ಭಾವನೆಗಳು ಬದುಕಿನ ಸಾರ

ಭಾವನೆಗಳು ಬದುಕಿನ ಸಾರ

ಮನಸ್ಸೂ , ಮನಸ್ಸಿನ ಭಾವನೆಗಳೆಂದರೆ ಎಲ್ಲವನ್ನು ಮೀರಿ ನಿಲ್ಲುವಂತವು,

ಭಾವನೆಗಳು ನಮ್ಮ ಶರೀರದಲ್ಲಿ ಹರಿಯುವ ರಾಸಾಯನಿಕ ದ್ರವ್ಯಗಳು ಅಂತಾನೇ ಹೇಳಬಹುದು. ಹಿತಕರ ಭಾವನೆಗಳಿಂದ ಯಾವದೇ ತೊಂದರೆ ಇಲ್ಲ. ಆದರೆ ಅಹಿತಕರ ಭಾವನೆಗಳೇ ನಮ್ಮ ಬದುಕಿನ ಎಲ್ಲ ಸಮಸ್ಯೆ ಗಳಿಗೆ ಮೂಲವಾಗಿವೆ ಎಂದು ದೃಢವಾಗಿ ಹೇಳಬಲ್ಲೆ.

ಭಾವನೆಗಳತ್ತ ಒಂದು ಆಳವಾದ ನೋಟ ಬೀರುತ್ತಾ ಅಕ್ಷರ ರೂಪ ಕೊಟ್ಟು ಬರೆಯಲು ಪ್ರಯತ್ನಿಸಿದ್ದೇನೆ.

ಆದುನಿಕ ಯುಗದಲ್ಲಿ ಅತೀ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸುವ ಸದ್ಗುರುಗಳು (Emotion the Juice of life ) ಎನ್ನುವ ಕೃತಿಯಲ್ಲಿ ಹೇಳುತ್ತಾರೆ – “ಒಬ್ಬ ವ್ಯಕ್ತಿಯು ಯಾವುದೇ ಭಾವನೆಯನ್ನು ತನ್ನ ಬದುಕಿನಲ್ಲಿ ಒಂದು ಸೃಜನಾತ್ಮಕ ಶಕ್ತಿಯನ್ನಾಗಿ ರೂಪಿಸಿಕೊಳ್ಳುವ ಅವಕಾಶವಿರುತ್ತದೆ” ಎಂದು.

ನಮ್ಮ ಜೀವನದಲ್ಲಿ ಹಲವಾರು ಮಂದಿ ಸ್ನೇಹಿತರಾಗಿ, ಸ್ನೇಹಿತೆ ಯಾಗಿ ಗಂಡ , ಹೆಂಡತಿ , ಹೀಗೆ ಅನೇಕ ಸಂಭಂದ ಹಿಡಿದು ವೃದ್ಧಾಪ್ಯದ ತನಕ ಅನೇಕ ಪಾತ್ರ ನಿರ್ವಹಿಸಬೇಕಾಗುತ್ತದೆ .

ಇದರಲ್ಲಿ ಕೆಲವು ಮಂದಿ ಪ್ರಾಣ ಸ್ನೇಹಿತರಾದರೆ, ಇನ್ನು ಕೆಲವರು ಹಾಗೆ ಸ್ನೇಹಿತರಾಗಿ ಉಳಿಯುವರು. ಸ್ನೇಹವು ಗಡಿ, ಭಾಷೆ, ಜಾತಿ ಧರ್ಮ ಎಲ್ಲವನ್ನು ಮೀರಿ ನಿಲ್ಲುವಂತಹದ್ದಾಗಿದೆ. ಒಂದು ಒಳ್ಳೆಯ ಪುಸ್ತಕ ಒಬ್ಬ ಒಳ್ಳೆಯ ಗೆಳೆಯನಿದ್ದಂತೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ ಹಾಗೇ
ಒಳ್ಳೆಯ ಗೆಳತಿ/ಗೆಳೆಯನೊಬ್ಬ ನಮ್ಮ ಇಡೀ ಜೀವನವನ್ನು ಸುಂದರವಾಗಿಸಬಲ್ಲರು.

