ಬಿಸಿಲು
ನಮ್ಮೂರು ಬಿಸಿಲು
ಬೆಂಕಿ ಎರಡು ಒಂದೆ
ಹಿಂಗಾದರೆ
ಹೇಗೆ ಮುಂದೆ
ನಾನು ಗ್ರಹಿಣಿ
ಕುಚ್ಚಬೇಕು ಅಡುಗೆ
ಮಕ್ಕಳಿಗೆ ಗಂಡನಿಗೆ
ಒಲೆಯ ಝಳ
ಬೆವರು ದಳದಳ
ಕಟ್ಟಿಗೆ ಕುರುಳು
ಮನೆಯಲ್ಲ ಹೊಗೆ
ಉಂಡ ಯಜಮಾನ
ತಾಂಬೂಲ ನಗೆ
ಇಲ್ಲ ಯಾರಿಗೂ
ಒಡಲ ಬೇಗೆ
ನಮ್ಮೂರು ಬಿಸಿಲು
ಬೆಂಕಿ ಬಿಸಿಲು ಒಂದೆ
–J Y ರೇಖಾ ಗೌಡರ ರಾಯಚೂರು