e-ಸುದ್ದಿ, ಮಸ್ಕಿ
ಬೇಸಿಗೆ ಬಿರುಬಿಸಲಿಗೆ ಕ್ಷಣ ಕ್ಷಣಕ್ಕೂ ಬಾಯಾರಿಕೆ ಸಹಜವೆಂಬಂತಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಪಟ್ಟಣದಲ್ಲಿ ಇತ್ತಿಚೀಗೆ ಅಸ್ಥಿತ್ವಕ್ಕೆ ಬಂದ ಶ್ರೀಸ್ವಾಮಿ ವಿವೇಕಾನಂದ ಜೀವನಿಧಿ ಟ್ರಸ್ಟ್‍ನ ಪದಾಧಿಕಾರಿಗಳು ಅರವಟಿಗೆ ಆರಂಭಿಸುವ ಮೂಲಕ ಸಮಾಜಮುಖಿ ಕೆಲಸಕ್ಕೆ ಕೈ ಹಾಕಿದ್ದಾರೆ.
ಪಟ್ಟಣದ ಹಳೇ ಬಸ್‍ನಿಲ್ದಾಣದ ಬಳಿ ಗುರುವಾರ ಅರವಟಿಗೆಯನ್ನು ಗಚ್ಚಿನ ಹಿರೇಮಠದ ಶ್ರೀವರರುದ್ರಮುನಿ ಶಿವಾಚಾರ್ಯರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಮನುಷ್ಯನಿಗೆ ಆಹಾರದಷ್ಟೆ ನೀರು ಮುಖ್ಯ. ಬೇಸಿಗೆಯಲ್ಲಿ ನೀರು ಮುಖ್ಯವಾಗಿದ್ದು ಸ್ವಾಮಿ ವಿವೇಕಾನಂದ ಸಂಸ್ಥೆಯವರು ನೀರು ಕೊಡುವ ಪುಣ್ಯದ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿ.ಪಂ.ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಸಂಸ್ಥೆಯ ಅಧ್ಯಕ್ಷೆ ಭಾರತಿ ಗುಡದೂರು, ವೀರೇಶ ಪಾಟೀಲ, ದಾವಲ್‍ಸಾಬ ಮುದ್ದಾಪೂರು, ಶರಣಬಸವ, ಮಂಜುನಾಥ, ಕೃಷ್ಣ ಬಡಿಗೇರ್, ಶ್ರೀನಿವಾಸ ವಡಕಿ, ನಾಗರಾಜ, ವೆಂಕಟೇಶ ಹಾಗೂ ಇತರರು ಭಾಗವಹಿಸಿದ್ದರು.