ಉಪ ಚುನಾವಣೆ ಕಾವು ಬಿಸಲಿನಂತೆ ಪ್ರಕರತೆಯತ್ತ, ಹಳ್ಳಿಗಳಲ್ಲಿ ಪ್ರಚಾರದ ಭರಾಟೆ


e-ಸುದ್ದಿ, ಮಸ್ಕಿ
ಮಸ್ಕಿ ಕ್ಷೇತ್ರದ ಉಪ ಚುನಾವಣೆಯ ಕಾವು ಬಿಸಲಿನ ಜಳದಂತೆ ದಿನದಿಂದ ದಿನಕ್ಕೆ ಪ್ರಕರತೆ ಪಡೆಯತೊಡಗಿದ್ದು ಹಳ್ಳಿಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪ್ರಚಾರದ ಭರಾಟೆ ಜೋರಾಗಿ ನಡೆಯತೊಡಗಿದೆ.
ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪಕ್ಷದ ಕಾರ್ಯಧ್ಯಕ್ಷ ಧೃವನಾರಯಣ, ಶಾಸಕ ಅಮರೇಗೌಡ ಬಯ್ಯಾಪೂರು, ಮಜಿ ಶಾಸಕ ಶಿವರಾಜ ತಂಗಡಿಗಿ, ಎನ್.ಎಸ್,ಬೋಸರಾಜ ಹಾಗೂ ಹಂಪಯ್ಯ ಸಾಹುಕಾರ ಸೇರಿದಂತೆ ಎರಡು ಮೂರು ತಂಡಗಳು ಲಿಂಗಸುಗೂರು ಮತ್ತು ಮಾನ್ವಿ ಭಾಗದ ವಿವಿಧ ಹಳ್ಳಿಗಳಲ್ಲಿ ಬಿರುಸಿನ ಪ್ರಚಾರ ನಡೆಸಿ ಬಿಜೆಪಿಯವರ ದುರ್ವತನೆ, ಜನಸಾಮನ್ಯರಿಗೆ ಆಗುತ್ತಿರುವ ತೊಂದರೆ ಬಗ್ಗೆ ಮಾತನಾಡಿ ಪಕ್ಷದ ಅಭ್ಯರ್ಥಿ ಆರ್.ಬಸನಗೌಡ ತುರ್ವಿಹಾಳ ಅವರಿಗೆ ಮತ ಹಾಕುವಂತೆ ಮನವಿ ಮಾಡಿದರು.
ಮತ್ತೊಂದಡೆ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪರವಾಗಿ ಮಾಜಿ ಸಂಸದ ಕೆ.ವೀರುಪಾಕ್ಷಪ್ಪ, ಜಿ.ಪಂ.ಸದಸ್ಯ ಶಿವನಗೌಡ ಗೂರೆಬಾಳ, ಅಮರೇಗೌಡ ವಿರುಪಾಪೂರು ಅವರು ತಿಡಿಗೋಳು, ಕುರುಕುಂದ ಭಾಗದ ಹಳ್ಳಿಗಳಲ್ಲಿ ಪ್ರಚಾರ ಕಾರ್ಯ ನಡೆಸಿದರು.
ಬಿಜೆಪಿ ಸರ್ಕಾರದ ಸಾಧನೆಗಳು ಹಾಗೂ ಪ್ರತಾಪಗೌಡ ಪಾಟೀಲ ಅವರ ಅಭಿವೃದ್ದಿ ಕಾರ್ಯಗಳನ್ನು ಗುರುತಿಸಿ ಪ್ರತಾಪಗೌಡ ಪಾಟೀಲ ಅವರಿಗೆ ಮತ ನೀಡುವಂತೆ ಮತಯಾಚನೆ ಮಾಡಿದರು.
———————————-

ಯುಥ್ ಕಾಂಗ್ರೆಸ್ ಕಾರ್ಯಕರ್ತರ ಸಭೆ
ಮಸ್ಕಿಯ ಬಸವೇಶ್ವರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಯೂಥ್ ಕಾಂಗ್ರೆಸ್‍ನ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಭೆ ರಾಜ್ಯ ಯುವಘಟಕದ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಏ.17 ರಂದು ನಡೆಯುವ ಚುನಾವಣೆ ಕಾಂಗ್ರೆಸ್ ಪಾಲಿಗೆ ದಿಗ್ವಿಜಯ ಸಾಧಿಸಲಿದೆ. ಯುವ ಪಡೆ ಸನ್ನಧ್ಧರಾಗಿ ಚುನಾವಣೆ ಎದುರಿಸಬೇಕು ಎಂದು ಬಾದರ್ಲಿ ಹೇಳಿದರು.
——————————

ಬಿಜೆಪಿ ಯುವ ಮೊರ್ಚ ಸಭೆ
ಮಸ್ಕಿಯ ಬಸವೇಶ್ವರ ನಗರದ ಬಿಜೆಪಿ ಕಚೇರಿಯಲ್ಲಿ ಯುವಮೊರ್ಚ ಪದಾಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ ಕುರಿ ಮತ್ತು ಹುಣ್ಣೆ ನಿಗಮದ ಅಧ್ಯಕ್ಷ ಶರಣು ತಳಕೇರಿ ಮಾತನಾಡಿ ಪ್ರತಾಪಗೌಡರ ತ್ಯಾಗದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಪ್ರತಾಪಗೌಡ ಪಾಟೀಲರನ್ನು ಆಯ್ಕೆ ಮಾಡಿದಾಗ ಮಾತ್ರ ಋಣ ತಿರಿದಂತಾಗುತ್ತದೆ ಎಂದರು. ಅದಕ್ಕಾಗಿ ಪ್ರತಾಪಗೌಡ ಪಾಟೀಲರ ಗೆಲುವಿಗಾಗಿ ಯುವಮೊರ್ಚ ಕಾರ್ಯಕರ್ತರು ಶ್ರಮಿಸಬೇಕು ಎಂದರು.

Don`t copy text!