ಜೀವನದಲ್ಲಿ ಎದುರಾಗುವ ಕಷ್ಟ- ನಷ್ಟಗಳನ್ನು ಸಹೃದಯಿಗಳೊಂದಿಗೆ ಮಾತ್ರ ಹಂಚಿಕೊಳ್ಳಬಹುದು. ಅವರ ಸಲಹೆಗಳಿಂದ ಧೈರ್ಯ, ಸ್ಫೂರ್ತಿ ಸಿಗುವುದು. ಅನೇಕರು ನಿರಂತರವಾಗಿ ಸಂಬಂಧಗಳನ್ನು ಬೆಸೆದುಕೊಳ್ಳುತ್ತಾ ರೆ ಬರೆದುಕೊಳ್ಳುತ್ತಾರೆ ವಿಷಾದದ ಸಂಗತಿ ಎಂದರೆ ಸಂಬಂಧಗಳು ಸಹ ಜನರನ್ನು ಮೇಲೆ ತರಬಹುದು ಅಥವಾ ಕುಸಿಯುವಂತೆ ಮಾಡಬಹುದು. ಅಂದಹಾಗೆ ಸಂಬಂಧಗಳು ಬಹುತೇಕರಿಗೆ ಏಕೆ ಇಂತಹ ಒಂದು ಗೊಂದಲವಾಗಿದೆ ??

ಅನಾದಿ ಕಾಲದಿಂದಲೂ ಸ್ನೇಹಕ್ಕೆ ತನ್ನದೇ ಆದ ಒಂದು ಪಾವಿತ್ರ್ಯತೆ ಇದೆ. ಪ್ರೀತಿಗಿಂತ ಮೊದಲು ಹೊಟ್ಟೋದು ಸ್ನೇಹವೆ. ಪ್ರೀತಿಯಲ್ಲಿ ಹಲವು ಸಾರಿ ಸ್ವಾರ್ಥಸುಖದ ವಿರಸ ಎದ್ದು ಕಾಣುತ್ತದೆ. ಆದರೆ ಸ್ನೇಹದಲ್ಲಿ ಎಂದೆಂದಿಗೂ ನಿಸ್ವಾರ್ಥ ಮುಖದ ಸಮರಸ ಎದ್ದು ಕಾಣುತ್ತದೆ.

ಸ್ನೇಹಿತ, ಕುಚೇಲನ ಹಿಡಿ ಅವಲಕ್ಕಿಯಲ್ಲೇ ಸಂತೃಪ್ತಿ ಪಡುವ ಕೃಷ್ಣನಂಥವನು! ಸ್ನೇಹಿತರೊಬ್ಬರು ಇರುತ್ತಾರೆ…. ಎಂಥ ಸಮಯದಲ್ಲೂ ನಾನಿದ್ದೀನಿ ನಿಂಜೊತೆ ಅನ್ನೋಕೆ, ಅತ್ತಾಗ ಸಂತೈಸೋಕೆ, ನಕ್ಕಾಗ ಜೊತೆಯಾಗೋಕೆ. ಇಂಥಾ ಸಂಭಂದ ಯಾರಿಗೆ ಬೇಡ ಹೇಳಿ ??

ಈ ಸಂಬಂಧ ಅನ್ನೋ ಮೂರುಕ್ಷರವನ್ನು ಒಂದು ವ್ಯಕ್ತಿಯಲ್ಲಿ ಕಟ್ಟಿ ಹಾಕೋದು ಕಷ್ಟವೇ. ???

