e-ಸುದ್ದಿ, ಮಸ್ಕಿ
ಏ.17 ರಂದು ನಡೆಯುವ ಉಪಚುನಾಣೆಗೆ ಹೆಚ್ಚು ಹೆಚ್ಚು ಮತದಾನ ನಡೆಯುವಂತೆ ನೋಡಿಕೊಳ್ಳಲು ಮತದಾನದ ಅರಿವು ಮೂಡಿಸುವ ಜಾಗೃತಿ ಜಾಥಕ್ಕೆ ಎಸಿ ಹಾಗೂ ಚುನಾವಣಾಧಿಕಾರಿಯಾದ ರಾಜಶೇಖರ ಡಂಬಳ ಚಾಲನೆ ನೀಡಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಮಂಗಳವಾರ ಚುನಾವಣಾಧಿಕಾರಿ ಹಾಗೂ ಎಸಿ ರಾಜಶೇಖರ ಡಂಬಳ ಚಾಲನೇ ನೀಡಿ ಮಾತನಾಡಿದರು.
ಸರ್ಕಾರ ಈ ಬಾರಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದೆ. ಅಂಗವಿಕಲರು ಮತ್ತು ಕರೊನಾ ಸೊಂಕಿತರು ಹಾಗೂ 80 ವರ್ಷ ಮೆಲ್ಪಟ್ಟ ವಯೋವೃದ್ದರಿಗೆ ಪೋಸ್ಟಲ್ ಬ್ಯಾಲೇಟ್ ಮಾತದಾನಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ತಿಳಿಸಿದರು.
ಕ್ಷೇತ್ರದ ಪ್ರತಿಯೊಬ್ಬ ಮತದಾರರು ಮತಗಟ್ಟೆಗೆ ಬಂದು ಮತದಾನ ಮಾಡಬೇಕು. ಮತದಾನಕ್ಕೆ ಬರುವಾಗ ಕಡ್ಡಾಯವಾಗಿ ಮಾಸ್ಕ ಧರಿಸಿರಬೇಕು ಎಂದು ತಿಳಿಸಿದರು.
ಸಾರ್ವಜನಿಕರಲ್ಲಿ ಮತ್ತು ತಮ್ಮ ತಮ್ಮ ಮನೆಗಳಲ್ಲಿ ಇರುವವರಿಗೆ ಈ ಬಗ್ಗೆ ತಿಳಿ ಹೇಳುವಂತೆ ಮಕ್ಕಳಿಗೆ ರಾಜಶೇಖರ ಡಂಬಳ ತಿಳಿಸಿದರು.
ಪಟ್ಟಣದ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಜೋಗಿನ್ ರಾಮಣ್ಣ ಸ್ಮಾರಕ ಪ್ರೌಢಶಾಲೆಯ ವಿದ್ಯಾರ್ಥಿಗಳು ಮತ್ತು ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿ ಮತದಾನದ ಜಾಗೃತಿ ಜಾಥ ನಡೆಸಿದರು.
ತಾ.ಪಂ.ಇಒ ಬಾಬು ರಾಠೋಡ, ತಹಸೀಲ್ದಾರ ಮಹೇಂದ್ರ ಕೆ.ಎಚ್. ಮುಖ್ಯಗುರು ಬಸಪ್ಪ ತನಿಕೆದಾರ, ಸಿ.ಎ.ಮೇಟಿ ಹಾಗೂ ಇತರರು ಇದ್ದರು.