e-ಸುದ್ದಿ, ಮಸ್ಕಿ
ದಲಿತ ಸಮುದಾಯದ ಮತದಾರರು ಪ್ರತಾಪಗೌಡ ಪಾಟೀಲ ಅವರ ಜಯಕ್ಕೆ ಪಣ ತೊಟ್ಟಿದ್ದಾರೆ. ಪ್ರತಾಪಗೌಡ ಪಾಟೀಲ ಗೆದ್ದೇಗೆಲ್ಲುತ್ತಾರೆ ಎಂದು ಕನಕಗಿರಿ ಶಾಸಕ ಬಸವರಾಜ ದಢೇಸುಗೂರು ಹೇಳಿದರು.
ಪಟ್ಟಣದ ಖಾಸಗಿ ಹೊಟೇಲ್‍ನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ ನಮ್ಮದೇ ಸಮುದಯದ ಮುಖಂಡರು ಅವರ ಪಕ್ಷಕ್ಕೆ ಮತ ಕೇಳಲಿ ಅದು ಅವರ ಹಕ್ಕು. ಅದು ಬಿಟ್ಟು ಎಲ್ಲಾ ದಲಿತರು ಬಿಜೆಪಿಗೆ ಮತ ಹಾಕಬೇಡಿ ಎಂದು ಹೇಳುವದು ಅವರ ಹಿರಿತನಕ್ಕೆ ಗೌರವ ತರುವುದಿಲ್ಲ ಎಂದು ಹನುಮಂತಪ್ಪ ಆಲ್ಕೋಡ್ ಅವರನ್ನು ಬಸವರಾಜ ದಢೆಸುಗೂರು ಟೀಕಿಸಿದರು.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಎಲ್ಲಾ ಸಮುದಾಯದವರನ್ನು ಅಪ್ಪಿಕೊಂಡು ಒಳ್ಳೆಯ ಯೋಜನೆ ರೂಪಿಸಿ ಕರ್ನಾಟಕವನ್ನು ಅಭಿವೃದ್ದಿಯತ್ತ ಸಾಗುವಂತೆ ಮಾಡುತ್ತಿದ್ದಾರೆ. ಅವರನ್ನು ಬೆಂಬಲಿಸುವುದು ಮುಖ್ಯವಾಗಿದ್ದು ದಲಿತರು ಬಿಜೆಪಿ ಪರವಾಗಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ತುಂಗಭದ್ರ ಅಚ್ಚುಕಟ್ಟು ಪ್ರದೇಶದಲ್ಲಿ ಒಂದೇ ಬೇಳೆಗೆ ಸೀಮಿತವಾಗಿತ್ತು. ಯಡಿಯೂರಪ್ಪ ಸರ್ಕಾರ ಬಂದ ಮೇಲೆ ಎರಡು ಬೇಳೆಗೆ ನೀರು ಕೊಡುವ ಕೆಲಸ ಮಾಡಿದ್ದಾರೆ. ಇದರಿಂದ ಮುಖ್ಯಮಂತ್ರಿ ಯಡಿಯೂರಪ್ಪನವರು ಮೊದಲಿನಿಂದಲು ರೈತರ ಪರವಾಗಿ ಇದ್ದಾರೆ.
ಅಕ್ರಮ ನೀರಾವರಿ ಮಾಡಿದವರು ರೈತರೇ ಅದರಲ್ಲಿ ರಾಜಕೀಯ ಮಾಡಲಾರೆ ಅಧಿಕಾರಿಗಳು ಕೊನೆಯ ಭಾಗದ ರೈತರಿಗೂ ನೀರು ಕೊಡುವ ಕೆಲಸ ಮಾಡುವಂತೆ ಮುಖ್ಯಮಂತ್ರಿಗಳು ಕಟ್ಟು ನಿಟ್ಟಿನ ಆದೇಶ ನೀಡಿದ್ದಾರೆ ಎಂದು ಬಸವರಾಜ ದಢೇಸುಗೂರು ತಿಳಿಸಿದರು.
ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ದುರರುಗಪ್ಪ ಗುಡಗಲದಿನ್ನಿ, ಪುರಸಭೆ ಮಾಜಿ ಅಧ್ಯಕ್ಷ ಮೌನೇಶ ಮುರಾರಿ, ತಿಕ್ಕಯ್ಯ ಬಳಗಾನೂರು, ಮೌನೇಶ ತುಗ್ಗಲದಿನ್ನಿ, ಬಾಲಸ್ವಾಮಿ ಜಿನ್ನಾಪುರ, ಮಲ್ಲಪ್ಪ ನಾಗರಬೆಂಚಿ, ಹನುಂತಪ್ಪ ಪರಾಪುರ ಹಾಗೂ ಇತರರು ಇದ್ದರು.