ತಾಯಿ ಹಕ್ಕಿ
ನಯನ ಮನೋಹರ
ದಟ್ಟ ಹಸಿರುಕಾನನ
ಮೊರದ ಪೊದರು
ಗೂಡು ಕಟ್ಟಿವೆ
ಗುಬ್ಬಿಹಕ್ಕಿ ಪಕ್ಷಿಗಳು
ಇಲ್ಲಮರಿಗಳಿಗೆ ಸೂರು
ರೆಕ್ಕೆ ಬಲಿತಿಲ್ಲ ಹಾರಲು
ಗೀಜಗ ಹದ್ದುಗಳ ಕಾಟ
ಮರಿಯ ನುಂಗಲು
ಹಾವುಗಳ ಸಂಚು
ಆಹಾರ ಹುಡುಕಾಟಕೆ
ಅಪ್ಪ ಅಮ್ಮ
ಸಂಜೆ ಮರಿಗಳ ಸಂತಸ
ಗುಟುಕು ಅನ್ನಮುತ್ತು
ಇಲ್ಲ ಅವುಗಳಿಗೆ
ರೇಷನ್ ಆಧಾರ ಕಾರ್ಡು
ಅಂದೊಮ್ಮೆ ಬಂದ
ಮರವ ಕಡಿಯಲು
ಆಳುಗಳಿಗೆ ಸೂಚನೆ
ಸಂಜೆ ಮರಿಗಳ ಕಳವಳ
ತಾಯಿ ಸಮಾಧಾನ
ಮಾಡಿದಳು
ಎಂಟು ದಿನ ಕಳೆಯಿತು
ಮತ್ತೆ ಬಂದ ದಾಂಡಿಗ
ಈಗ ಮಕ್ಕಳಿಗೆ ಹೇಳಿದ
ಮರವ ಕಡೆಯಲು
ರಾತ್ರಿಯಿಡಿ ಮರಿಗಳಿಗೆ
ಆತಂಕ .
ತಾಯಿ ನಕ್ಕಳು ಸಂತೈಸಿ
ಕಳೆದವು ಹತ್ತು ದಿನ
ಮರವ ಕಡೆಯಲು
ಕೊನೆಗೆ ಅವನು
ಬಂದೆ ಬಿಟ್ಟ
ತಾಯಿ ಹೇಳಿದಳು
ಮರಿಗಳೇ
ಈಗ ಹಾರಿ ಹೋಗಿ
ನಿಮ್ಮ ರೆಕ್ಕೆ ಗಟ್ಟಿಗೊಂಡಿವೆ
ಕೂಗಿ ಹುಯ್ಯೆಂದು
ನೆಗೆದವು ಆಕಾಶಕೆ
ಒಂಟಿಯಾಯಿತು
ಮರದಲಿ ದುಃಖ ಉಕ್ಕಿ
ಪುಟ್ಟ ಮರಿಗಳ
ಕಾಯ್ದ ತಾಯಿ ಹಕ್ಕಿ
–ಡಾ ಶಶಿಕಾಂತ ಪಟ್ಟಣ ರಾಮದುರ್ಗ