ಬೆಳ್ಳಿ ಚುಕ್ಕಿ
ನಲ್ಲನ ಚೇಷ್ಟೆಯ ನೆನೆದು ನಸುನಾಚುತ
ಕೆಂಪೇರಿದ ಕೆಂದಾವರೆಯ ಮೊಗದವಳೇ
ಮಂಜುಳ ನಾದವೇ ನಿನ್ನ ಕಾಲ್ಗೆಜ್ಜೆ
ಅಂಗಳವ ಹಸನುಗೊಳಿಸಿ ಬೆಳ್ಳಿ ಚುಕ್ಕೆಯೇ ಕಿತ್ತು
ಬಿಡಿಸಿದ ಶುಭ್ರ ರಂಗೋಲಿಗೆ
ಬಂಗಾರದ ತೇರನು ಏರಿ ಹೊಂಗಿರಣದ ಬಣ್ಣ
ತುಂಬುತಿಹನು ಸೂರ್ಯ
ಕೇಸರಿ ಸೀರೆಯ ತ್ಯಾಗಮಯಿ
ಅದರಂಚ್ಚಿನ ಹಸಿರು ವನದೇವತೆಯೇ
ಕೆಂಪು ಕುಪ್ಪಸದ ಜೀವವಾಹಿನಿಯೇ
ಕಂದು -ಕೆಂಪಿನ ಗಾಜುಬಳೆಯ ಬೆಡಗಿಯೇ
ಸೊಂಟ ಕಟ್ಟಿ ನಿಂತ ಗಟ್ಟಿಗಳೇ
ಸಂಸಾರದ ಜಂಜಾಟದಲ್ಲಿ ಎದ್ದು ನಿಂತ ಕೆಸರಿನ ಕಮಲವೇ
ಅಂತರಂಗ -ಬಹಿರಂಗದ ಸೌಂದರ್ಯವತಿಯೇ
ಮನದ ಬಾನಂಗಳದ ಕಾಮನಬಿಲ್ಲೆ
–ಮಾಜಾನ್ ಮಸ್ಕಿ
ಅತಿ ಸುಂದರವಾದ ಕವನ , ಸಹೋದರಿಯವರೇ ಮುಂದುವರೆಸಿ ತಮ್ಮ ಈ ಕಾವ್ಯ ಸೇವೆಯನ್ನ..