ಅಮ್ಮನ ಅಕ್ಕರೆಯ ಬೆರಳು ಆಡಿದರೆ ಈ ಅಮ್ಮಂಗಿಂತ ಬೇರೆ ಸ್ನೇಹಿತೆ ಇಲ್ಲ! ಪುಟ್ಟ ಪುಟ್ಟ ಹೆಜ್ಜೆ ಇಡುವಾಗಲೂ ಬೀಳದಂತೆ ಕಣ್ಣಲ್ಲಿ ಕಣ್ಣಿಟ್ಟು ನೋಡುವಾಗ ಈ ಅಪ್ಪನ ಅಕ್ಕರೆಗಿಂತ ಮಿಗಿಲಾದ ಸ್ನೇಹವಿಲ್ಲ! ಯಾರೋ ಕೊಟ್ಟ ಮಿಠಾಯಿಯಲ್ಲಿ, ಅರ್ಧ ಭಾಗವನ್ನು ಗುಬ್ಬಿ ಎಂಜಲು ಮಾಡಿ ತನ್ನ ಪುಟ್ಟ ಕೈಯಲ್ಲಿಟ್ಟುಕೊಂಡು ತಿನ್ನಿಸುವಾಗ ಈ ಅಕ್ಕಂಗಿಂತ ಬೇರೆ ಸ್ನೇಹಿತರಿಲ್ಲ! ತುಂಟಾಟವಾಡುವ ತಂಗಿ, ಸಲಹೆ ನೀಡುವ ಅಣ್ಣ, ಕತೆ ಹೇಳುವ ಅಜ್ಜ-ಅಜ್ಜಿ… ಎಲ್ಲರೂ ಒಂದಿಲ್ಲೊಂದು ರೀತಿಯಲ್ಲೇ ಈ ಸಂಬಂಧ ಪ್ರಪಂಚದ ಆಜೀವ ಸದಸ್ಯರೇ!

ಹಾಗೆ ಹೇಳುವುದಕ್ಕೆ ಹೋದರೆ ಈ ಬದುಕಿಗೆ ಎಷ್ಟೆಲ್ಲ ಸ್ನೇಹಿತರು..!

ಎನಿತು ಜೀವದಲಿ ಎನಿತು ಜೀವರಿಗೆ. ಎನಿತು ನಾವು ಋಣಿಯೋ. ಅರಿತು ನೋಡಿದರೆ ಬಾಳು ಎಂಬುದಿದು. ಋಣದ ರತ್ನಗಣಿಯೋ”. ಎಂಬ ರಾಷ್ಟ್ರ ಕವಿ ಜಿ ಎಸ್ ಶಿವರುದ್ರಪ್ಪ ಅವರ ಸಾಲಿನಂತೆ, ಈ ಪ್ರಪಂಚದಲ್ಲಿ ಪ್ರತಿ ಹೆಜ್ಜೆಯಲ್ಲೂ ಸಿಕ್ಕ ಅದೆಷ್ಟು ಜನರಿಗೆ ನಾವು ಋಣಿಯಾಗಬೇಕೋ.

ಹುಟ್ಟಿದಾಗಿನಿಂದ ಇಲ್ಲಿಯವರೆಗೆ ನಮ್ಮ ಸಂಬಂಧಗಳನ್ನು ದಿನೇ ದಿನೇ ಶ್ರೀಮಂತಗೊಳಿಸುತ್ತಿರುವ, ಬದುಕಿಗೊಂದು ಅರ್ಥ ನೀಡುತ್ತಿರುವ, ಕೆಲವೊಮ್ಮೆ ಹಳಿ ತಪ್ಪಿದ ಬದುಕನ್ನು ಸರಿದಾರಿಗೆ ತರುತ್ತಿರುವ ಸಂಬಂಧಿಕರಿಗೆ ಸಾವಿರ ಶರಣು!

ಯಾವುದೇ ಜಾತಿ, ಧರ್ಮ, ವರ್ಣ, ಲಿಂಗ ಭೇದವಿಲ್ಲದೆ ಇರುವಂಥ ಸಂಭಂದ ಗಳಂತೂ ೧೨ ನೆಯ ಶತಮಾನದ ಕಡೆಗೆ ಮುಖ ಮಾಡಿ ನೋಡುವಂಥ ವು.

