ಅಗ್ನಿ ಕನ್ಯೆ

ಅಗ್ನಿ ಕನ್ಯೆ

ಅಗ್ನಿ ಕನ್ಯೆ ಕೇವಲ
ಕೃತ ದ್ವಾಪರಕ್ಕೆ ಮಾತ್ರ ಮೀಸಲಲ್ಲ
ಅದು ಇತಿಹಾಸ, ಆದರೆ ಇಂದು
ಅಗ್ನಿಕನ್ಯೆಯರಿರುವದೆ ಪರಿಹಾಸ||

ಕಲಿಯುಗದಲ್ಲೇನು ಕಡಿಮೆ
ನಿತ್ಯ ಬೇಯುವ ಅಗ್ನಿ ಕನ್ಯೆಯರಿಗೆ.
ಹೆಜ್ಜೆ ಹೆಜ್ಜೆಗೂ ಸಿಗುವರು
ಬೆಂದು ಬದುಕುಳಿದವರು ||

ಕಾಮುಕರ ಕೈಗೆ ಸಿಕ್ಕಿ ನಲುಗಿಲ್ಲವೆ
ದುಷ್ಟ ಅತ್ತೆಮಾವರ ವರದಕ್ಷಿಣೆ
ದಾಹಕ್ಕೆ ಸಿಕ್ಕಿ ಕರಕಲಾಗಿಲ್ಲವೆ
ಗಂಡನ ಅಟ್ಟಹಾಸಕೆ ನರಳಿದವರೆಷ್ಟು||

ಕಾಲ ಯಾವುದಾದರೇನು
ಸಮತೆ ಸಾರುವ ಉದ್ಘೋಷ ಬೇಕಿಲ್ಲ
ಸಹೃದಯದ ಪ್ರೀತಿಯ ಸಮಾನ
ಮನಸ್ಸೊಂದಿದ್ದರೆ ಸಾಕು ಮೆಟ್ಟಿನಿಲ್ಲಲು||

ಸವಿತಾ. ಮಾಟೂರ. ಇಲಕಲ್ಲ.

Don`t copy text!