ಏ.3ಕ್ಕೆ ನಳಿನಕುಮಾರ ಕಟೀಲು ಮಸ್ಕಿಗೆ ಆಗಮನ 2500 ಬೂತ್ ಅಧ್ಯಕ್ಷರ ಸಮಾವೇಶ- ಎನ್.ರವಿಕುಮಾರ

e-ಸುದ್ದಿ, ಮಸ್ಕಿ

ಏ.3. ಶನಿವಾರ ಬಿಜೆಪಿಯ ರಾಜ್ಯ ಅಧ್ಯಕ್ಷ ನಳಿನಕುಮಾರ ಕಟೀಲು ಮಸ್ಕಿಗೆ ಆಗಮಿಸಿ 300ಕ್ಕೂ ಹೆಚ್ಚು ಬೂತ್ ಅಧ್ಯಕ್ಷರು ಹಾಗೂ 2500 ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ಹೇಳಿದರು.
ಪಟ್ಟಣದ ಬಸವೇಶ್ವರ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಈಗಾಗಲೇ ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಚಾರ್ಯ ಕಾರ್ಯ ನಡೆಸಿದ್ದಾರೆ. ಎರಡು ತಂಡಗಳಲ್ಲಿ ಮುಖಂಡರು ಪ್ರಚಾರ್ಯಕಾರ್ಯದಲ್ಲಿ ನಿರತರಾಗಿದ್ದಾರೆ. ಬೂತ್ ಅಧ್ಯಕ್ಷರ ಸಮಾವೇಶವನ್ನು ಬಿಜೆಪಿ ಕಚೇರಿಯ ಆವರಣದಲ್ಲಿ ನಡೆಸಲಾಗುವುದು ಎಂದರು.
ಏ.6 ಬಿಜೆಪಿಯ ಸಂಸ್ಥಾಪನ ದಿನವಾಗಿದ್ದು ಬೂತ್ ಅಧ್ಯಕ್ಷರು, 47 ಶಕ್ತಿ ಕೇಂದ್ರದ ಅಧ್ಯಕ್ಷರು, 16 ಮಹಾಶಕ್ತಿ ಕೇಂದ್ರದ ಅಧ್ಯಕ್ಷರ ಮನೆ ಮೇಲೆ ಬಿಜೆಪಿಯ ಧ್ವಜ ಹಾರಲಿದೆ. ಪ್ರತಿಯೊಂದು ಅಧ್ಯಕ್ಷರ ಮನೆ ಮೇಲೆ ಧ್ವಜಹಾರಿಸುವಾಗ 50 ರಿಂದ 100 ಜನ ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ಮಸ್ಕಿ ಕ್ಷೇತ್ರದಲ್ಲಿ 2 ಲಕ್ಷ 7 ಸಾವಿರ ಮತದಾರರಿದ್ದು 50 ಸಾವಿರ ಕುಟುಂಬಗಳಿವೆ. ಚುನಾವಣೆ ಮುಗಿಯುವದರೊಳಗಾಗಿ ಬಿಜೆಪಿ ಕಾರ್ಯಕರ್ತರು 3 ಬಾರಿ ಮನೆಗಳಿಗೆ ಭೇಟಿ ನೀಡಿ ಬಿಜೆಪಿಯ ಸಾಧನೆಗಳನ್ನು ತಿಳಿಸುತ್ತರೆ ಎಂದರು.
ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಮಸ್ಕಿ ಕ್ಷೇತ್ರದಲ್ಲಿ ಏ.11 ಮತ್ತು 12 ರಂದು ವಾಸ್ತವ್ಯ ಹೂಡಲಿದ್ದು 5 ಜಿಲ್ಲಾ ಪಂಚಾಯತಿಗಳಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸುವರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಏ.5-6 ರಂದು ಮಸ್ಕಿಗೆ ಆಗಮಿಸಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕುರಿ ಮತ್ತು ಹುಣ್ಣಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ, ಕೆಪಿಟಿಸಿಎಲ್ ಅಧ್ಯಕ್ಷ, ತಮ್ಮೇಶಗೌಡ, ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ, ಪ್ರಾಣೇಶ ದೇಶಪಾಂಡೆ, ಶರಣಬಸವ ಎಸ್.ಸಿ.ಜಿಲ್ಲಾ ಅಧ್ಯಕ್ಷ, ಮಂಡಲ ಕಾರ್ಯದರ್ಶಿ ಶರಣಯ್ಯ ಸೊಪ್ಪಿಮಠ, ಮಲ್ಲು ಯಾದವ್, ನಾಗರಾಜ ಯಂಬಲದ, ಮಲ್ಲಪ್ಪ ಅಂಕುಶದೊಡ್ಡಿ ಹಾಗೂ ಇತರರು ಇದ್ದರು.
———————————

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ಯ ಸಚಿವ ಕೆ.ಎಸ್.ಈಶ್ವರಪ್ಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಅಸಮಾದಾನಗೊಂಡಿರುವದನ್ನು ಪಕ್ಷದ ಮುಖಂಡರು ಸರಿಪಡಿಸುತ್ತಾರೆ. ಉಪಚುನಾವಣೆಯಲ್ಲಿ ಯಾವುದೆ ಪರಿಣಾಮ ಬೀರುವುದಿಲ್ಲ ಎಂದು ಎ.ಎನ್.ರವಿಕುಮಾರ ಹೇಳಿದರು.
ಬಿಜೆಪಿಗೆ ಅಲ್ಪಸಂಖ್ಯಾತರು ಮತ್ತು ದಲಿತರು ಮುಖ್ಯವಾಗಿದ್ದು ಅವರನ್ನು ಕಡೆಗಣಿಸುತ್ತಿಲ್ಲ. ಅವರನ್ನು ಮತಗಟ್ಟೆ ಕರೆತಂದು ಮತ ಚಲಾಯಿಸುವಂತೆ ನಮ್ಮ ಕಾರ್ಯಕರ್ತರು ಶ್ರಮಿಸಲಿದ್ದಾರೆ. ಕ್ಷೇತ್ರದಲ್ಲಿ ಹಲವರು ಸಣ್ಣ ಪುಟ್ಟ ವಿಷಯಗಳಿಗೆ ಭಿನ್ನಾಭಿಪ್ರಾಯ ಇರಬಹುದು ಅವುಗಳನ್ನು ಸರಿಪಡಿಸಲಾಗುತ್ತದೆ ಎಂದು ಎನ್.ರವಿಕುಮಾರ ಸ್ಪಷ್ಟಪಡಿಸಿದರು.

Don`t copy text!