ನಾ ಕಂಡ ಅಲ್ಲಮಪ್ರಭುದೇವರ ವಚನ 

ನಾ ಕಂಡ ಅಲ್ಲಮಪ್ರಭುದೇವರ ವಚನ 

“ಕಾಮನ ಕೈ ಮುರಿದಡೆ ಮೋಹ ಮುಂದುಗೆಟ್ಟಿತ್ತು.
ಆಮಿಷ ತಾಮಸಧಾರಿಗಳೆಲ್ಲ ಎಳತಟವಾದರು.
ಅಕ್ಕಟಾ, ಅಯ್ಯಲಾ, ನಿಮ್ಮ ಕಂಡವರಾರೊ ?
ಆಳವಿಲ್ಲದ ಸ್ನೇಹಕ್ಕೆ ಮರಣವೆ ಮಹಾನವಮಿ.
ಗುಹೇಶ್ವರನನರಿಯದೆ ರಣಭೂಮಿಗಳುಲಿದವು !

*ಸಮಗ್ರ ವಚನ ಸಂಪುಟ: 2*
*ವಚನದ ಸಂಖ್ಯೆ: 546*

ವಚನಾನುಭಾವ:

ಇಡೀ ಕನ್ನಡ ಸಾಹಿತ್ಯದಲ್ಲೇ ಅಲ್ಲಮಪ್ರಭುದೇವರ ವಚನಗಳು ಬೆಡಗಿನ ವಚನಗಳಾಗಿ ಪ್ರಸಿದ್ಧಿ. ಅಂಥಾ ಅಲ್ಲಮರ ಒಂದು ಸುಪ್ರಸಿದ್ಧ ವಚನವೇ ಮೇಲಿನ ವಚನ. ಈ ವಚನದಲ್ಲಿ ಓದುಗರಿಗೆ ಒಂದು ಸಾಮಾನ್ಯ ಅರ್ಥವು ತಿಳಿದರೆ, ಸಾಧಕರಿಗೆ ಮತ್ತೊಂದು ಅರ್ಥ ಗೋಚರವಾಗುವುದು. ನಾವು ಇದನ್ನೂ ಎರಡು ವಿಧವಾದ ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು.

ಕಾಮನ ಕೈ ಮುರಿದಡೆ ಮೋಹ ಮುಂದುಗೆಟ್ಟಿತ್ತು.

1) ನಮ್ಮ ಇತಿಹಾಸದಲ್ಲಿ ಗೋಚರವಾಗುವ ತ್ರೇತಾಯುಗದಲ್ಲಿ ರಾವಣನ ಕೈ ಮತ್ತು ಮೈ ಮುರಿದೊಡೆಯೂ, ತನ್ನ ಮೋಹದಿಂದ ಮುಂದೆ ಸೀತೆಗೆ ಅರಣ್ಯದಲ್ಲಿಯೇ ಇಡೀ ಕಾಲ ಕಲಿಯಬೇಕಾಯಿತು. ಕಾಮುಕನನ್ನು ಕೈಯ್ಯಿ ಮುರಿದು ಸೋಲಿಸಿದರೂ ಮುಂದೆ ಮೋಹಕೆಡಕು ಮಾಡೀತು.

2) ಅರಿಷಡ್ವರ್ಗಗಲ್ಲಿ ಮೊದಲೆನೇದು ಕಾಮ. ಕಾಮ ದಿಂದ ಕ್ರೋಧ , ಕ್ರೋಧ ದಿಂದ ಲೋಭ ಹುಟ್ಟುವುಡು. ಮನುಷ್ಯನು ಕಾಮವನ್ನು ಕೊಂದಿದರೂ ಮೋಹ, ಮದ, ಮಾತ್ಸರ್ಯ ದಿಂದ ನಾನು ಕಾಮವನ್ನು ಗೆದ್ದಿದ್ದೇನೆಂಬ ಅಹಂಕಾರ ಅತನನ್ನು ನಾಶಮಾಡುತ್ತದೆ.

ಆಮಿಷ ತಾಮಸಧಾರಿಗಳೆಲ್ಲ ಎಳತಟವಾದರು.

1) ಆಸೆ, ಆಮೀಷೆಯಿಂದ ಕುದಿದು ದ್ವಾಪಾರ ಯುಗದಲ್ಲಿ ರಾಜ್ಯ ಭೋಜ್ಯಕ್ಕೆ ತಾಮಸಧಾರಿಗಳಿಂದ ಮಹಾ ಯುದ್ಧವೇ ನಡೆದು ಎಳತಟವಾಗಿ ಹೊದರು.

2) ನಾನು ನನ್ನದು ಎಂಬ ಅಹಂಕಾರದಿಂದ ಆಮಿಷ ತಾಮಿಷಕ್ಕೆ ಒಳಗಾಗಿ ಎಷ್ಟೋ ಜನರು ತನ್ನ ತಾನರಿಯದೇ ಎಳತಟವಾಗಿ ಹೋದರು.

