e-ಸುದ್ದಿ, ಮಸ್ಕಿ
ಪ್ರತಾಪಗೌ¸ಡ ಪಾಟೀಲ್ ಅವರು ಕಳೆದ ಬಾರಿ ಜನರ ಆರ್ಶಿವಾದದಿಂದ ಕಾಂಗ್ರೆಸ್ ಪಕ್ಷದಿಂದ ಗೆದ್ದು, ತನ್ನ ಸ್ವಾರ್ಥಕ್ಕಾಗಿ ರಾಜೀನಾಮೆ ನೀಡಿದ್ದಾರೆ ಹೊರೆತು ಕ್ಷೇತ್ರದ ಜನರ ಅಭಿವೃದ್ಧಿಗಾಗಿ ಅಲ್ಲ ಎಂದು ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರು ಆರೋಪಿಸಿದರು.
ಮಸ್ಕಿ ಕ್ಷೇತ್ರದ ಮೆದಕಿನಾಳ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರ್ವಿಹಾಳ್ ಅವರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಮಸ್ಕಿ ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರವಿದ್ದಾಗ ಕ್ಷೇತ್ರಕ್ಕೆ ಸಿದ್ಧರಾಮಯ್ಯನವರು 2 ಸಾವಿರ ಕೋಟಿ ಅನುದಾನ ನೀಡಿದ್ದಾರೆ. ಆದರೆ ಪ್ರತಾಪಗೌಡರು ಕ್ಷೇತ್ರ ಮತ್ತು ಜನರ ಅಭಿವೃದ್ಧಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷ ಸೇರಿದ್ದೇನೆ ಎಂದು ಹೇಳುತ್ತಿದ್ದಾರೆ. ಪ್ರತಾಪಗೌಡ ಪಾಟೀಲ್ ಅವರು ಕಾಂಗ್ರೆಸ್ ಸರ್ಕಾರ ಇದ್ದಾಗ ಜಾರಿಗೆ ಆದ ಯೋಜನೆಗಳ ಪಟ್ಟಿ ಕ್ಷೇತ್ರದ ಜನರ ಮುಂದೆ ಇಡಲಿ. ಜನರಿಗೂ ವಾಸ್ತವ ಸ್ಥಿತಿ ಗೊತ್ತಾಗಲಿ ಎಂದರು. ಕ್ಷೇತ್ರದ ಜನರಿಗೆ ಸುಳ್ಳು ಹೇಳಿದರೆ ಅದು ನಡೆಯುವುದಿಲ್ಲ ಜನರು ನಮಗಿಂತ ಬುದ್ದಿವಂತರು ಎಂದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಜನವಿರೋಧಿ ಸರ್ಕಾರಗಳು. ಇವರ ಆಡಳಿತದಲ್ಲಿ ಬಡವರು ಬೀದಿಗೆ ಬಂದಿದ್ದಾರೆ. ಆದರೂ ಜನಸಾಮಾನ್ಯರ ಅಳಲನ್ನು ಕೇಳಿಸಿಕೊಳ್ಳುವ ಗೋಜಿಗೆ ಹೋಗದೇ ಬರಿ ಸುಳ್ಳಿನ ಬಾಷಣದ ಕಂತೆ ಕಟ್ಟಿಕೊಂಡು ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಆದರೆ ಈಗ ಜನರು ಬುದ್ಧಿವಂತರಾಗಿದ್ದಾರೆ. ಇವರಿಗೆ ಜನರು ತಕ್ಕ ಶಿಕ್ಷೆ ನೀಡಿ ಅಧಿಕಾರದಿಂದ ದೂರ ಇಡುವ ಕಾಲ ಬಂದಿದೆ ಎಂದರು. ಮಸ್ಕಿ ಕ್ಷೇತ್ರದಲ್ಲಿ ಆರ್. ಬಸನಗೌಡ ಅವರು ಗೆಲುವನ್ನು ಯಾರಿಂದ ತಡೆಯಲು ಸಾಧ್ಯವಿಲ್ಲ ಎಂದರು.
ಮುಖಂಡರಾದ ಶರಣಪ್ಪ ಮೇಟಿ, ಕೆಪಿಸಿಸಿ ಸದಸ್ಯ ಹೆಚ್.ಬಿ.ಮುರಾರಿ, À ಸಿದ್ದಣ್ಣ ಹೂವಿನಬಾವಿ, ಪಾಮಯ್ಯ ಮುರಾರಿ, ಸೇರಿದಂತೆ ಅನೇಕ ಮುಖಂಡರು ಬಿರುಸಿನ ಪ್ರಚಾರ ನಡೆಸಿದರು.
ಶಾಸಕ ಹೂಲಗೇರಿ ಪ್ರಚಾರ: ಮಟ್ಟೂರು ಗ್ರಾಮದಲ್ಲಿ ಲಿಂಗಸಗೂರು ಶಾಸಕ ಡಿ.ಎಸ್.ಹೂಲಗೇರಿ ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ಪರ ಪ್ರಚಾರ ನಡೆಸಿದರು. ಆರ್.ಬಸನಗೌಡ ತುರ್ವಿಹಾಳ್, ಆದೇಶ ನಾಯಕ, ಬಸವರಾಜ ಲೆಕ್ಕಿಹಾಳ್, ವೀರನಗೌಡ ಮಟ್ಟೂರು ಸೇರಿದಂತೆ ಇನ್ನಿತರು ಇದ್ದರು.
ಪಕ್ಷ ಸೇರ್ಪಡೆ: ಲಿಂಗಸಗೂರು ಶಾಸಕ ಡಿ.ಎಸ್.ಹೂಲಗೇರಿ ನೇತೃತ್ವದಲ್ಲಿ ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಶೇಟಪ್ಪ ರಾಠೋಡ್ ಮಟ್ಟೂರು ಶಂಕ್ರಣ್ಣ ನಂದಿಹಾಳ, ಗ್ರಾಪಂ ಸದಸ್ಯರಾದ ಹನುಮಂತ ರಾಂಪೂರು, ಹನುಮಂತ, ಅಮರೇಶ. ಹುಲುಗಪ್ಪ ಸೇರಿದಂತೆ ನೂರಾರು ಕಾರ್ಯಕರ್ತರು ಸೇರ್ಪಡೆಯಾದರು.