ನನ್ನನಲ್ಲ
ಎಲ್ಲರಂತವನಲ್ಲ
ನನ್ನ ನಲ್ಲ
ಮಾತು ಬೆಲ್ಲ
ನೋಟ ರಸಗುಲ್ಲ
ಕಣ್ಸನ್ನೆಯಲ್ಲೇ ಕದ್ದನಲ್ಲ
ಮನದಲ್ಲಿ ನೀಚತನವಿಲ್ಲ
ಬೇರೇನೂ ಬಯಸಲ್ಲ
ಪ್ರೀತಿಯೇ ಇವನಿಗೆ ಎಲ್ಲ
ಅಂಥವನ ನಾನೆಲ್ಲೂ ಕಂಡಿಲ್ಲ
ಕುಡಿನೋಟದಂಚಲ್ಲೇ ಮನ ಕದ್ದನಲ್ಲ
ಅಪರಂಜಿ ಹೃದಯದಲ್ಲೆಲ್ಲ
ಜೀವನ ಜೊತೆಗಾರನಾಗಬಲ್ಲ
ನನ್ನ ಪಿರುತಿಯ ನಲ್ಲ
ಎಲ್ಲರಂತೆ ಇವನಲ್ಲ
ನಾನಿವಗೆ ಶರಣೆಂದೆನಲ್ಲ
ತುಂಟನೋಟದಲೇ ಕೆಣಕುತಿಹನಲ್ಲ
ಒಂದೇ ಒಂದು ಸ್ಪರ್ಶದಲ್ಲೆ
ನಾ ನಾಚಿ ನೀರಾಗಿ ಹೋದೆನಲ್ಲ
ನನ ಹೆಸರ ಕರೆವಾಗಲೆಲ್ಲ
ಮತ್ತೆ ಮತ್ತೆ ಮನವೆಕೋ ಶರಣಾಗುತಿದೆಯಲ್ಲ
ನಿಸ್ವಾರ್ಥ ಸಲುಗೆಯ ನಲ್ಲ
ಅವನ ನನ್ನ ಮನ ಬಯಸುತಿದೆಯಲ್ಲ
ಎಲ್ಲರಂತೆ ಅವನಲ್ಲ
ನನ್ನ ಪಿರುತಿಯ ನಲ್ಲ
–ಶ್ರೀದೇವಿ ಹುಕ್ಕೇರಿ