ಅಕ್ಕಟಾ, ಅಯ್ಯಲಾ, ನಿಮ್ಮ ಕಂಡವರಾರೊ?

ಅಕಟಕಟಾ, ಎಲೇ ಪರಮೇಶ್ವರನೇ, ನಿನ್ನ ನಿಜಸ್ವರೂಪವನ್ನು ಯಾರು ಕಂಡಿದ್ದು..? ಕಾಮ, ಕ್ರೋಧ ಲೋಭ ಮೋಹ ಮದ ಮಾತ್ಸರ್ಯ ದಿಂದ ತುಂಬಿ, ನಾನು ನನ್ನದು ಆಸ್ತೀ ಪಾಸ್ತಿಗಳೆಂದು ತನ್ನ ಇಡೀ ಜೀವನವನ್ನೇ ಮುಡಿಪಾಗಿಟ್ಟವರು ನಿನ್ನನ್ನು ಕಾಣಲು ಸಾಧ್ಯವೇ ?

ಆಳವಿಲ್ಲದ ಸ್ನೇಹಕ್ಕೆ ಮರಣವೆ ಮಹಾನವಮಿ.

ನಿಜವಾದ ಸ್ನೇಹದ ಆಳವನ್ನು ಯಾರೂ ನೋಡಿರಲಾರರು. ಆದುದರಿಂದಲೇ ಬಸವಣ್ಣ ನವರು ಒಂದು ವಚನದಲ್ಲಿ ಭಕ್ತಿ ಎಂಬುದು ಕನ್ನೆಯ ಸ್ನೇಹದಂತಿದ್ದಿತ್ತು ಎಂದು ಹೇಳುತ್ತಾರೆ. ಶರಣನು ತನ್ನ ತಾನರಿವುದಕ್ಕೆ ತನ್ನ ದೇಹವನ್ನು ದಂಡಿಗೆ ಮಾಡಿ ಲಿಂಗಾಂಗಸಾಮರಸ್ಯ ದಿಂದ ಆಳವಾದ ಪ್ರಿತಿಯಿಂದ ಇಷ್ಟಲಿಂಗದ ಜೊತೆ ಸ್ನೇಹವ ಮಾಡಿ ತನ್ನ ದೇಹವನ್ನು ತ್ಯಜಿಸುತ್ತಾನೆ ಅದನ್ನೇ ಮರಣವೇ ಮಹಾನವಮಿ ಎಂದು ಶರಣರು ಕರೆದರು.

ಗುಹೇಶ್ವರನನರಿಯದೆ ರಣಭೂಮಿಗಳುಲಿದವು !

1) ತ್ರೇತಾಯುಗ ದ್ವಾಪಾರಯುಗದಲ್ಲಿ ಅವರವರ ಇಷ್ಟಾರ್ಥಗಳನ್ನು ಈಡೇರಿಸಲ್ಕೆ ರಣರಂಗದಲ್ಲಿ ಒಂದೆರಡು ಘಟ್ಟಗಳೇ ಹೋದವು. ಇಂಥವರು ಗುಹೇಶ್ವರನ ನಿಲುವನ್ನು ಕಾಣದೇ ಸೃಷ್ಟಿಕರ್ತನ ಈ ಭೂಮಿಯನ್ನು ರಣಭೂಮಿಯಾಗುದರಲ್ಲಿ ಪಾತ್ರರಾದರು.

2) ಎಷ್ಟೇ ಸಾಧನೆ ಮಾಡಿದರೂ ತನ್ನ ತಾನರಿಯದಿದ್ದರೇ ಏನೂ ಉಪಯೋಗವಿಲ್ಲ.
*ಲಿಂಗವನರಿಯದೇ ಮತ್ತೇನರಿದರೂ ಫಲವಿಲ್ಲ, ಲಿಂಗವನರಿದ ಬಳಿಕ ಮತ್ತೇನರಿದೊಡೆಯೂ ಫಲವಿಲ್ಲ* ಎಂಬ ವೈಚಾರಿಕತೆಯು, ಏಕದೇವೋಪಾಸನೆಯು ತನ್ನ ತಾನರಿಯುವುದಕ್ಕೆ ಇಷ್ಟಲಿಂಗವ ಕೊಟ್ಟು ನಿಜವಾದ ಭಕ್ತಿಯ ಸಾಮರಸ್ಯವನ್ನು ಎಲ್ಲರಿಗೆ ನೀಡಿದರು ಬಸವಾದಿ ಶರಣರು.

 

ಮಡಪತಿ.ವಿ.ವಿ
madapathi.v.v@gmail.com

Don`t copy text!