ಅದರಲ್ಲೂ ಸ್ನೇಹ ಸಂಬಂಧ ಅಂತು ಎಲ್ಲಕಿಂತ ಅಪೂರ್ವ ಸಂಗಮ ಅಂತಾನೆ ಹೇಳಬಹುದು, ನಮ್ಮೆಲ್ಲಾ ರಹಸ್ಯಗಳು ನಮ್ಮ ಸ್ನೇಹಿತೆ\ ಸ್ನೇಹಿತ ಅವರಿಗೆ ತಿಳಿದಿರುತ್ತದೆ. ನಿಮ್ಮ ಸ್ನೇಹಿತನೊಂದಿಗೆ ನೀವು ಏನೂ ಬೇಕಾದರೂ ಹಂಚಿಕೊಳ್ಳಬಹುದಾಗಿದೆ. ನಿಮ್ಮ ರಹಸ್ಯಗಳನ್ನು ಆಕೆ, ಆತ ಯಾರಿಗೂ ಹೇಳುವುದಿಲ್ಲ. ಧನ ಸಹಾಯ ನಮ್ಮ ಸ್ನೇಹಿತರ ಬಳಿ ಧನ ಸಹಾಯವನ್ನು ಪಡೆದುಕೊಳ್ಳಲು ನಾವು ಹಿಂಜರಿಯಬೇಕೆಂದೇನಿಲ್ಲ. ಅವರಲ್ಲಿ ಸಂಕೋಚಪಡಬೇಕಾದ ಕಾರಣವೇ ಇಲ್ಲ. ತಲೆನೋವು ಬಂದರೆ ಹೆಡ್ ಮಸಾಜ್, ಅವರೇ ಮಾಡುತ್ತಾರೆ!

ನಮಗೆ ವಿಪರೀತ ತಲೆ ನೋವಿದ್ದ ಸಂದರ್ಭದಲ್ಲಿ ನಮ್ಮ ಆತ್ಮೀಯ ಸ್ನೇಹಿತ, ಸ್ನೇಹಿತೆ ನಮಗೆ ಮಸಾಜ್ ಮಾಡುತ್ತಾರೆ. ಇದಕ್ಕಾಗಿ ಅವರು ಸ್ವಲ್ಪ ಕೂಡ ಬೇಸರಿಸುವುದಿಲ್ಲ. ನಮ್ಮ ಯಶಸ್ಸಿಗೆ ಖುಷಿಪಡುತ್ತಾರೆ ನಾವು ಸೋಲಲಿ, ಗೆಲ್ಲಲಿ ನಮ್ಮ ಪ್ರಾಣ ಸ್ನೇಹಿತ ನಮ್ಮ ಬೆನ್ನು ತಟ್ಟುತ್ತಾರೆ ಮತ್ತು ನಮ್ಮ ಕಷ್ಟದ ದಿನಗಳಲ್ಲಿ ನಮ್ಮ ಕೈಹಿಡಿದು ಸಹಾಯ ಮಾಡುತ್ತಾರೆ. ನಮ್ಮ ಯಶಸ್ಸನ್ನು ನೋಡಿ ನಮ್ಮ ಸ್ನೇಹಿತ ನಿಜಕ್ಕೂ ಸಂತಸ ಪಡುತ್ತಾರೆ.

ನಮ್ಮ ಹಿಂದೆ ಚುಚ್ಚು ಮಾತುಗಳನ್ನು ಆಡುವುದಿಲ್ಲ ನಮ್ಮ ಸ್ನೇಹಿತನನ್ನು ನಾವು ಬಹಳಷ್ಟು ನಂಬಿರುತ್ತಿವೆ. ಒಳಗೊಂದು ಹೊರಗೊಂದು ಎಂಬಂತೆ ಅವರು ಮಾಡುವುದಿಲ್ಲ. ನಮ್ಮ ಹಿಂದಿನಿಂದ ಚುಚ್ಚಿ ಮಾತನಾಡುವುದಿಲ್ಲ.

ಏನು ಗುಟ್ಟು ಮಾಡುವುದಿಲ್ಲ ನಾವು ನಮ್ಮಷ್ಟಕ್ಕೆಯೇ ಮುಖಪರದೆಯನ್ನು ಹಾಕಿಕೊಂಡು ನಮ್ಮೊಳಗಿನ ದುಃಖವನ್ನು ಮರೆಮಾಚಿಕೊಂಡು ಓಡಾಡಬಹುದು. ಆದರೆ ನಮ್ಮ ಸ್ನೇಹಿತರ ಮುಂದೆ ನಮ್ಮ ಮುಖಪರದೆ ಕೆಳಕ್ಕೆ ಬೀಳುತ್ತದೆ. ಅವರಿಂದ ಏನನ್ನೂ ಮುಚ್ಚಿಡಲು ನಮಗೆ ಸಾಧ್ಯವಾಗುವುದಿಲ್ಲ.

