e-ಸುದ್ದಿ, ಮಸ್ಕಿ
ರಾಜ್ಯದಲ್ಲಿ ಕರೊನಾ ಎರಡನೇ ಹಂತದ ದಾಳಿ ಕಂಡುಬರುತ್ತಿರುವ ಹಿನ್ನಲೆಯಲ್ಲಿ ಹೆಚ್ಚು ಜನರನ್ನು ಸೇರಿಸದೆ ಸರಳವಾಗಿ ಮಾ.29 ಸೋಮವಾರ ಮತ್ತೊಮ್ಮೆ ನಾಮಪತ್ರ ಸಲ್ಲಿಸುವುದಾಗಿ ಬಿಜೆಪಿ ಅಭ್ಯಾರ್ಥಿ ಪ್ರತಾಪಗೌಡ ಪಾಟೀಲ ಹೇಳಿದರು.
ಪಟ್ಟಣದ ಬಸವೇಶ್ವರ ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ನಾಮಪತ್ರ ಸಲ್ಲಿಸುವಾಗ ಬಿಜೆಪಿಯಿಂದ ರ್ಯಾಲಿ ಮಾಡುತ್ತಿಲ್ಲ. ಪಕ್ಷದ ಕಚೇರಿಯಲ್ಲಿ ಮುಖಂಡರಿಂದ ಸಭೆ ನಡೆಯಲಿದೆ. ನಾಮಪತ್ರ ಸಲ್ಲಿಸುವಾಗ ಆಗಮಿಸುವ ಕಾರ್ಯಕರ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಆಗಮಿಸಬೇಕೆಂದು ಪ್ರತಾಪಗೌಡ ಪಾಟೀಲ ಮನವಿ ಮಾಡಿದರು.
————————-
ಸವಾಲು ಸ್ವೀಕರಿಸಿದ ಪ್ರತಾಪಗೌಡ ಪಾಟೀಲ
ಪ್ರತಾಪಗೌಡ ಪಾಟೀಲರಿಂದ ಯಾವುದೇ ಹಣ ತೆಗೆದುಕೊಂಡಿಲ್ಲ. ಬೇಕಾದರೆ ದೇವಸ್ಥಾನದಲ್ಲಿ ಪ್ರಮಾಣ ಮಾಡಲು ಸಿದ್ಧ ಎಂದು ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರ್ವಿಹಾಳ ಸವಾಲು ಹಾಕಿದ್ದಾರೆ. ನಾನು ಅವರ ಸವಾಲನ್ನು ಸ್ವೀಕರಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಹೇಳಿದರು.
ಆರ್.ಬಸನಗೌಡ ಯಾವ ದೇವಸ್ಥಾನಕ್ಕೆ ಕರಿತಾರೋ ಕರಿಯಲಿ, ನಾನು ಯಾವ ಕಾರ್ಯಕರ್ತನ ಮೂಲಕ ಹಣ ಕಳಿಸಿದ್ದೇನೋ ಅವರನ್ನು ಕಳಿಸುತ್ತೇನೆ. ದೇವರ ಮುಂದೆ ಹಣ ಪಡೆದಿಲ್ಲ ಎಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.