ದೇವನಾಂಪ್ರಿಯ ಅಶೋಕ ಸರ್ಕಾರಿ ಕಾಲೇಜಿನಲ್ಲಿ ಪಕ್ಷಿಗಳಿಗೆ ನೀರಿನ ಅರವಟಿಗೆ

e-ಸುದ್ದಿ, ಮಸ್ಕಿ
ಬೇಸಿಗೆಯಲ್ಲಿ ಮನುಷ್ಯರಿಗೆ ಕುಡಿಯುವ ನೀರಿನ ಅರವಟಿಗೆ ಕೇಂದ್ರ ತೆರೆಯುವದನ್ನು ನೋಡಿದ್ದೇವೆ. ಪಟ್ಟಣದ ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಪದಾಧಿಕಾರಿಗಳು ಪಕ್ಷಗಳಿಗಾಗಿ ಅರವಟಿಗೆ ಆರಂಭಿಸುವ ಮೂಲಕ ಜೀವ ಸಂಕುಲದ ಉಳಿವಿಗಾಗಿ ಪಣ ತೊಟ್ಟಿದ್ದಾರೆ.
ಪಟ್ಟಣದ ಮುದಗಲ್ ರಸ್ತೆಯಲ್ಲಿರುವ ದೇವನಾಂಪ್ರಿಯ ಅಶೋಕ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ಗಿಡಗಳಿಗೆ ನೀರಿನ ಬಾಟಲಿ ಕಟ್ಟಿ ಪ್ರಚಾರ್ಯ ಪಂಪನಗೌಡ ಗುರಿಕಾರ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಬೇಸಿಗೆಯಲ್ಲಿ ನೀರಿಗಾಗಿ ಪಕ್ಷಿಗಳು ಅಲೆಯುತ್ತವೆ. ಅವುಗಳು ವಾಸಿವಲ್ಲಿ ನೀರಿನ ಸಂಗ್ರಹ ಮಾಡಿದರೆ ಅನುಕೂಲವಾಗುತ್ತದೆ ಎಂದರು.
ಅಭಿನಂದನ್ ಶಿಕ್ಷಣ ಹಾಗೂ ಗ್ರಾಮಿಣಾಭಿವೃದ್ದಿ ಸಂಸ್ಥೆಯ ಕಾರ್ಯದರ್ಶಿ ರಾಮಣ್ಣ ಹಂಪರಗುಂದಿ, ಪುರಸಭೆಯ ಆರೋಗ್ಯಾಧಿಕಾರಿ ನಾಗರಾಜ, ಪ್ರಾಧ್ಯಾಪಕ ರಮೇಶ ಮಾಳಗಿ, ಕನ್ಯಾಕುಮಾರಿ ಹಾಗೂ ಇತರರು ಭಾಗವಹಿಸಿದ್ದರು.

Don`t copy text!