*ಆದ್ದರಿಂದಲೇ ಒಳ್ಳೆಯ ಸ್ನೇಹಿತರಂತು ದೇವರ ವರ ಎಂದು ಹೇಳಬಹುದು*

ಜೀವನವು ಸುಖದುಃಖಗಳ ಸಂಗಮ ಯಾರು ದುಃಖವನ್ನು ಬಯಸುವುದಿಲ್ಲ ಆದರೂ ದುಃಖವಿಲ್ಲದೆ ಸುಖದ ಅನುಭೂತಿಯನ್ನು ದಿಲ್ಲ . ಎಂಬುದು ಅಷ್ಟೇ ಸತ್ಯ. ಹಾಗಾಗಿ ಸಂಬಂಧಗಳು ಕೂಡ ಅಷ್ಟೇ ನಿಜವಾದ ಸಂಬಂಧಗಳ ಬೆಲೆ ಗೊತ್ತಾಗುವುದು ನಾವು ಕಷ್ಟದಲ್ಲಿದ್ದಾಗ ಮಾತ್ರ. ವರ್ಷದ ಆದಿಯಲ್ಲಿ ಬೇವು-ಬೆಲ್ಲ ಸೇವಿಸುವುದು ಕೂಡ ಎಚ್ಚರದಿಂದಲೇ. ಸಿಹಿಕಹಿ ಗಳಂತೆ ಸುಖ-ದುಃಖಗಳು ನಿರಂತರ ನಮ್ಮ ಬದುಕಿನಲ್ಲಿ ಸುಳಿದಾಡುತ್ತಿರುತ್ತವೆ. ಜ್ಞಾನಿಗಳಾದವರು ಲೌಕಿಕ ಸುಖ ದತ್ತ ಗಮನಹರಿಸುವುದಿಲ್ಲ ಅವರ ಗಮನ ಏನಿದ್ದರು ಶಾಶ್ವತ ಸುಖ ಪಡೆಯುತ್ತಾ ನಿಜವಾದ ಸಂಬಂಧಗಳನ್ನು ಹರಿಸುತ್ತಾ ಹೋಗುತ್ತಾರೆ. ಭೌತಿಕ ಪ್ರಪಂಚದ ವಿಭಿನ್ನ ವಸ್ತುಗಳತ್ತ ಹರಿವ ಮನಸ್ಸಿನ ಆಸೆ ಅನಂತ ದುಃಖಕ್ಕೆ ಕಾರಣವಾಗುತ್ತದೆ. ಅದಕ್ಕಾಗಿ ಅನುಭಾವಿಗಳು *ಆಶಾ ಹಿ ಪರಮ ದುಃಖಂ* ಅಂದರೆ ಆಸೆಯನ್ನೇ ದುಃಖದಿಂದ ಕರೆದಿದ್ದಾರೆ.

ನಮ್ಮ ಅಂತರ್ಯದಲ್ಲಿ ನಾವು ಶಾಂತಿ ಮತ್ತು ಗೊಂದಲಗಳನ್ನು ಸಂತೋಷ ಹಾಗೂ ದುಃಖಗಳನ್ನು ಆನಂದ ಮತ್ತು ಅರಳುವಿಕೆಯನ್ನು ಅನುಭವಿಸುತ್ತಿರುತ್ತೇವೆ ಆದ್ದರಿಂದ ಇದೆಲ್ಲವನ್ನು ನಿರ್ವಹಿಸುವ ಸಾಮರ್ಥ್ಯ ನಮ್ಮಲ್ಲಿದೆ. ಹಾಗಾಗಿ ಸಮಸ್ತ ಅನುಭವ ಮತ್ತು ಸಂಯೋಜನೆಯನ್ನು ಪ್ರಜ್ಞಾ ರಹಿತರಾಗಿ ನಿರ್ವಹಿಸಬೇಕಾಗಿದೆ.

ಮೇನಕಾ ಪಾಟೀಲ್.

Don`t copy text!