ಕಾರ್ಯನಿರತ ಪತ್ರಕರ್ತರ ಸಂಘದ ತಾತ್ಕಲಿಕ ಕಚೇರಿ ಉದ್ಘಾಟನೆ

e-ಸುದ್ದಿ, ಮಸ್ಕಿ
ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಖಾಸಗಿ ಮಳಿಗೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಸ್ಕಿ ಘಟಕದ ತಾತ್ಕಾಲಿಕ ಕಚೇರಿಯನ್ನು ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಬುಧವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿ, ಮಾಧ್ಯಮ ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ನೇರ ಮತ್ತು ನಿಷ್ಠುರ ವರದಿಗಾರಿಕೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಆದರೆ ಇಂತಹ ಸೇವೆಯಲ್ಲಿರುವ ಬಹುತೇಕ ಪತ್ರಕರ್ತರಿಗೆ ಸಾಮಾಜಿಕ ಭದ್ರತೆಯೇ ಇಲ್ಲ. ಸರ್ಕಾರ ಮಾಧ್ಯಮದವರಿಗೂ ಭದ್ರತೆ ನೀಡಬೇಕು. ಪತ್ರಕರ್ತರು ಪ್ರಮಾಣಿಕ ಮತ್ತು ನಿಷ್ಠೆಯಿಂದ ಸೇವೆ ಮಾಡುವ ಮೂಲಕ ಸಾಮಜದಲ್ಲಿ ಒಳಿತನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಶಿವಣ್ಣ ನಾಯಕ, ಮುಖಂಡ ಬಸನಗೌಡ ಪೊ.ಪಾ., ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಕಾಶ ಮಸ್ಕಿ, ಅಬ್ದುಲ್ ಅಜೀಜ್, ವೀರೇಶ ಸೌದ್ರಿ, ಮಲ್ಲಿಕಾರ್ಜುನ ಚಿಲ್ಕರಾಗಿ, ಇಂದರ್ ಪಾಷಾ, ಉಮೇಶ್ವರಯ್ಯ ಬಿದನೂರು ಮಠ ಹಾಗೂ ಇತರರು ಇದ್ದರು.
…………

Don`t copy text!