ಮಸ್ಕಿ ಉಪಚುನಾವಣೆ 10 ಅಭ್ಯರ್ಥಿಗಳಿಂದ 13 ನಾಮಪತ್ರ ಸಲ್ಲಿಕೆ ಎಲ್ಲವೂ ಸಿಂಧು-ರಾಜಶೇಖರ ಡಂಬಳ


e-ಸುದ್ದಿ, ಮಸ್ಕಿ
ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಮಾ.30 ಮಂಗಳವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಗಿತ್ತು. ಒಟ್ಟು 10 ಅಭ್ಯರ್ಥಿಗಳಿಂದ 13 ನಾಮಪತ್ರಗಳು ಸಲ್ಲಿಕೆಯಾಗಿದ್ದು ಎಲ್ಲವು ಸಿಂಧುವಾಗಿವೆ ಯಾವುದೇ ನಾಮಪತ್ರ ತಿರಸ್ಕøತವಾಗಿಲ್ಲ ಎಂದು ಚುನಾವಣಾಧಿಕಾರಿಯಾದ ಎಸಿ ರಾಜಶೇಖರ ಡಂಬಳ ಬುಧವಾರ ತಿಳಿಸಿದ್ದಾರೆ.
ಬಿಜೆಪಿಯಿಂದ ಪ್ರತಾಪಗೌಡ ಪಾಟೀಲ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನಿಂದ ಬಸನಗೌಡ, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಓಬಳೇಶಪ್ಪ ಬಿ.ಟಿ. ಬೆಂಗಳೂರು, ಪಕ್ಷೇತರ ಅಭ್ಯರ್ಥಿಗಳಾಗಿ ಅಮರೇಶ ಉಪ್ಪ¯ದೊಡ್ಡಿ, ಈಶಪ್ಪ ಹಿರೇಬೇರ್ಗಿ, ಚಕ್ರವರ್ತಿ ನಾಯಕ.ಟಿ.ಅಣ್ಣುರು ಗೌರಮ್ಮ ಕ್ಯಾಂಪ್ ಆನೆಗುಂದಿ, ದೀಪಿಕಾ.ಎಸ್.ಬೆಂಗಳೂರು, ಬಸನಗೌಡ ತೀರ್ಥಭಾವಿ, ಶ್ರೀನಿವಾಸ ನಾಯಕ ಕೊಳಬಾಳ, ಸಿದ್ಧಲಿಂಗಪ್ಪ ತುರ್ವಿಹಾಳ ನಾಮಪತ್ರ ಸಲ್ಲಿಸಿದ್ದಾರೆ.
ಅಣ್ಣ ತಮ್ಮ ನಾಮಪತ್ರ ಸಲ್ಲಿಕೆ ಃ ಕಾಂಗ್ರೆಸ್ ನಿಂದ ನಾಮಪತ್ರ ಸಲ್ಲಿಸಿರುವ ಬಸನಗೌಡ ತುರ್ವಿಹಾಳ ಸಹೋದರ ಸಿದ್ದಲಿಂಗಪ್ಪ ತುರ್ವಿಹಾಳ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಮಹಿಳೆ ಕಣಕ್ಕೆ ಃ ಮಸ್ಕಿ ಕ್ಷೇತ್ರದ ಉಪಚುನಾವಣೆಗೆ ಈ ಬಾರಿ ಬೆಂಗಳೂರಿನ ಮಹಿಳಾ ಅಭ್ಯರ್ಥಿಯೊಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ದೀಪಿಕಾ ಎಸ್ ಎನ್ನುವ ಮಹಿಳೆ ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಒಟ್ಟು 10 ಜನ ಅಭ್ಯರ್ಥಿಗಳಲ್ಲಿ ಏಕೈಕ ಮಹಿಳಾ ಅಭ್ಯರ್ಥಿ ಕಣಕ್ಕಿಳಿದಿರುವದು ವಿಶೇಷವಾಗಿದೆ.

 

Don`t copy text!