e-ಸುದ್ದಿ, ಮಸ್ಕಿ
ಮಸ್ಕಿ; ಮಸ್ಕಿ ಉಪಚುನಾವಣೆ ಹಿನ್ನಲ್ಲೆಯಲ್ಲಿ ಪಟ್ಟಣದ ಮುದಗಲ್ ಕ್ರಾಸ್‍ನಲ್ಲಿರುವ ಅಶೋಕ ವೃತ್ತದಿಂದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ರ್ಯಾಲಿ ಸೋಮವಾರ ನಡೆಯಿತು.
ತೆರದ ವಾಹನದಲ್ಲಿ ಮೆರವಣಿಗೆ ನಡೆಯಿತು. ಅಶೋಕ ಸರ್ಕಲ್‍ನಿಂದ ಆರಂಭವಾದ ಮೆರವಣಿಗೆ ಖಲೀಲವೃತ್ತ, ಮುಖ್ಯಬೀದಿ, ದೈವದ ಕಟ್ಟೆ ಮುಖಾಂತರ ತೇರಿನ ಮನೆ ಹತ್ತಿರದ ವರೆಗೆ ಮೆರವಣಿಗೆ ಸಾಗಿ ಬಂದಿತು. ಮೆರವಣಿಗೆಯಲ್ಲಿ ಸಾವಿರಾರು ಜನ ಸಾಗರದಂತೆ ಹರಿದು ಬಂದಿತು.
ಮೆರವಣಿಗೆ ಯುದ್ದಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ ಅವರ ಪರವಾಗಿ ಯುವಕರು ಜೈಕಾರ ಹಾಕುತ್ತಿರುವುದು ಕಂಡು ಬಂದಿತು. ಕಾಂಗ್ರೆಸ್ ಕಾರ್ಯಕರ್ತರು ನಾಯಕರು ಬರುವ ಮೆರವಣಿಗೆಯ ದಾರಿಯೂದ್ದಕ್ಕೂ ಹೂವಿನ ಸುರಿಮಳೆ ಸುರಿಸುತ್ತಿದ್ದರು. ಡೊಳ್ಳು, ಹಲಗೆ ವಾದ್ಯಗಳ ನಾದಕ್ಕೆ ಯುವಕರು ಕೂಣಿದು ಕುಪ್ಪಳಿಸುತ್ತಿದ್ದರು.
ವಿಪಕ್ಷ ನಾಯಕ ಸಿದ್ಧರಾಮಯ್ಯ, ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷ ಡಿ.ಕೆ.ಶಿವಕುಮಾರ, ಜಮೀರ್ ಅಹಮ್ಮದ, ಶಾಸಕ ಅಮರೇಗೌಡ ಪಾಟೀಲ, ಮಾಜಿ ಶಾಸಕರಾದ ಎನ್.ಎಸ್.ಬೋಸರಾಜ್, ಹಂಪನಗೌಡ ಬಾದರ್ಲಿ, ಶಿವರಾಜ ತಂಗಡಗಿ, ಬಸನಗೌಡ ದದ್ದಲ್, ಸಲಿಂ ಅಲಿ. ಬಸನಗೌಡ ಬಾದರ್ಲಿ, ಮಲ್ಲಿಕಾರ್ಜುನ ಯದ್ದಲದಿನ್ನಿ ತೆರದ ವಾಹದಲ್ಲಿದ್ದು ರಸ್ತೆಯ ಎರಡು ಬದಿಯಲ್ಲಿ ನಿಂತಿದ್ದ ಸಾರ್ವಜನಿಕರಿಗೆ ಕೈ ಮುಗಿಯುತ್ತರುವ ದೃಶ್ಯ ಕಂಡುಬಂದಿತು.
ಬಿರುಬಿಸಿಲನಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಒಂದು ಕಿ.ಮೀ.ವರೆಗೆ ಒಂದು ಗಂಟೆಗೆ ಅಧಿಕ ಸಮಯ ರ್ಯಾಲಿ ನಡೆಸಿದರು. ನಂತರ ಸಾರ್ವಜನಿಕ ಸಭೆಯಲ್ಲಿ ಕೂಡ ಸುಮಾರು ಎರಡು ತಾಸು ನಿಂತುಕೊಂಡು ಮುಖಂಡರ ಮಾತುಗಳನ್ನು ಆಲಿಸಿದರು.
ಹಾಲುಮತ ಸಮಾಜದವರು ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರಿಗೆ ಕುರಿಮರಿ ಕಾಣಿಕೆಯಾಗಿ ನೀಡಿದರೆ, ಡಿ,.ಕೆ.ಶಿವಕುಮಾರ ಅವರಿಗೆ ಕಂಬಳಿ ಹೊದಿಸಿ ಸತ್ಕರಿಸಿದರು.
ರ್ಯಾಲಿಯುದ್ದಕ್ಕೂ ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಹೆಗಲ ಮೇಲೆ ಎತ್ತಿಕೊಂಡು ಮೆರವಣಿಗೆ ಮುಖಾಂತರ ಸಮಾರಂಭ ನಡೆಯುವ ಸ್ಥಳದವರೆಗೆ ಕರೆತಂದ ದೃಶ್ಯ ವಿಶೇಷವಾಗಿತ್ತು.
————————
ಟ್ರಾಫಿಕ್ ಜಾಮ
ಮಸ್ಕಿ ಪಟ್ಟಣಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷ ಡಿ.ಕೆ.ಶಿವಕುಮಾರ ಮುದಗಲ್ ಕ್ರಾಸ್ ಹತ್ತಿರ ಅಶೋಕ ವೃತ್ತದ ಹತ್ತಿರ ಆಗಮಿಸಿದಾಗ ಅವರನ್ನು ಸ್ವಾಗತಿಸಲು ಬಂದ ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದರಿಂದ ಕೆಲ ಹೊತ್ತು ಟ್ರಾಫಿಕ್ ಜಾಮ ಆಗಿತ್ತು.
ಲಿಂಗಸುಗೂರು- ಸಿಂಧನೂರು ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಆಗಿ ನೂರಾರು ವಾಹನಗಳು ಜಮಾವಣೆಗೊಂಡು ವಾಹನ ಸವರರು ಪರದಾಡುವಂತಾಯಿತು.