ಸುಖದ ಸುರಿಗಿ
ಸಂಜೆ ಸರಿಯಿತು ಇರುಳ ಮುಂದೆ
ನಿನ್ನ ಒಲವ ಸೆಳೆಯಿತು.! ಪ!
ರಾತ್ರಿ ತಾರೆ ಕಣ್ಣು ತೆರೆದು
ನಮ್ಮ ಪ್ರಣಯ ನೋಡಿತು!!
ಸುಖದ ಸುರಿಗೆ ಸುತ್ತಿ ಬಂದು
ಸುರಿಗಿ ನೀರು ಚಿಮ್ಮಿತು.
ಹೊಸದು ಬದುಕು ಹೊಸೆದು ಬಂದು
ಹೊಸಲಿ ಒಳಗೆ ನಿಂತಿತು….
ಮಿಲನವೊಂದು ಸಲಿಗೆ ಬೆಳಸಿ.
ಮನದ ಹೂವು ಅರಳಿತು.
ಹೃದಯ ಮಾತು ಹಾಡಿ ಬಂದು
ಬದುಕ ಗೀತೆ ಬರೆಯಿತು…
ಮೊದಲ ಇರುಳು ಬದುಕ ನೆರಳು
ಒಲವ ಬೇರು ಇಳಿಯಿತು.
ಹಸಿರು ಚಿಮ್ಮಿ ಹೂವು ಅರಳಿ
ಭಾವ ಮರವು ಬೆಳೆಯಿತು….
–ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