒಂದು ಹುಸಿಮಾತು .
ಅಮೆರಿಕೆಯಲ್ಲಿ ಇಲ್ಲಿಯವರೆಗೂ ಒಬ್ಬ ಮಹಿಳೆ ರಾಷ್ಟ್ರಾಧ್ಯಕ್ಷರಾದ ಉದಾರಣೆಗಳಿಲ್ಲ .ಆದರೆ ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮದಲ್ಲಿ ಅಬಲೆಯರು ಮಹಿಳೆಯರು ಶ್ರಮಿಕ ಶೋಷಿತರು ದಮನಿತರು ಕಾರ್ಮಿಕರು ಪಾಲ್ಗೊಂಡು ಸಾರ್ವಕಾಲಿಕ ಸಮಾನತೆ ಹಾಗೂ ಸ್ವಾತಂತ್ರವನ್ನು ಕಂಡುಕೊಂಡರು .
ಶರಣರು ಸ್ತ್ರೀ ಸಮಾನತೆ
ವಾಕ್ ಸ್ವತಂತ್ರ ಅಭಿವ್ಯಕ್ತಿ ಸ್ವತಂತ್ರ
ಧಾರ್ಮಿಕ ಹಕ್ಕು
ಆರ್ಥಿಕ ಹಕ್ಕು ಸಮಾನತೆ
ವೈಚಾರಿಕ ಪ್ರಜ್ಞೆ
ಆಧ್ಯಾತ್ಮಿಕ ಸಮಾನತೆ
ಅರಿವು ಆಚಾರ ಅನುಭವದ
ಸಾಮಾಜಿಕ ಸಮಾನತೆ ಇವು ಶರಣರು ಜಗತ್ತಿಗೆ ಮೊಟ್ಟ ಮೊದಲಿಗೆ ಕೊಟ್ಟ ಕೊಡುಗೆಗಳು
ಶರಣರು ಹೆಣ್ಣನ್ನು ಗೌರವಿಸಿದ್ದಾರೆ .
ಹೆಣ್ಣು ಹೆಣ್ಣಲ್ಲ ಹೆಣ್ಣು ರಕ್ಕಸಿಯಲ್ಲ
ಸ್ವತಃ ಕಪಿಲ ಸದ್ಧ ಮಲ್ಲಿಕಾರ್ಜುನ ಎಂದರು
ಮೊಲೆ ಮೂಡಿ ಬಂದಡೆ ಹೆಣ್ಣುನೆಂಬರು ಗಡ್ಡ ಮಿಸಿ ಬಂದರೆ ಗಂಡನೆಂಬರು
ಒಳಗೆ ಸುಳಿವ ಆತ್ಮ ಹೆಣ್ಣು ಅಲ್ಲ ಗಂಡೂ ಅಲ್ಲ
ವಚನಕಾರರು ಹೆಣ್ಣು ಗಂಡು ಎಂಬ ಭೇದವಿಲ್ಲದೆ ಎಲ್ಲರಿಗೂ ಅಕ್ಷರ ಜ್ಞಾನ ಮತ್ತು ಅಭಿವ್ಯಕ್ತಿ ಸ್ವತಂತ್ರ ಸಮಾನತೆ ನೀಡಿದರು
ಆರ್ಥಿಕ ನೀತಿ ಶರಣರಲ್ಲಿ ಕಡ್ಡಾಯವಾಗಿತ್ತು ಅದು ಸತ್ಯ ಶುದ್ಧ ಕಾಯಕವಾಗಿತ್ತು .ಆಯ್ದಕ್ಕಿ ಲಕ್ಕಮ್ಮ ಅಗತ್ಯಕ್ಕಿಂತ ಹೆಚ್ಚಿನ ಆದಾಯ ಬೇಡ ಅದನ್ನು ಮಹಾಮನೆಗೆ ತಿರುಗಿಸಿ ಬರಲು ಗಂಡನಿಗೆ ಸೂಚಿಸಿದರೆ
ಮುಕ್ತಾಯಕ್ಕ ಅಜಗಣ್ಣ ಲಿಂಗೈಕ್ಯವಾದಾಗ ಶರಣರಿಗೆ ಸಾವಿಲ್ಲ ಶರಣರು ಸಾವನು ಅರಿಯರು ಎಂದಿದ್ದಾಳೆ
ಅಕ್ಕ ಮಹಾದೇವಿ ವೈರಾಗ್ಯ ತವನಿಧಿ -ಅನುಭದ ಅರಿವಿನ ಸಿರಿ ,ನೀಲಮ್ಮಳ ಸಮಯ ಪ್ರಜ್ಞೆ ಅಕ್ಕ ನಾಗಮ್ಮನ ಕೆಚ್ಚು ಬೊಂತಾದೇವಿಯ ಸ್ಥಿತ ಪ್ರಜ್ಞೆ ಹಡಪದ ಲಿಂಗಮ್ಮ ಕಾಳವ್ವೆ ಸತ್ಯಕ್ಕ ಅಮುಗೆ ರಾಯಮ್ಮ ಹೀಗೆ ಶರಣೆಯರು ಸ್ವರ್ಗವೆಂಬ ಪರಿಕಲ್ಪನೆಯನ್ನು ದೂರು ಮಾಡಿ ಸ್ವತಂತ್ರವಾಗಿ ಸ್ವಾವಲಂಬಿತರಾಗಿ ಬದುಕಿದರು ಕಲ್ಯಾಣ ಪಟ್ಟಣವನ್ನೇ ಕೈಲಾಸ ಮಾಡಿದ ಶರಣೆಯರು ನಿತ್ಯ ಸ್ಮರಣೀಯರು
ಡಾ.ಶಶಿಕಾಂತ ಪಟ್ಟಣ ರಾಮದುರ್ಗ